ಸುದ್ದಿಮೂಲ ವಾರ್ತೆ ಮಸ್ಕಿ, ೆ.04:
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನರೇಗಾ ಯೋಜನೆಯ ಹೆಸರಿನಲ್ಲಿ ಬದಲಾವಣೆ ಮಾಡುವುದರ ಮೂಲಕ ಮಹಾತ್ಮಾಾ ಗಾಂಧಿಯವರ ಹೆಸರನ್ನು ನಿಧಾನವಾಗಿ ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿಿದೆ ಎಂದು ಮಸ್ಕಿಿ ಯೋಜನಾ ಪ್ರಾಾಧಿಕಾರದ ಅಧ್ಯಕ್ಷ ಸಿದ್ದನಗೌಡ ತುರುವಿಹಾಳ ಆರೋಪಿಸಿದರು.
ಮಸ್ಕಿಿ ವಿಧಾನಸಭಾ ಕ್ಷೇತ್ರದ ಗ್ರಾಾಮೀಣ ಹಾಗೂ ಬ್ಲಾಾಕ್ ಕಾಂಗ್ರೆೆಸ್ ನೇತೃತ್ವದಲ್ಲಿ ಪಟ್ಟಣದ ಗಾಂಧಿನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಬುಧವಾರ ಹಮ್ಮಿಿಕೊಳ್ಳಲಾದ ಮನ್ರೇಗಾ ಬಚಾವ್ ಸಂಗ್ರಾಾಮ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತಿದ್ದರು.
ಪ್ರತಿಭಟನೆಗೆ ಮುನ್ನ ಪಟ್ಟಣದ ಗಾಂಧಿನಗರದ ಅಂಬೇಡ್ಕರ್ ವೃತ್ತ ಮುಂಭಾಗದಿಂದ ಅಶೋಕ ವೃತ್ತ ಮಾರ್ಗವಾಗಿ ಹೊರಟು ಹಳೆ ಬಸ್ ನಿಲ್ದಾಾಣದ ತನಕ ಪಾದಯಾತ್ರೆೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಂದಾನಪ್ಪ ಗುಂಡಳ್ಳಿಿ, ವೆಂಕಟರೆಡ್ಡಿಿ ಗೌಡ ಹಾಲಾಪುರ,ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿಿ,ಹನುಮಂತಪ್ಪ ವೆಂಕಟಾಪುರ,ನಿರುಪಾದೆಪ್ಪ ವಕೀಲ, ಆನಂದ ವೀರಾಪುರ, ಬಸನಗೌಡ ಮಾರಲದಿನ್ನಿಿ, ಹನುಮೇಶ ಬಾಗೋಡಿ,ಮಲ್ಲಯ್ಯ ಬಳ್ಳ,ಹನುಮಂತಪ್ಪ ಮುದ್ದಾಪುರ, ಮಹಿಬೂಬ ಸಾಬ್ ಮುದ್ದಾಪುರ, ಕೃಷ್ಣ ಡಿ ಚಿಗರಿ, ನೀಲಕಂಠಪ್ಪ ಗೋನಾಳ,ದೊಡ್ಡ ಕರಿಯಪ್ಪ, ಹಾಗೂ ಕಾಂಗ್ರೆೆಸ್ ಮುಖಂಡರು, ಇತರರು ಭಾಗವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ನಿಂದ ಮನರೇಗಾ ಬಚಾವ್ ಪ್ರತಿಭಟನೆ ಕೇಂದ್ರದಿಂದ ಗಾಂಧಿ ಹೆಸರು ಅಳಿಸುವ ಹುನ್ನಾರ: ಸಿದ್ದನಗೌಡ ತುರುವಿಹಾಳ

