ಸುದ್ದಿಮೂಲ ವಾರ್ತೆ ಲಿಂಗಸುಗೂರು, ೆ.1:
ಸೃಷ್ಠಿಿ ಉಗಮದಿಂದಲೇ ಸನಾತನ ಹಿಂದು ಧರ್ಮ, ಸಂಸ್ಕೃತಿ ಉಗಮವಾಗಿದೆ. ಈ ಸೃಷ್ಟಿಿ ಇರುವವರೆಗೆ ಯಾರಿಂದಲೂ ಸನಾತನ ಹಿಂದು ಧರ್ಮ ಅಳಿಸಲು ಸಾಧ್ಯವಿಲ್ಲ ಎಂದು ಧರ್ಮ ಜಾಗರಣಾ ಮಂಚ್ನ ಪ್ರಾಾಂತ ಪ್ರಚಾರಕ ದತ್ತಾಾತ್ರೇಯ ನಾಯಕ ಹೇಳಿದರು.
ಪಟ್ಟಣದ ದೊಡ್ಡ ಹನುಮಂತ ದೇವಸ್ಥಾಾನ ಬಳಿ ಹಿಂದೂ ಸಮಾವೇಶ ಉದ್ಘಾಾಟಿಸಿ ಮಾತನಾಡಿದ ಅವರು ಸೃಷ್ಟಿಿಯು ಹುಟ್ಟಿಿದಾಗಿನಿಂದ ಹಿಂದೂ ಧರ್ಮ ಹೊರತುಪಡಿಸಿ ಉಳಿದೆಲ್ಲವೂ ಮತಗಳಾಗಿವೆ. ಯಹೂದಿ, ಇಸ್ಲಾಾಂ, ಕ್ರೈಸ್ತ ಈ ಮೂರು ಮತಗಳ ಉಗಮ ಒಂದೇ ಸ್ಥಳವಾಗಿದೆ. ಸೇವೆಯ ಮುಖವಾಡ ಧರಿಸಿ ತಮ್ಮ ಮತ ಹೇರಲು ಜಗತ್ತಿಿನ ಅನೇಕ ನಾಗರಿಕತೆಗಳನ್ನು ಮುಚ್ಚಿಿ ಹಾಕಿದರೂ ಭಾರತಕ್ಕೆೆ ಬಂದು ಆರು ನೂರು ವರ್ಷಗಳ ಕಾಲ ಆಳ್ವಿಿಕೆ ನಡೆಸಿದರೂ ಇಲ್ಲಿನ ನಾಗರಿಕತೆ, ಸಂಸ್ಕೃತಿ ಮುಚ್ಚಿಿ ಹಾಕಲು ಸಾಧ್ಯವಾಗಿಲ್ಲ. ಅಂದಿನ ಪೂರ್ವಜರ ಶ್ರಮದಿಂದ ಸುರಕ್ಷಿತರಾಗಿದ್ದೇವೆ.
ಹಿಂದೂ ಧರ್ಮಕ್ಕೆೆ ಕಂಟಕವಾದಾಗಲೊಮ್ಮೆೆ ಮಹಾನ್ ವ್ಯಕ್ತಿಿ ಹುಟ್ಟಿಿ ಬಂದು ಹಿಂದೂ ಧರ್ಮ ರಕ್ಷಣೆ ಮಾಡಿದ್ದಾಾರೆ ಸಿಡಿಲ ಸಂತ ಸ್ವಾಾಮಿ ವಿವೇಕಾನಂದರು ಜಗತ್ತಿಿನಾದ್ಯಂತ ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆೆ ಜಾಗೃತಿ ಮೂಡಿಸಿದರು. ವಿಜಯ ನಗರ ಸಾಮ್ರಾಾಜ್ಯ ನಂತರ ಛತ್ರಪತಿ ಶಿವಾಜಿ ಮಹಾರಾಜರು, ಅವರ ಮಗ ಸಂಭಾಜಿ ಮಹಾರಾಜರು ಹಿಂದುವಿ ಸ್ವರಾಜ್ಯವನ್ನೇ ಸ್ಥಾಾಪಿಸದಿದ್ದರೆ ಇಡೀ ದೇಶ ಇಸ್ಲಾಾಮಿಕರಣವಾಗುತ್ತಿಿತ್ತು. ಅದೇರೀತಿ ಮಹಾರಾಣಾ ಪ್ರತಾಪಸಿಂಹರು, ಗುರುಗೋವಿಂದರು, ತೇಜಬಹಾದ್ದೂರು ಸೇರಿ ಅನೇಕ ರಾಜ ಮಹಾರಾಜರು ಹಿಂದೂ ಧರ್ಮ ಉಳಿಸಿ ಬೆಳೆಸುವಲ್ಲಿ ತ್ಯಾಾಗ ಬಲಿದಾನ ಮಾಡಿದ್ದಾಾರೆ.
ಆ.15 ರಂದು ಅಧಿಕಾರ ಹಸ್ತಾಾಂತರವಾಯಿತೇವಿನಹ ಸ್ವಾಾತಂತ್ರ್ಯ ದೊರೆತಿಲ್ಲ. ದೇಶದ ಸೌರಾಷ್ಟ್ರದ ಸೋಮನಾಥ ದೇವಸ್ಥಾಾನ ಜೀರ್ಣೋದ್ಧಾಾರಕ್ಕೆೆ ವಿರೋಧ, ಅಯೋಧ್ಯೆೆಯ ಶ್ರೀರಾಮ ಮಂದಿರ ನಿರ್ಮಿಸಲು 5ನೂರು ವರ್ಷ ಗತಿಸಿತು. ಹಿಂದುಗಳಲ್ಲಿ ಜಾಗೃತಿ ಮೂಡಿಸುವ ಉದ್ದೆೆಶದಿಂದ ಸಂಘದ ಶತಾಬ್ದಿಿ ವರ್ಷ ಅಂಗವಾಗಿ ಕುಟುಂಬ, ಪರ್ಯಾವರ್ಣ, ಸಾಮಾಜಿಕ ಸಾಮರಸ್ಯ, ನಾಗರಿಕ ಜವಬ್ದಾಾರಿ ಮತ್ತು ಸ್ವದೇಶಿ ಎಂಬ ಪಂಚ ಪರಿವರ್ತನ ಸಂಕಲ್ಪ ಅಭಿಯಾನ ನಡೆಸಲಾಗುತ್ತಿಿದೆ. ನಮ್ಮ ಭಾರತದ ಹಿರಿಮೆಯ ಹಿಂದೂ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾಾರಿ ದೇಶದ ಹಿಂದೂ ವಾಸಿಗಳ ಮೇಲಿದೆ ಎಂದರು.
ವೇದಿಕೆಯಲ್ಲಿ ಸಿದ್ಧಲಿಂಗ ಸ್ವಾಾಮೀಜಿ, ಮಹಾದೇವ ಸ್ವಾಾಮೀಜಿ, ನಂದಿಕೇಶ್ವರಿ ಮಾತಾ, ಎಂ.ಎಸ್.ಪಾಟೀಲ್, ಸುಮಂತ ಕನಕಗಿರಿ, ಶೋಭಾ ಕಾಟವಾ ಇದ್ದರು.
ಭಾರತೀಯ ಸನಾತನ ಹಿಂದೂ ಧರ್ಮ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ : ದತ್ತಾತ್ರೇಯ ನಾಯಕ

