ಸುದ್ದಿಮೂಲ ವಾರ್ತೆ ಕೊಪ್ಪಳ, ೆ.02:
ಹುಲಿಗಿಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿ ಇಷ್ಟು ಜನ ಭಕ್ತರು ದೇವಿಯ ದರ್ಶನಕ್ಕೆೆ ಬಂದಿದ್ದರು. ಬಂದ ಭಕ್ತರಿಗೆ ವಾಸ್ತವ್ಯ ಹೂಡಲು ಜಾಗೆ ಇಲ್ಲದ ಕಾರಣಕ್ಕೆೆ ರಾತ್ರಿಿ ಇಡೀ ಹುಲಿಗಿಯ ಬೀದಿಯಲ್ಲಿ ಮಲಗಿಕೊಂಡಿದ್ದಾಾರೆ. ಈ ವಿಡಿಯೋ ಈಗ ುಲ್ ವೈರಲ್ ಆಗಿದೆ.
ಹುಲಿಗೆಮ್ಮ ದೇವಸ್ಥಾಾನಕ್ಕೆೆ ದಾಖಲೆ ಪ್ರಮಾಣದ ಭಕ್ತರು ಆಗಮಿಸಿದ್ದರು. ಭಾನುವಾರ ಹಾಗೂ ಭರತ ಹುಣ್ಣಿಿಮೆ ಒಂದೇ ದಿನ ಬಂದಿದ್ದರಿಂದ ಭಾನುವಾರ ಮುಂಜಾನೆಯಿಂದಲೇ ಅಪಾರ ಜನ ಭಕ್ತರು ಆಗಮಿಸಿದ್ದರು. ಸರಿಸುಮಾರು 8 ಲಕ್ಷ ಜನ ಭಕ್ತರು ಬಂದಿದ್ದರು ಎಂದು ಅಂದಾಜಿಸಲಾಗಿದೆ. ಭಾನುವಾರ ಸಂಜೆ ವಾಪಸ್ಸಾಾಗಲು ಬಸ್ ವ್ಯವಸ್ಥೆೆ ಇಲ್ಲದೆ ಇರುವುದು. ಇಷ್ಟು ಜನಕ್ಕೆೆ ವಾಸ ಮಾಡಲು ಸೌಲಭ್ಯವಿಲ್ಲದ ಕಾರಣ ನಿನ್ನೆೆ ಸಂಜೆ ರಾತ್ರಿಿ ದೇವಸ್ಥಾಾನ ಬೀದಿಯಲ್ಲಿ ಭಕ್ತರು ಮಲಗಿದ್ದರು.
ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ಆದಾಯ ಇರುವ ಹುಲಿಗೆಮ್ಮ ದೇವಸ್ಥಾಾನದ ಅಭಿವೃದ್ಧಿಿಗಾಗಿ ಈಗ ಶ್ರೀಹುಲಿಗೆಮ್ಮ ದೇವಸ್ಥಾಾನ ಅಭಿವೃದ್ದಿ ಪ್ರಾಾಧಿಕಾರ ಇದ್ದರೂ ಇನ್ನೂ ಇಲ್ಲಿ ಮೂಲಭೂತ ಸೌಲಭ್ಯ ನೀಡಿಲ್ಲ. ಹುಣ್ಣಿಿಮೆ ಹಾಗೂ ಮಂಗಳ ವಾರ, ಶುಕ್ರವಾರದಂದು ಬರುವ ಭಕ್ತರಿಗೆ ಇನ್ನಷ್ಟು ಸೌಲಭ್ಯ ಒದಗಿಸಬೇಕಾಗಿದೆ.
ರಾತ್ರಿಯಿಡೀ ಬೀದಿಯಲ್ಲಿ ಮಲಗಿದ ಭಕ್ತರು

