ಸುದ್ದಿಮೂಲ ವಾರ್ತೆ ಬೆಂಗಳೂರು, ೆ.03:
ಅಬಕಾರಿ ಇಲಾಖೆಯಲ್ಲಿ ಲೈಸನ್ಸ್ ನೀಡಲು ಲಂಚಕ್ಕೆೆ ಬೇಡಿಕೆ ಇಟ್ಟ ಆರೋಪದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾಾದಕ್ಕೆೆ ಎಡೆಮಾಡಿಕೊಟ್ಟಿಿತು.
ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ನಿಯಮ 69 ರಡಿ ವಿಷಯ ಪ್ರಸ್ತಾಾಪಿಸಿ ಅಧಿಕಾರಿ ಹಾಗೂ ಲೈಸನ್ಸ್ ಪಡೆಯುವವರ ನಡುವೆ ನಡೆದಿರುವ ಸಂಭಾಷಣೆಯ ವಿವರಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಒಂದು ಹಂತದಲ್ಲಿ ಬಿಜೆಪಿ ಶಾಸಕ ವಿ.ಸುನೀಲ್ಕುಮಾರ್ ಗಂಭೀರವಾದ ಆರೋಪಗಳನ್ನು ವಿರೋಧಪಕ್ಷದ ನಾಯಕರು ಎಳೆಎಳೆಯಾಗಿ ಬಿಡಿಸಿಡುತ್ತಿಿದ್ದಾರೆ. ಆರೋಪ ಹೊತ್ತಿಿರುವ ಸಚಿವರು ರಾಜೀನಾಮೆ ಕೊಡಬೇಕು. ನೈತಿಕತೆ ಇದ್ದರೆ ಮುಖ್ಯಮಂತ್ರಿಿ ಅವರ ರಾಜೀನಾಮೆಯನ್ನು ಪಡೆಯಬೇಕು. ಮೌನವಾಗಿ ಎಲ್ಲವನ್ನೂ ಕೇಳುತ್ತಿಿದ್ದಾರೆ ಎಂದು ವಾಗ್ದಾಾಳಿ ನಡೆಸಿದರು.
ಆಗ ಕಾಂಗ್ರೆೆಸ್ ಪಕ್ಷದ ಶಾಸಕ ಪೊನ್ನಣ್ಣ ಮಾತನಾಡಿ, ವಿರೋಧಪಕ್ಷದವರು ಮಾಡುತ್ತಿಿರುವ ಆರೋಪ ಏನೂ ಅರ್ಥವಾಗುತ್ತಿಿಲ್ಲ ಎಂದು ಆಕ್ಷೇಪವೆತ್ತಿಿದರು.
ಬಿಜೆಪಿ ಶಾಸಕ ಸುರೇಶ್ಗೌಡ ಮಾತನಾಡಿ, ಮೊದಲ ಬಾರಿ ಶಾಸಕರಾದವರು 7 ಬಾರಿ ಶಾಸಕರಾದವರಿಗೆ ಪಾಠ ಮಾಡುತ್ತಿಿದ್ದಾರೆ ಎಂದು ಛೇಡಿಸಿದರು.ಪೊನ್ನಣ್ಣ ಅವರ ಬೆಂಬಲಕ್ಕೆೆ ನಿಂತ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಪೊನ್ನಣ್ಣ ಅವರು ಹೊಸಬರಾಗಿ ಶಾಸಕರಾಗಿರಬಹುದು. ಅವರಿಗೆ ಒಳ್ಳೆೆಯ ಅನುಭವವಿದೆ ಎಂದರು.ಬಿಜೆಪಿ ಮತ್ತೊೊಬ್ಬ ಶಾಸಕ ಸಿ.ಎನ್.ಅಶ್ವತ್ಥನಾರಾಯಣ, ನಿಮ್ಮ ಸರ್ಕಾರದ ಸಲಹೆಗಾರರು ಇವರು ಎಂದು ಛೇಡಿಸಿದರು.
ಆಗ ಅಶೋಕ್ ಮಾತನಾಡಿ, ಪೊನ್ನಣ್ಣ ಅವರೇ ನಿಮಗೂ ಆಡಿಯೋ ಕೊಡುತ್ತೇವೆ, ಕೇಳಿ ಎಂದು ಮಾತು ಮುಂದುವರೆಸಿದರು. ಮಂಡ್ಯ ಅಬಕಾರಿ ಇಲಾಖೆಯ ಡಿಸಿ ಲೈಸೆನ್ಸ್ ನೀಡುವ ವಿಚಾರದಲ್ಲಿ ಜಾತಿ ತಂದಿದ್ದಾರೆ. ನೀವು ಕುರುಬರ ಮುಖಂಡರೊಂದಿಗೆ ದೊಡ್ಡವರು ಚಿಕ್ಕವರಿಂದ ೆನು ಮಾಡಿಸಿ ಎಂದೆಲ್ಲಾ ಹೇಳಿದ್ದಾರೆ. ಅಲ್ಲದೆ ಅಧಿಕಾರಿ ಸರ್ಕಾರಿ ಕೆಲಸ ಮಾಡದೇ ಜಾತಿ ಕೆಲಸ ಮಾಡಿದ್ದಾರೆ. ಜಾತಿ ಆಧಾರದ ಮೇಲೆ ಮದ್ಯದಂಗಡಿಯ ಲೈಸೆನ್ಸ ನೀಡಲಾಗುತ್ತಿಿದೆಯೇ? ಎಂದು ಪ್ರಶ್ನಿಿಸಿದರು. ಸರ್ಕಾರ ಸರ್ಕಸ್ ಕಂಪನಿಗಿಂತಲೂ ಕೆಟ್ಟದಾಗಿ ಆಡಳಿತ ನಡೆಸುತ್ತಿಿದೆ ಎಂದರು.
ಆಗ ಆಡಳಿತ ಪಕ್ಷದ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ವೈನ್ ಸ್ಟೋೋರ್ಗೆ ಹೋದರೆ ಇಂತಹ 50 ಆಡಿಯೋ, ವಿಡಿಯೋಗಳನ್ನು ತರಬಹುದು.ಸಚಿವರು ಕಂತೆ ಕಂತೆ ಲಂಚ ಪಡೆಯುವುದು ಸಿಕ್ಕಿಿದೆ ಎಂದುಕೊಂಡಿದ್ದೆ ಎಂದರು.ಇದಕ್ಕೆೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕರು, ಅಬಕಾರಿ ಜಿಲ್ಲಾಧಿಕಾರಿ ಎಣ್ಣೆೆ ಅಂಗಡಿಯಲ್ಲಿ ಕುಡಿದು ಮಾತನಾಡಿದ್ದಾರೆಯೇ ಎಂದು ಪ್ರಶ್ನಿಿಸಿದರು.
ಬಿಜೆಪಿಯ ವೇದವ್ಯಾಾಸ ಕಾಮತ್ ಮಾತನಾಡಿ, ಇದು ಕೊಬ್ಬರಿಯ ವಿಚಾರವಲ್ಲ. ಎಣ್ಣೆೆ ಅಂಗಡಿಯ ವಿಚಾರ ಎಂದು ಛೇಡಿಸಿದರು.
ಸುನೀಲ್ಕುಮಾರ್ ಮಾತನಾಡಿ, ಗುತ್ತಿಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಯಾವ ಎಣ್ಣೆೆ ಅಂಗಡಿಯಿಂದ ಕರೆತರುತ್ತಿಿದ್ದಿರಿ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಶಾಸಕ ಎಚ್.ಟಿ.ಮಂಜು ಮಾತನಾಡಿ, ಸಮರ್ಥನೆಗೂ ಒಂದು ಇತಿಮಿತಿ ಬೇಡವೆ?, ಭ್ರಷ್ಟಾಾಚಾರವನ್ನು ಸಮರ್ಥಿಸಿಕೊಳ್ಳುತ್ತಿಿದ್ದಾರೆ ಎಂದು ನುಡಿದರು.ಆಡಳಿತ ಪಕ್ಷದ ಮತ್ತೊೊಬ್ಬ ಶಾಸಕ ಅಲ್ಲಮಪ್ರಭು ಪಾಟೀಲರು ಮಾತನಾಡಿ, ಅಶೋಕ್ ಅವರು ಸಚಿವರಾಗಿದ್ದಾಗಲೂ ಹಣ ಪಡೆದ ಆರೋಪ ಬಂದಿದೆ. ಆದರೆ ನಮ್ಮ ಮುಖ್ಯಮಂತ್ರಿಿ ಕಪ್ಪುುಚುಕ್ಕೆೆ ಇಲ್ಲದೆ ಆಡಳಿತ ನಡೆಸುತ್ತಿಿದ್ದಾರೆ ಎಂದಾಗ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಸರ್ಕಾರ ಯಾವುದಾದರೂ ಇರಲಿ, ಭ್ರಷ್ಟಾಾಚಾರ ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾಾದ, ಮಾತಿನ ಚಕಮಕಿ ಜರುಗಿತು.
ಮಾತು ಮುಂದುವರೆಸಿದ ಅಶೋಕ್, ನೀವು ತಪ್ಪಿಿತಸ್ಥರಲ್ಲದಿದ್ದರೆ ಲಂಚ ಕೇಳಿದ ಆರೋಪ ಮಾಡಿದವರ ಮೇಲೆ ಕ್ರಮ ಕೈಗೊಂಡು ಜೈಲಿಗೆ ಹಾಕಿ. 11 ವಾರದೊಳಗೆ ಪರವಾನಗಿ ನೀಡಬೇಕೆಂಬ ನ್ಯಾಾಯಾಲಯದ ಆದೇಶವಿದ್ದರೂ ಈ ರೀತಿ ಮಾಡಿದ್ದಾರೆ ಎಂದು ವಾಗ್ದಾಾಳಿ ನಡೆಸಿದರು.
ಅಬಕಾರಿ ಇಲಾಖೆಯಲ್ಲಿ ಲಂಚ ಪ್ರಕರಣ ವಿಧಾನಸಭೆಯಲ್ಲಿ ಆಡಳಿತ – ಪ್ರತಿಪಕ್ಷ ವಾಗ್ಯುದ್ಧ

