ಸುದ್ದಿಮೂಲ ವಾರ್ತೆ ಕೂಡ್ಲಿಗಿ, ೆ.04:
ಕೇರಳದ ತ್ರಿಿಶೂರ್ ಜಿಲ್ಲೆೆಯ ಗುರುವಾಯೂರಿನ ಶ್ರೀಕೃಷ್ಣ ಕಾಲೇಜಿನ ವಿದ್ಯಾಾರ್ಥಿಗಳು ಪ್ರಯಾಣಿಸುತ್ತಿಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿಿ ಪಲ್ಟಿಿಯಾಗಿ, ಪೊ್ರೆಸರ್ ಮತ್ತು ಐವರು ವಿದ್ಯಾಾರ್ಥಿಗಳು ತೀವ್ರವಾಗಿ ಗಾಯಗೊಂಡು, 25 ವಿದ್ಯಾಾರ್ಥಿಗಳು ಚಿಕ್ಕಪುಟ್ಟ ಗಾಯಗೊಂಡಿರುವ ಘಟನೆ ಅಮ್ಮನಕೇರಿ ಕ್ರಾಾಸ್ನ ರಾಷ್ಟ್ರೀಯ ಹೆದ್ದಾಾರಿ-50ರಲ್ಲಿ ಬುಧವಾರ ನಡೆದಿದೆ.
ಕೇರಳದ ತ್ರಿಿಶೂರ್ ಜಿಲ್ಲೆೆಯ ಗುರುವಾಯೂರಿನ ಶ್ರೀಕೃಷ್ಣ ಕಾಲೇಜಿನ ಪದವಿ ಹಾಗೂ ಸ್ನಾಾತಕೋತ್ತರ ಪದವಿ ಕಾಲೇಜಿನ ಪೊ್ರೇಸರ್ ಲಕ್ಷ್ಮಿಿ ಅವರ ಕಾಲುಗಳು ಸಂಪೂರ್ಣ ಗಾಯಗೊಂಡಿವೆ. ವಿದ್ಯಾಾರ್ಥಿಗಳಾದ ಅತುಲ್ಯ, ಅವನಿ, ಅತುಲ್, ಅಜೇಯ್ ರಾಜ್, ಅನುಗ್ರಹ ಅವರು ತೀವ್ರವಾಗಿ ಗಾಯಗೊಂಡಿದ್ದಾಾರೆ. ಒಟ್ಟು 10 ವಿದ್ಯಾಾರ್ಥಿಗಳು ಹಾಗೂ 21 ವಿದ್ಯಾಾರ್ಥಿನಿಯರು ಹಂಪೆ, ದಾಂಡೇಲಿ, ಗೋಕರ್ಣ ಸೇರಿ ವಿವಿಧ ಸ್ಥಳಗಳ ವೀಕ್ಷಣೆಗೆ ನಿರ್ಧರಿಸಿದ್ದರು.

