ಸುದ್ದಿಮೂಲ ವಾರ್ತೆ ಬೆಂಗಳೂರು, ೆ.02:
ರಾಜ್ಯಸಭೆಯ ಮಾಜಿ ಸದಸ್ಯೆೆ, ಕಲಾವಿದೆ ಬಿ. ಜಯಶ್ರೀ ಅವರು ದಾನವಾಗಿ ನೀಡುವ ಜಾಗವನ್ನು ಸರ್ವೆ ಮಾಡದೆ ಸತಾಯಿಸಿ ಉಡೊಯಾಗಿ ನಡೆದುಕೊಂಡಿರುವ ಎಡಿಎಲ್ಆರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿಂದು ಒತ್ತಾಾಯಿಸಿದರು.
ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊೊಂಡು ಮಾತನಾಡಿದ ಅವರು, ರಾಜ್ಯಸಭೆಯ ಮಾಜಿ ಸದಸ್ಯೆೆ ಜಯಶ್ರೀರವರ 5 ಗುಂಟೆ ಜಮೀನನ್ನು ದಾನ ಮಾಡುವ ಸಂಬಂಧ ಕಂದಾಯ ಕಚೇರಿಗೆ ಹೋದಾಗ ಅವರ ಕೆಲಸ ಮಾಡದೆ ಎಡಿಎಲ್ಆರ್ ಸತಾಯಿಸಿ, ನನಗೆ ನಿಮ್ಮ ಕೆಲಸಕ್ಕಿಿಂತ ನನ್ನ ಮೇಲಾಧಿಕಾರಿ ಕೆಲಸವೇ ಮುಖ್ಯ ಎಂದೆಲ್ಲಾ ಉಡೊಯಾಗಿ ಮಾತನಾಡಿದ್ದಾನೆ. ಈ ಬಗ್ಗೆೆ ಜಯಶ್ರೀಯವರು ಎಲ್ಲವನ್ನು ತಿಳಿಸಿದ್ದಾರೆ. ಈ ಎಡಿಎಲ್ಆರ್ ಯಾರೇ ಆಗಲಿ, ಅವರ ವಿರುದ್ಧ ಕ್ರಮ ಆಗಬೇಕು. ಇಂಥ ಅಧಿಕಾರಿಗಳಿಗೆ ಒಂದು ಸಂದೇಶ ರವಾನೆಯಾಗಬೇಕು ಎಂದು ಒತ್ತಾಾಯಿಸಿದರು.
ರಾಜ್ಯ ಸರ್ಕಾರ ಮನೆ ಬಾಗಿಲಿಗೆ ಸರ್ಕಾರ ಎಂದೆಲ್ಲಾ ಹೇಳಿಕೊಳ್ಳುತ್ತಿಿದೆ. ಆದರೆ ಬಿ. ಜಯಶ್ರೀಯವರನ್ನು ಕಚೇರಿಗೆ ಕರೆಸಿಕೊಂಡು ಕೆಲಸ ಮಾಡದೆ ಸತಾಯಿಸಿ ಉಡೊಯಾಗಿ ನಡೆದುಕೊಳ್ಳಲಾಗಿದೆ. ಅದು ಅವರ ಜಮೀನನ್ನು ರಂಗಭೂಮಿ ಕೆಲಸಕ್ಕಾಾಗಿ ಸರ್ಕಾರಕ್ಕೆೆ ದಾನ ಮಾಡಲು ಮುಂದಾಗಿದ್ದರು. ಮಾಜಿ ಸಂಸದೆಯವರ ಜತೆ ಅಧಿಕಾರಿಗಳು ಹೀಗೆ ನಡೆದುಕೊಳ್ಳುತ್ತಾಾರೆ ಎಂದರೆ ಇನ್ನು ಜನಸಾಮಾನ್ಯರ ಕಥೆ ಏನು? ಸರ್ವೇಗಾಗಿ ಮೂರು ಬಾರಿ ಶುಲ್ಕ ಪಾವತಿಸಿದರೂ ಸರ್ವೆ ಮಾಡದೆ ಸತಾಯಿಸಿದ್ದಾರೆ. ಈ ಎಡಿಎಲ್ಆರ್ ವಿರುದ್ಧ ಕ್ರಮ ಕೈಗೊಳ್ಳಿಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಆಗ ತಾನೆ ಸದನಕ್ಕೆೆ ಬಂದಿದ್ದ ಮುಖ್ಯಮಂತ್ರಿಿ ಸಿದ್ದರಾಮಯ್ಯನವರನ್ನು ಆಗ್ರಹಿಸಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ್ ರವರ ಮಾತಿಗೆ ಮುಖ್ಯಮಂತ್ರಿಿಗಳು ಯಾವುದೇ ಪ್ರತಿಕ್ರಿಿಯೆ ನೀಡದಿದ್ದಾಗ ಈ ಹಿಂದಿನ ಖಡಕ್ ಸಿದ್ದರಾಮಯ್ಯ ಈಗಿಲ್ಲ ಎಂದು ನನಗೂ ಅನಿಸುತ್ತಿಿದೆ ಎಂದು ಅಶೋಕ್ ಹೇಳಿದರು.
ಕ್ರಮದ ಭರವಸೆ ನೀಡಿದ ಸಿಎಂ:
ಸಿಎಂ ಉತ್ತರ ನೀಡುವ ವೇಳೆ ಈ ವಿಚಾರ ಪ್ರಸ್ತಾಾಪಿಸಿ, ಈ ಬಗ್ಗೆೆ ವರದಿ ಪಡೆದು ತಪ್ಪುು ನಡೆದಿದ್ದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆಗ ಆರ್. ಅಶೋಕ್, ಬಿ. ಜಯಶ್ರೀ ಅವರು ಸುಳ್ಳು ಹೇಳುತ್ತಾಾರೆಯೇ? ಕೂಡಲೇ ಕ್ರಮಕ್ಕೆೆ ಆದೇಶಿಸಿ ಎಂದು ಒತ್ತಾಾಯಿಸಿದರು. ಇದಕ್ಕೆೆ ಪ್ರತಿಕ್ರಿಿಯಿಸಿದ ಸಿಎಂ, ’ನಾನು ಜಯಶ್ರೀ ಅವರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳುತ್ತಿಿಲ್ಲ. ಆದರೆ, ವಾಸ್ತವ ತಿಳಿಯದೆ ಆ ರೀತಿಯಾಗಿ ಮಾಡಲು ಬರುವುದಿಲ್ಲ. ಒಂದು ವೇಳೆ ಎಡಿಎಲ್ಆರ್ ನಿಜವಾಗಿಯೂ ನಿರ್ಲಕ್ಷ್ಯ ತೋರಿದ್ದು ಕಂಡುಬಂದಲ್ಲಿ ಕೂಡಲೇ ಕ್ರಮಕ್ಕೆೆ ಸೂಚಿಸಲಾಗುವುದು’ ಎಂದು ಹೇಳಿದರು.
ಬಿ.ಜಯಶ್ರೀ ಅವರನ್ನು ಕಚೇರಿಗೆ ಕರೆಯಿಸಿ ಅಪಮಾನ ಎಡಿಎಲ್ಆರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಆರ್. ಅಶೋಕ್

