ಸುದ್ದಿಮೂಲ ವಾರ್ತೆ ಬೀದರ್, ೆ.02:
ಗ್ರಾಾಮೀಣ ಪ್ರದೇಶದಲ್ಲಿ ಮನೋರಂಜನೆ ಮತ್ತು ಸಂಸ್ಕೃತಿ ಪೋಷಿಸುವ ಜಾನಪದ ಕಲೆ ಮತ್ತು ಸಾಹಿತ್ಯ ಉಳಿಸುವ ಕೆಲಸ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ಮಾತಾ ಲಕ್ಷ್ಮೀ ದೇವತೆ ಜಾತ್ರಾಾ ಮಹೋತ್ಸವ ಸಮಿತಿಯ ಅಧ್ಯಕ್ಷ ಅಡೆಪ್ಪಾಾ ಶೆರಿಕಾರ್ ಹೇಳಿದರು.
ಬೀದರ ತಾಲ್ಲೂಕಿನ ಸಿರ್ಸಿ (ಎ) ಗ್ರಾಾಮದ ಮಾತಾ ಲಕ್ಷ್ಮೀ ದೇವತೆ ಜಾತ್ರಾಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಕಲ್ಯಾಾಣ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಹಾಗೂ ಜಿಲ್ಲಾ ಟೋಕರೆ ಕೋಳಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಸಾಮಾನ್ಯ ಯೋಜನೆಯಡಿ ಆಯೋಜಿಸಿದ್ದ ಉದ್ಘಾಾಟನಾ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಾಮೀಣ ಭಾಗದಲ್ಲಿ ಹಿರಿಯರು ಮಾತನಾಡುವ ಮೂಲಕ, ಹಾಡು-ನೃತ್ಯ ಮೂಲಕ, ಸುಗ್ಗಿಿ ಕಲೆಯ ಮೂಲಕ ಜಾನಪದ ಕಲೆ ಮತ್ತು ಸಾಹಿತ್ಯ ಇನ್ನೂ ಉಳಿಸಿಕೊಂಡು ಬರುತ್ತಿಿದ್ದಾರೆ. ಈ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಪೋಷಿಸುವುದು ಅತ್ಯಂತ ಅಗತ್ಯ. ಜಾನಪದ ಕಲೆ ನಶಿಸುತ್ತಾಾ ಹೋದರೆ ಗ್ರಾಾಮೀಣ ಹಬ್ಬಗಳು, ಸಂತೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸೊಗಡು ಕಳೆದುಹೋಗುತ್ತದೆ. ಆದ್ದರಿಂದ ಸಂಘ ಸಂಸ್ಥೆೆಗಳು ಮತ್ತು ಸಮಿತಿಗಳು ಜಾನಪದ ಕಲೆ ಮತ್ತು ಸಾಹಿತ್ಯದ ಪ್ರದರ್ಶನ ಮತ್ತು ಪೋಷಣೆಯಲ್ಲಿ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಜಾತ್ರಾಾ ಮಹೋತ್ಸವ ಸಮಿತಿಯ ಸದಸ್ಯ ಮಾರುತಿ ಮಾಸ್ಟರ್ ಅಧ್ಯಕ್ಷತೆಯಲ್ಲಿ ನೆರವೇರಿತು.
ಶೇಖರ ರಾಜು ಸ್ವಾಾಗತಿಸಿದರೆ ಸೂರ್ಯಕಾಂತ ನಿರೂಪಿಸಿದರು ನಿಭಾಯಿಸಿದರು. ವೇದಿಕೆ ಮೇಲೆ ಗ್ರಾಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ ಹುಮನಾಬಾದ, ಸದಸ್ಯರಾದ ಪುಂಡಲೀಕ ಟುಬಾಕ್, ಮಾಜಿ ತಾಲೂಕ ಪಂಚಾಯತ್ ಸದಸ್ಯ ಧನರಾಜ ಅಲದಿ, ಗ್ರಾಾಮದ ಮುಖಂಡರಾದ ಸೂರ್ಯಕಾಂತ ಪೊತಾ, ವಾಸು ಜಾಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿಿತರಿದ್ದರು.
ಕಲಾವಿದರಾದ ರಾಚಯ್ಯ ಸ್ವಾಾಮಿ ತತ್ವಪದ ಗಾಯನ ಮಾಡಿದರು. ಮಾರುತಿ ಮತ್ತು ಸಂಘದ ಕಲಾವಿದರು ಜಾನಪದ ಕಾರ್ಯಕ್ರಮ ನಿರ್ವಹಿಸಿದರು. ತುಕ್ಕಪ್ಪಾಾ ವಿರಪ್ಪಾಾ ಅವರು ಜಾನಪದ ಜಾದು ಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆೆ ವಿಶೇಷ ಆಕರ್ಷಣೆ ನೀಡಿದರು.
ಗ್ರಾಮೀಣ ಜಾನಪದ ಕಲೆ, ಸಾಹಿತ್ಯ ಉಳಿಸಲು ಸಂಘ ಸಂಸ್ಥೆಗಳು ಮುಂದಾಗಲಿ: ಅಡೆಪ್ಪಾ ಶೆರಿಕಾರ್

