ಸುದ್ದಿಮೂಲ ವಾರ್ತೆ ರಾಯಚೂರು, ಜ.31:
ಶಾಲೆಯ ಕಟ್ಟಡದ ಹೊರ ನೋಟಕ್ಕೆೆ ಪಾಲಕರು ಆಕರ್ಷಣೆಗೊಳ್ಳದೆ ಶಾಲೆಯೊಳಗೆ ಕೊಡುವ ಸಂಸ್ಕಾಾರ ,ಜ್ಞಾನಾರ್ಜನೆ ಬಗ್ಗೆೆ ಗಮನ ಕೊಡಬೇಕು ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಇಂದಿರಾ ಸಲಹೆ ನೀಡಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಹಲೋ ಕಿಡ್ಸ್ ಹಾಗೂ ರೇನ್ಬೋೋ ಶಾಲೆಯ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಮಕ್ಕಳಿಗೆ ಅಕ್ಕ ಪಕ್ಕ ಮನೆಯವರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ ಅವರವರ ಸಾಮರ್ಥ್ಯಕ್ಕೆೆ ಅನುಗುಣವಾಗಿ ಕಲಿಕೆಯಲ್ಲಿ ತೊಡಗಿರುತ್ತಾಾರೆ. ಪಾಲಕರಾದವರು, ಶಿಕ್ಷಕರಾದವರು ಮಕ್ಕಳ ಬೆಳವಣಿಗೆಗೆ ಸಹಕಾರ ಕೊಡಬೇಕಾಗಿದೆ ಅವರನ್ನು ತೆಗಳದೆ ಅವರ ಬೆಳವಣಿಗೆಗಳ ಸಹಕಾರ ನೀಡಿದಾಗ ಮಾತ್ರ ಮಕ್ಕಳು ಉತ್ತಮ ಜ್ಞಾನವಂತರಾಗಲು ಸಾಧ್ಯವಾಗುತ್ತದೆ. ಜ್ಞಾನಾರ್ಜನೆಯೊಂದಿಗೆ ಮಕ್ಕಳಿಗೆ ಸಂಸ್ಕಾಾರವು ಜೀವನದಲ್ಲಿ ಅತಿ ಪ್ರಮುಖವಾದ ಪಾತ್ರ ವಹಿಸುತ್ತದೆ ಎಂದರು.
ಮನೆಯಲ್ಲಿ ಕುಟುಂಬದ ಸರ್ವ ಸದಸ್ಯರೊಂದಿಗೆ ಅಪ್ಪ-ಅಮ್ಮ ತಾತ ಅಜ್ಜಿಿ ಅವರೊಂದಿಗೆ ಗೌರವದಿಂದ ನಡೆದುಕೊಳ್ಳುವುದೇ ಸಂಸ್ಕಾಾರ, ಅದು ಮಕ್ಕಳು ಪಡೆದರೆ ಉತ್ತಮ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಗುರುಗಳಾದ ಹಿಮಬಿಂದು ಬೆಲ್ಲಂ ಶಾಲೆಯ ವಾರ್ಷಿಕ ವರದಿ ಮಂಡಿಸಿದರು. ಬೆಲ್ಲಂ ಶಿಕ್ಷಣ ಸಂಸ್ಥೆೆಯ ಸಂಸ್ಥಾಾಪಕರಾದ ರಾಜೇಶ್ ಬೆಲ್ಲಂ, ಯೋಗ ಶಿಕ್ಷಕ ಮಲ್ಲಿಕಾರ್ಜುನ ಸ್ವಾಾಮಿ, ಶಿಕ್ಷಕಿಯರಾದ ಶೀತಲ್ ಶೋತ್ರಿಿಯ, ಅನಿತಾ, ಪಾಲಕರು ವಿದ್ಯಾಾರ್ಥಿಗಳಿದ್ದರು.
ಶಾಲೆ ಕಟ್ಟಡ ನೋಡಿ ಆಕರ್ಷಿತರಾಗದಿರಿ ಸಂಸ್ಕಾರದ ಕಡೆ ಗಮನ ಕೊಡಿ – ಆರ್.ಇಂದಿರಾ

