ಸುದ್ದಿಮೂಲ ವಾರ್ತೆ ರಾಯಚೂರು, ೆ.03:
ತುಂಗಭದ್ರಾಾ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೆಯ ಬೆಳೆಗೆ ನೀರಿನ ಲಭ್ಯತೆ ಇಲ್ಲದ ಕಾರಣ ರಾಯಚೂರು ಜಿಲ್ಲೆೆಯ ರೈತರು ಭತ್ತಕ್ಕೆೆ ಪರ್ಯಾಯ ಬೆಳೆಯಾಗಿ ಸಾಸಿವೆಯನ್ನು ಬೆಳೆದು ಯಶಸ್ವಿಿಯಾಗಿದ್ದಾಾರೆ.
ಭತ್ತದ ಗದ್ದೆೆಗಳಲ್ಲಿ ಸಾಸಿವೆ ಬಿತ್ತನೆ ಮಾಡಿ ಅಧಿಕ ಲಾಭದ ನಿರೀಕ್ಷೆಯಲ್ಲಿದ್ದಾಾರೆ. ಜಿಲ್ಲೆೆಯಲ್ಲಿ ತುಂಗಭದ್ರಾಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಎಡಬಿಡದೆ ಭತ್ತದ ನಂತರ ಭತ್ತವನ್ನು ಬೇಸಾಯ ಮಾಡುತ್ತಿಿರುವುದರಿಂದ ಭೂಮಿಯ ಲವತ್ತತೆ ಗಣನೀಯವಾಗಿ ಕಡಿಮೆಯಾಗುತ್ತಿಿದೆ, ಇದರ ಜೊತೆಗೆ ನೀರಿನ ಅತಿಯಾದ ಬಳಕೆ ಮತ್ತು ಇಳುವರಿಯೂ ಸಹ ಕುಂಟಿತವಾಗುತ್ತಿಿದೆ. ಈ ನಿಟ್ಟಿಿನಲ್ಲಿ ರಾಯಚೂರಿನ ಕೃಷಿ ವಿಜ್ಞಾಾನಗಳ ವಿಶ್ವವಿದ್ಯಾಾಲಯದ ಕೃಷಿ ವಿಜ್ಞಾಾನ ಕೇಂದ್ರ ರಾಯಚೂರು ವತಿಯಿಂದ ಕಳೆದ ಐದು ವರ್ಷಗಳಿಂದ ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್-ಎಣ್ಣೆೆಕಾಳುಗಳು ಯೋಜನೆಯಡಿಯಲ್ಲಿ ಭತ್ತಕ್ಕೆೆ ಪರ್ಯಾಯ ಬೆಳೆಗಳಾಗಿ ಎಣ್ಣೆೆಕಾಳುಗಳ ಬೆಳೆ ಬೆಳೆಯಲು ಮತ್ತು ರೈತರ ಆದಾಯ ಹೆಚ್ಚಿಿಸಲು ಹಲವಾರು ಒಳಾಂಗಣ ತರಬೇತಿ, ಹೊರಾಂಗಣ ತರಬೇತಿ ಮತ್ತು ಗುಚ್ಛ ಪ್ರಾಾತ್ಯಕ್ಷಿಕೆಗಳನ್ನು ಹಮ್ಮಿಿಕೊಂಡಿದ್ದು, ಸಾಸಿವೆ ಬೆಳೆಯಲ್ಲಿ ತಳಿಗಳ ಆಯ್ಕೆೆ, ಸಮಗ್ರ ಬೇಸಾಯ ಕ್ರಮಗಳು, ಸಮಗ್ರ ಕೀಟ ಹಾಗೂ ರೋಗಗಳ ನಿರ್ವಹಣೆಯ ಬಗ್ಗೆೆ ವಿಜ್ಞಾಾನಿಗಳಿಂದ ನಿರಂತರ ಮಾಹಿತಿ ನೀಡುತ್ತಿಿದ್ದು ರೈತಾಪಿ ವರ್ಗಕ್ಕೆೆ ಅನುಕೂಲವಾಗಿದೆ. ಹಿಂಗಾರು ಹಂಗಾಮಿನಲ್ಲಿ ಕಡಿಮೆ ನೀರಿನ ಲಭ್ಯತೆ ಇರುವಾಗ ಭತ್ತಕ್ಕೆೆ ಪರ್ಯಾಯವಾಗಿ ಸಾಸಿವೆ ಬೆಳೆಯುವುದು ರೈತರಿಗೆ ಉತ್ತಮ ಆಯ್ಕೆೆಯಾಗಿದೆ.
ಸಾಸಿವೆ ಕೇವಲ 85-90 ದಿನಗಳಲ್ಲಿ ಅಧಿಕ ಲಾಭ ತಂದುಕೊಡುವ ಕಡಿಮೆ ಅವಧಿಯ ಬೆಳೆಯಾಗಿದ್ದು, ನೀರಿನ ಅವಶ್ಯಕತೆ ತುಂಬಾ ಕಡಿಮೆ ಇರುವುದರಿಂದ ಮಣ್ಣಿಿನಲ್ಲಿ ಇರುವ ಹಸಿ ತೇವಾಂಶವನ್ನೆೆ ಬಳಸಿಕೊಂಡು ಉತ್ತಮ ಇಳುವರಿ ಪಡೆಯಬಹುದಾಗಿದೆ. ಎಕರೆಗೆ 2 ರಿಂದ 2.5 ಕೆಜಿ ಬೀಜವನ್ನು ಸೆಪ್ಟೆೆಂಬರ್ ಕೊನೆಯ ವಾರದಿಂದ ಅಕ್ಟೋೋಬರ್ ಮೊದಲ ವಾರದವರೆಗೆ ಬಿತ್ತನೆ ಕಾರ್ಯ ಕೈಗೊಳ್ಳಬೇಕು. ಮಣ್ಣು ಪರೀಕ್ಷೆ ಮಾಡಿಸಿ ಗಂಧಕದ ಕೊರತೆ ಬಂದಲ್ಲಿ ಎಕರೆಗೆ 8 ರಿಂದ 10 ಕೆಜಿ ಜಿಂಕ್ ಸಲ್ಫೇಟ್ ಬಳಸಬೇಕು. ಸಾಸಿವೆ ಬೆಳೆಯು ಕಡಿಮೆ ಕೀಟ ಹಾಗೂ ರೋಗಗಳ ಬಾಧೆಗೆ ಒಳಗಾಗಿ ಕಡಿಮೆ ವೆಚ್ಚದಲ್ಲಿ ಬೇಸಾಯ ಮಾಡಬಹುದಾಗಿದೆ.
ಮುಂಬರುವ ದಿನಗಳಲ್ಲಿ ತುಂಗಭದ್ರಾಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಆರ್ಥಿಕತೆಯ ಆಶಾಕಿರಣವಾಗಿ ಭತ್ತಕ್ಕೆೆ ಪರ್ಯಾಯವಾಗಿ ಸಾಸಿವೆ, ಎಳ್ಳು ಮತ್ತು ದ್ವಿಿದಳ ಧಾನ್ಯಗಳಾದ ಹೆಸರು,ಅಲಸಂದಿ,ಉದ್ದು ಬೆಳೆಗಳ ಬಗ್ಗೆೆ ರೈತರಲ್ಲಿ ಜಾಗೃತಿ ಮೂಡಿಸಿ ಹೆಚ್ಚಿಿನ ಪ್ರದೇಶದಲ್ಲಿ ಪರ್ಯಾಯ ಬೆಳೆಗಳು ವಿಸ್ತರಿಸಲಿದೆ ಎಂದು ಬೇಸಾಯಶಾಸದ ವಿಜ್ಞಾಾನಿಯಾದ ಡಾ.ಮಲ್ಲರೆಡ್ಡಿಿ ಹೇಳಿದರು.
ಲಾಭದ ಲೆಕ್ಕಾಾಚಾರ: ಒಂದು ಎಕರೆಗೆ ಬೀಜ,ಕೀಟನಾಶಕ,ರಸಗೊಬ್ಬರ ಹಾಗೂ ಕಟಾವು ಸೇರಿದಂತೆ ಒಟ್ಟು 4 ರಿಂದ 5 ಸಾವಿರ ರೂಪಾಯಿಗಳಷ್ಟು ವೆಚ್ಚವಾಗಲಿದೆ. ಸರಾಸರಿ ಇಳುವರಿ 2-3 ಕ್ವಿಿಂಟಾಲ್ ಬರುವ ನಿರೀಕ್ಷೆಯಿದೆ. ಪ್ರಸ್ತುತ ಮಾರುಕಟ್ಟೆೆಯಲ್ಲಿ ಕ್ವಿಿಂಟಾಲ್ಗೆ 6000-6500 ರೂ ದರವಿದೆ. ಖರ್ಚು ತೆಗೆದು ಎಕರೆಗೆ 10-12 ಸಾವಿರ ರೂಪಾಯಿ ಲಾಭದ ನಿರೀಕ್ಷೆಯಲ್ಲಿ ರೈತರಿದ್ದಾಾರೆ.
ಸೊಗಸಾಗಿ ಬೆಳೆದ ಸಾಸಿವೆ: ರೈತರ ಮೊಗದಲ್ಲಿ ಮಂದಹಾಸ ಭತ್ತಕ್ಕೆ ಪರ್ಯಾಯವಾಗಿ ಸಾಸಿವೆ ಬೆಳೆ ಬೆಳೆದ ರಾಯಚೂರು ಜಿಲ್ಲೆಯ ರೈತರು

