ಸುದ್ದಿಮೂಲ ವಾರ್ತೆ ಕವಿತಾಳ, ೆ.02:
ಸಮೀಪದ ಹಿರೇದಿನ್ನಿಿ ಗ್ರಾಾಮದ ಮಾವೂರು ಯಲ್ಲಮ್ಮ ದೇವಿ ಜಾತ್ರಾಾ ಮಹೋತ್ಸವದ ಅಂಗವಾಗಿ ಸೋಮವಾರ ಉಚ್ಚಾಾಯ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾಾನದಲ್ಲಿ ಯಲ್ಲಮ್ಮ ದೇವಿ ಮೂರ್ತಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಕುಂಕುಮಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಲಕ್ಷ್ಮಣ ಪೂಜಾರಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.
ಗಂಗಾ ಸ್ಥಳದಲ್ಲಿ ಪೂಜೆ ಸಲ್ಲಿಸಿ ಚಿಕ್ಕದಿನ್ನಿಿ ಯಲ್ಲಮ್ಮನ ಗದ್ದುಗೆಯಿಂದ ಹಿರೇದಿನ್ನಿಿ ಮಾವೂರು ಯಲ್ಲಮ್ಮನ ದೇವಸ್ಥಾಾನದವರೆಗೆ ಪಲ್ಲಕ್ಕಿಿಯಲ್ಲಿ ಯಲ್ಲಮ್ಮ ದೇವಿಯ ಮೂರ್ತಿಯ ಉತ್ಸವ ಬಾಜಾ ಭಜಂತ್ರಿಿ, ಡೊಳ್ಳು ವಾದ್ಯಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿದ ಭಕ್ತರು ದೀರ್ಘ ದಂಡನಮಸ್ಕಾಾರ ಹಾಕಿ ಹರಕೆ ತೀರಿಸಿದರು.
ಸಂಜೆ ಜರುಗಿದ ಉಚ್ಚಾಾಯ ಮಹೋತ್ಸವದಲ್ಲಿ ಹಿರೇದಿನ್ನಿಿ, ಚಿಕ್ಕದಿನ್ನಿಿ, ಮರಕಮದಿನ್ನಿಿ, ಮಲ್ಕಾಾಪುರು, ಮಲ್ಲದಗುಡ್ಡ, ತೋರಣದಿನ್ನಿಿ, ಬಸಾಪುರ, ಗೂಗೆಬಾಳ, ಹಾಲಾಪುರು ಸೇರಿದಂತೆ ಸುತ್ತಮುತ್ತಲಿನ ಗ್ರಾಾಮದ ಭಕ್ತರು ಪಾಲ್ಗೊೊಂಡಿದ್ದರು.
ಮಾವೂರು ಯಲ್ಲಮ್ಮ ದೇವಿ ಉಚ್ಚಾಯ ಮಹೋತ್ಸ ವ ಅದ್ಧೂರಿ

