ಸುದ್ದಿಮೂಲ ವಾರ್ತೆ ದೇವದುರ್ಗ, ೆ.03:
ಕೇಂದ್ರ ಸರ್ಕಾರ ೆ.1ರಂದು ಮಂಡಿಸಿದ ಬಜೆಟ್ನಲ್ಲಿ ಐಸಿಡಿಎಸ್ ಯೋಜನೆಗೆ ಯಾವುದೇ ಅನುದಾನ ಕೊಡದಿರುವುದನ್ನು ಖಂಡಿಸಿ ಪಟ್ಟಣದ ಜೆಪಿ ವೃತ್ತದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಪದಾಧಿಕಾರಿಗಳು ಬಜೆಟ್ನ ಪ್ರತಿ ಸುಟ್ಟುಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಐಸಿಡಿಎಸ್ ಯೋಜನೆ ವಿಶೇಷ ಅನುದಾನ ಘೋಷಣೆ ಮಾಡಬೇಕು. ದುಡಿಯುವ ಕಾರ್ಮಿಕ ವರ್ಗಕ್ಕೆೆ ಆದ್ಯತೆ ನೀಡಬೇಕು. ಶಿಶು ಅಭಿವೃದ್ಧಿಿ ಯೋಜನೆ ಬಲಪಡಿಸಬೇಕು ಎಂದು ಒತ್ತಾಾಯಿಸಿದರು. ಸಿಐಟಿಯು ಜಿಲ್ಲಾಾ ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಅಧ್ಯಕ್ಷೆ ರಂಗಮ್ಮ, ಕಾರ್ಯದರ್ಶಿ ರಮಾದೇವಿ, ಪದಾಧಿಕಾರಿಗಳಾದ ಚಂದ್ರಕಲಾ, ರೇಣುಕಾ, ಬಸ್ಸಮ್ಮ, ಸುಮಂಗಲಾ, ಹನುಮಂತಿ, ರಂಗಮ್ಮ ಅರಷಿಣಿಗೆ, ನಿರ್ಮಲ, ಪ್ರಾಾಂತರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಇತರರಿದ್ದರು.
ಕೇಂದ್ರ ಬಜೆಟ್ ಪ್ರತಿ ಸುಟ್ಟು ಆಕ್ರೋಶ ಅಂಗನವಾಡಿ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ

