ಸುದ್ದಿಮೂಲ ವಾರ್ತೆ ರಾಯಚೂರು, ಜ.31:
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆೆ ಹಾಗೂ ಹಕ್ಕು ಸ್ವರೂಪ ತೆಗೆದುಹಾಕಿ ಕೇವಲ ಸರ್ಕಾರದ ಅಣತಿಯ ಯೋಜನೆಯಾಗಿ ಬದಲಾಯಿಸಿ ರುವುದನ್ನು ಖಂಡಿಸಿ ಸಿಪಿಎಂನಿಂದ ಪ್ರತಿಭಟನೆ ಹಮ್ಮಿಿಕೊಳ್ಳಲಾಗಿತ್ತು.
ನಗರದ ಟಿಪ್ಪುು ಸುಲ್ತಾಾನ ಉದ್ಯಾಾನವನದಲ್ಲಿ ಪಕ್ಷದ ನೇತೃತ್ವದಲ್ಲಿ ಪದಾಧಿಕಾರಿಗಳು, ಮುಖಂಡರು ಪ್ರತಿಭಟನೆ ನಡೆಸಿ ಸ್ಥಾಾನಿಕ ಅಧಿಕಾರಿ ಮೂಲಕ ಪ್ರಧಾನಮಂತ್ರಿಿಗೆ ಮನವಿ ಸಲ್ಲಿಸಿದರು. 2004-2005ರಲ್ಲಿ ಎಡಪಕ್ಷಗಳ ಬೆಂಬಲದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಉದ್ಯೋೋಗ ಖಾತ್ರಿಿ ಕಾಯ್ದೆೆ ಜಾರಿಗೊಳಿಸಿ ಗ್ರಾಾಮೀಣ ಕೃಷಿ ಕೂಲಿಕಾರರು, ಬಡ ರೈತರು ಹಾಗೂ ದುಡಿಮೆಗಾರರಲ್ಲಿ ಶೇ.30 ರಷ್ಟು ಜನ ತಮ್ಮ ಜೀವನೋಪಯಕ್ಕಾಾಗಿ ಅವಲಂಬನೆಯಾಗಿತ್ತು.
ಆದರೆ ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆೆ ಹಾಗೂ ಹಕ್ಕು ಸ್ವರೂಪವನ್ನು ತೆಗೆದುಹಾಕಿ ವಿಕಸಿತ ಭಾರತ ರೋಜ್ಗಾರ ಮತ್ತು ಆಜೀವಿಕ ಮಿಷನ್ ಗ್ರಾಾಮೀಣ ಖಾತ್ರಿಿ ಬಿ ಗ್ರಾಾಮ್ಜಿ ಕಾಯ್ದೆೆ ಜಾರಿಗೊಳಿಸಿ ಕೂಲಿಕಾರರ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ ಎಂದು ದೂರಿದರು.
ರೈತರ ಋತುವಿನ ಸಂದರ್ಭದಲ್ಲಿ 60 ದಿನಗಳ ಕೆಲಸ ನಿರ್ಭಂದಿಸಿದನ್ನು ನೋಡಿದರೆ 125 ದಿನಗಳ ಕೆಲಸ ಸಿಗುವುದಿಲ್ಲ ಮತ್ತು ಕೆಲಸದಿಂದ ವಂಚಿತರಾಗುತ್ತಾಾರೆ. ಅಲ್ಲದೆ, ಕೇಂದ್ರ ಶೇ.60 ರಾಜ್ಯ ಸರ್ಕಾರ 40 ರಷ್ಟು ಮೊತ್ತ ವೆಚ್ಚದ ನಿಯಮ ಅವೈಜ್ಞಾನಿಕವಾಗಿದೆ.
ಯಂತ್ರಗಳನ್ನು ಬಳಸಬಾರದು, ಮಾನವ ದಿನಗಳ ಮೂಲಕ ಉದ್ಯೋೋಗ ಸೃಷ್ಠಿಿಸಲು ಕಾನೂನು ಇತ್ತು. ಈಗ ಈ ಹೊಸ ಕಾಯ್ದೆೆಯಲ್ಲಿ ಯಂತ್ರ ಬಳಸಿ ಗುತ್ತಿಿಗೆದಾರರಿಗೆ ಅನುಕೂಲ ಮಾಡಿಕೊಡುವ ಅಂಶಗಳು ಒಳಗೊಂಡಿದೆ. ಅದ್ದರಿಂದ ಕೂಲಿಕಾರರಿಗೆ ಕೂಲಿ ದಿನಗಳು ಸಿಗದಂತೆ ಆಗುತ್ತದೆ. ಗುತ್ತಿಿಗೆದಾರರಿಗೆ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರ ಅಧಿಸೂಚಿತ ರಾಜ್ಯ ಮತ್ತು ಜಿಲ್ಲೆೆಗಳಲ್ಲಿ ಮಾತ್ರವೇ ಉದ್ಯೋೋಗ ಖಾತರಿ ಜಾರಿ ಎಂಬ ಅಂಶಗಳು ಕೂಲಿಕಾರರ ಹಕ್ಕನ್ನು ಕಸಿದುಕೊಳ್ಳಲಿದೆ.ಇಂತಹ ಹಲವು ತಪ್ಪುು ಅಂಶಗಳಿದ್ದು 2025ರ ಕಾಯ್ದೆೆ ಬದಲಾಯಿಸುವುದನ್ನು ಕೈ ಬಿಟ್ಟು ಮುಂದುವರೆಸಲ ಒತ್ತಾಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಾ ಕಾರ್ಯದರ್ಶಿ ಕೆ.ಜಿ.ವೀರೇಶ, ಎಚ್.ಪದ್ಮಾಾಘಿ, ಶ್ರೀಧರ, ಡಿಎಸ್.ಶರಣಬಸವ, ಹೆಚ್.ಶರ್ುದ್ದೀನ್, ಹನುಮಂತ ಮಟಮಾರಿ, ಸತ್ಯಪ್ಪಘಿ, ವರಲಕ್ಷ್ಮೀಘಿ, ಮಹಾದೇವಿ, ಸುಜಾತಾ, ನರಸಮ್ಮಘಿ, ಸರೋಜಮ್ಮಘಿ, ರಂಗಮ್ಮಘಿ, ಮಹಾಂತಗೌಡ ಇತರರಿದ್ದರು.
ಸಿಪಿಎಂನಿಂದ ಪ್ರತಿಭಟನೆ ವಿಬಿ ಜಿ ರಾಮ್ಜಿ ಕಾಯಿದೆ ಹಿಂಪಡೆಯಲು ಒತ್ತಾಯ

