ಸುದ್ದಿಮೂಲ ವಾರ್ತೆ ಗಬ್ಬೂರು, ೆ.02:
ಸರ್ಕಾರಗಳು ಮಾಡದಂಥ ಕಾರ್ಯಗಳನ್ನು ಮಠಮಾನ್ಯಗಳು ಮಾಡುತ್ತಿಿವೆ. ಗಬ್ಬೂರು ಶ್ರೀಬೂದಿಬಸವೇಶ್ವರ ಸಂಸ್ಥಾಾನಮಠಆಧ್ಯಾಾತ್ಮ, ತ್ರಿಿವಿಧ ದಾಸೋಹದ ಜತೆಗೆ ಸಮಾಜಮುಖಿ ಕಾರ್ಯದಿಂದ ಮಾದರಿಯಾಗಿದೆ ಎಂದು ಲೋಕಸೇವಾ ಆರೋಗದ ಅಧ್ಯಕ್ಷ ಶಿವಶಂಕ್ರಪ್ಪ ಸಾಹು ಹೇಳಿದರು.
ಗಬ್ಬೂರು ಶ್ರೀಬೂದಿಬಸವೇಶ್ವರ ಸಂಸ್ಥಾಾನ ಮಠದಲ್ಲಿ ಆಯೋಜಿಸಿದ್ದ ಜಾತ್ರಾಾ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಧರ್ಮಸಭೆ ಉದ್ಘಾಾಟಿಸಿ ಭಾನುವಾರ ಮಾತನಾಡಿದರು.
ನಾನು ಶ್ರೀಮಠದ ಶಿಕ್ಷಣ ಸಂಸ್ಥೆೆಯಲ್ಲಿ ಓದಿ ಬೆಳೆದಿದ್ದೇನೆ. ನನಗೆ ಉತ್ತಮ ಸಂಸ್ಕಾಾರ ನೀಡುವಜತೆಗೆ ಸಮಾಜದಲ್ಲಿ ಉನ್ನತಹುದ್ದೆೆ ಅಲಂಕರಿಸಲು ಆಶೀರ್ವದಿಸಿದೆ. ಶ್ರೀಮಠ ಈ ಭಾಗದ ಭೂಮಿ ಮೇಲಿನ ಕೈಲಾಸವಾಗಿದ್ದು ಭಕ್ತರ ಪಾಲಿನ ಕಾಮಧೇನುಕಲ್ಪವೃಕ್ಷವಾಗಿದೆ ಎಂದರು.
ಹೈಕೋರ್ಟ್ ನಿವೃತ್ತ ನ್ಯಾಾಯಮೂರ್ತಿ ಎನ್.ಕೆ.ಪಾಟೀಲ್ ಮಾತನಾಡಿ, ಗಬ್ಬೂರು ಸಂಸ್ಥಾಾನಮಠ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿ ಬಡವರ ಮನೆ ಬೆಳಗುವ ಜತೆಗೆ ಸಾಲಬಾಧೆ, ದುಂದುವೆಚ್ಚಕ್ಕೆೆ ಕಡಿವಾಣ ಹಾಕಿದೆ. ಅಧ್ಯಾಾತ್ಮ, ಬಡವರ ಮಕ್ಕಳಿಗೆ ಶಿಕ್ಷಣ, ವಸತಿ, ಸಂಸ್ಕೃತಿ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಾಗಿ ರೂಪಿಸುತ್ತಿಿವೆ. ಸರ್ಕಾರ ಮಾಡದಂಥಕಾರ್ಯವನ್ನು ಶ್ರೀಮಠ ಮಾಡುತ್ತಿಿದೆ.ಇದು ಎಲ್ಲ ಮಠಮಾನ್ಯಗಳಿಗೂ ಮಾದರಿ ಕಾರ್ಯವಾಗಿದೆ ಎಂದು ಹೇಳಿದರು.
ಪೀಠಾಧಿಪತಿ ಶ್ರೀಬೂದಿಬಸವ ಶಿವಾಚಾರ್ಯ ಸ್ವಾಾಮೀಜಿ ಸಾನ್ನಿಿಧ್ಯವಹಿಸಿದ್ದರು. ನವಲಕಲ್ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಾಮೀಜಿ, ಶ್ರೀಶಂಭು ಸೋಮನಾಥ ಶಿವಾಚಾರ್ಯ ಸ್ವಾಾಮೀಜಿ, ಶಿವಮೂರ್ತಿ ಶಿವಾಚಾರ್ಯ ಸ್ವಾಾಮೀಜಿ, ದೇವರಭೂಪುರ ದಗಜದಂಡ ಶಿವಾಚಾರ್ಯ ಸ್ವಾಾಮೀಜಿ, ಚನ್ನಬಸವ ಶಿವಾಚಾರ್ಯ ಸ್ವಾಾಮೀಜಿ, ಮಾಜಿ ಸಂದದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಾಗವಾಟ್, ಅರಕೇರಾ ತಹಸೀಲ್ದಾಾರ್ ಅಮರೇಶ ಬಿರಾದಾರ್, ಚನ್ನನಗೌಡ ಪೊಪಾ ಇತರರಿದ್ದರು.
ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕ್ರಪ್ಪ ಸಾಹು ಅಭಿಮತ ಗಬ್ಬೂರು ಸಂಸ್ಥಾನ ಕಾರ್ಯ ಸಮಾಜಕ್ಕೆ ಮಾದರಿ

