ಸುದ್ದಿಮೂಲ ವಾರ್ತೆ ನವದೆಹಲಿ, ೆ.04:
ದೇಶದ 15 ನೇ ಹಣಕಾಸು ಆಯೋಗ ಮತ್ತು ಇತರೆ ಯೋಜನೆಗಳ ಅಡಿ ಕರ್ನಾಟಕದ ಗ್ರಾಾಮ ಪಂಚಾಯಿತಿಗಳಿಗೆ ಬಾಕಿ ಇರುವ 10,175 ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಆಗ್ರಹಿಸಿದ್ದಾಾರೆ.
ಸಂಸತ್ತಿಿನ ಶೂನ್ಯವೇಳೆಯಲ್ಲಿ ಬುಧವಾರ ವಿಷಯವನ್ನು ಪ್ರಸ್ತಾಾಪಿಸಿ ಮಾತನಾಡಿದ ಅವರು, ಕರ್ನಾಟಕದ 6,000 ಗ್ರಾಾಮ ಪಂಚಾಯಿತಿಗಳಿಗೆ 2,133 ಕೋಟಿ ರೂಪಾಯಿಗೂ ಅಧಿಕ ಹಣದ ಬಾಕಿ ಇದೆ. ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆೆ ಈ ನಿಟ್ಟಿಿನಲ್ಲಿ ಬಿಡುಗಡೆ ಮಾಡಬೇಕಾಗಿರುವ ಮೊದಲ ಕಂತಿನ 1,092 ಕೋಟಿ ಹಣದ ಅನುದಾನವೂ ಬಿಡುಗಡೆ ಆಗಿಲ್ಲ. ಕರ್ನಾಟಕಕ್ಕೆೆ ಬಿಡುಗಡೆ ಆಗಬೇಕಿದ್ದ ಹಣವನ್ನು ಬಿಡುಗಡೆ ಮಾಡುವಲ್ಲಿ ಅನಗತ್ಯ ವಿಳಂಬವಾಗುತ್ತಿಿದೆ. ಕಾರಣ ಕರ್ನಾಟಕದ ಗ್ರಾಾಮ ಪಂಚಾಯಿತಿಗಳು ಕೇಂದ್ರ ಸರ್ಕಾರದ ನಿಧಿಯ ನಿರೀಕ್ಷೆಯಲ್ಲಿದ್ದು, ಅಭಿವೃದ್ಧಿಿ ಮತ್ತು ಮೂಲಭೂತ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವಲ್ಲಿ ವಿಳಂಬವಾಗುತ್ತಿಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತರಿ ಯೋಜನೆಯಲ್ಲಿ ಕರ್ನಾಟಕಕ್ಕೆೆ 1,066 ಕೋಟಿ ರು.ಗಳು ಹಾಗೂ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ರೂಪಾಯಿ 6,976 ಕೋಟಿ ಬಾಕಿ ಇದೆ. 15ನೇ ಹಣಕಾಸು ಆಯೋಗವನ್ನು ವಿಶೇಷವಾಗಿ ಸ್ಥಳೀಯ ಸಂಸ್ಥೆೆಗಳನ್ನು ಬಲಪಡಿಸಲು ಮತ್ತು ಗ್ರಾಾಮ ಪಂಚಾಯತಿಗಳಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಉದ್ದೇಶದಿಂದ ರಚಿಸಲಾಗಿದೆ. ಆದರೆ, ಈ ಉದ್ದೇಶವನ್ನು ಈಡೇರಿಸುವಲ್ಲಿ ಸಾಧ್ಯವಾಗುತ್ತಿಿಲ್ಲ ಎಂದು ಅವರು ತಿಳಿಸಿದ್ದಾಾರೆ.
ಕರ್ನಾಟಕಕ್ಕೆ 10,175 ಕೋಟಿ ರೂ. ಬಿಡುಗಡೆ ಮಾಡಿ : ಡಾ. ಸಯ್ಯದ್ ನಾಸೀರ್ ಹುಸೇನ್

