ಸುದ್ದಿಮೂಲ ವಾರ್ತೆ ರಾಯಚೂರು, ೆ.04:
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕುಗಳಿಂದ ಕಲಾವಿದರು ಹಾಗೂ ಸಾರ್ವಜನಿಕ ಪ್ರಯಾಣಿಕರು ಹೆಚ್ಚಿಿನ ಸಂಖ್ಯೆೆಯಲ್ಲಿ ಆಗಮಿಸುತ್ತಿಿರುವ ಹಿನ್ನೆೆಲೆಯಲ್ಲಿ ವಿಭಾಗದ ವ್ಯಾಾಪ್ತಿಿಯ ಎಲ್ಲಾ ಘಟಕಗಳಿಂದ ಹೆಚ್ಚುವರಿ ಸರ್ಕಾರಿ ಬಸ್ ಸಂಚಾರದ ವ್ಯವಸ್ಥೆೆ ಮಾಡಲಾಗಿದೆ.
ರಾಯಚೂರು ವಿಭಾಗದ ವ್ಯಾಾಪ್ತಿಿಯಲ್ಲಿ ಬರುವ ಎಲ್ಲಾ ಘಟಕಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯಿಂದ ತಾಲೂಕಿಗೆ ಹಾಗೂ ತಾಲೂಕಿನಿಂದ ಜಿಲ್ಲೆಗೆ ಸೀಯರಿಗೆ ಶಕ್ತಿಿ ಯೋಜನೆ ಅಡಿಯಲ್ಲಿ ಟಿಕೆಟ್ ವಿಧಿಸಲಾಗುವುದು ಹಾಗೂ ಪುರುಷರಿಗೆ ಪ್ರಯಾಣದ ದರ ಮೇಲೆ ಹೆಚ್ಚಿಿನ ಬಸ್ಸುಗಳು ಕಾರ್ಯಾಚರಣೆ ಮಾಡಲಾಗುವುದು. ಅಲ್ಲದೇ ನಗರದಲ್ಲಿ ಸಹ ನಗರ ಸಾರಿಗೆ ವಾಹನಗಳು ಶಕ್ತಿಿ ಯೋಜನೆ ಅಡಿಯಲ್ಲಿ ಟಿಕೆಟ್ ವಿಧಿಸಿ ಹೆಚ್ಚಿಿನ ಬಸ್ಸುಗಳು ಕಾರ್ಯಾಚರಣೆ ಮಾಡಲಾಗುವುದು.
ರಾಯಚೂರು ಗ್ರಾಾಮೀಣ ಪ್ರದೇಶಕ್ಕೆೆ ಹಾಗೂ ಬೇರೆ ತಾಲೂಕುಗಳಿಗೆ ತೆರಳುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಾಗಿ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯಕ್ಕೆೆ ಬೆಳಿಗ್ಗೆೆಯಿಂದ ಸಂಜೆವರೆಗೆ ಗೇಟ್-2 ರಲ್ಲಿ ನಿರಂತರವಾಗಿ ವಾಹನಗಳು ಕಾರ್ಯಾಚರಿಸಲಾಗುವುದು. ಅಲ್ಲದೆ ರಾತ್ರಿಿ ಸಮಯದಲ್ಲಿ ನಿಗದಿತ ಪಾರ್ಕಿಗ್ ಸ್ಥಳದಿಂದ ಸಾರಿಗೆ ವಾಹನಗಳು ಕಾರ್ಯಾಚರಣೆಗೊಳಿಸಲಾಗುವುದು.
ಹೆಚ್ಚಿಿನ ಮಾಹಿತಿಗಾಗಿ 7760992363/ 7760992364/ 7619351087/ ಕೇಂದ್ರ ಬಸ್ ನಿಲ್ದಾಾಣಾಧಿಕಾರಿ 6366976325, 7760992370ಗೆ ಸಂಪರ್ಕ ಮಾಡಬಹುದಾಗಿದೆ. ರಾಯಚೂರು ನಗರದಲ್ಲಿ ನಗರ ಸಾರಿಗೆ ಮತ್ತು ಕಲಾವಿದರು, ಮಾಧ್ಯಮ ಮುಂತಾ….ದವರಿಗೆ ಬಸ್ಸಿಿನ ವ್ಯವಸ್ಥೆೆ ನೋಡಿಕೊಳ್ಳಲು ನೋಡಲ್ ಅಧಿಕಾರಿ 8073610442/9113501545,/7760992359ಗೆ ಸಂಪರ್ಕ ಮಾಡಬಹುದಾಗಿದೆ.
ಸಾರ್ವಜನಿಕರು ಈ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡೆಯಬಹುದಾಗಿದೆಂದು ಕಲ್ಯಾಾಣ ಕರ್ನಾಟಕ ರಸ್ತೆೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

