ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.04:
ಬಳ್ಳಾಾರಿ ನಗರದ ಪಾರ್ವತಿನಗರದ ಪದ್ಮಾಾವತಿ ಕಿಡ್ನಿಿಕೇರ್ ಆಸ್ಪತ್ರೆೆ ಬಸವೇಶ್ವರ ನಗರದ ದ್ವಾಾರಕಾ ಆಸ್ಪತ್ರೆೆ (ಶಾಂತಾ ಸೀತಾರಾಂ ಆಸ್ಪತ್ರೆೆ)ಯವರು ಮೆಡಿಕಲ್ ವೇಸ್ಟ್ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆೆಯನ್ನು ಕೈಗೊಳ್ಳದೇ, ತೀವ್ರ ನಿರ್ಲಕ್ಷ್ಯಕ್ಕೆೆ ಒಳಗಾಗಿದ್ದರು. ಇದರಿಂದ ಬೇಸತ್ತಿಿದ್ದ ಮಹಾನಗರ ಪಾಲಿಕೆಯ ಅಧಿಕಾರಿ – ಸಿಬ್ಬಂದಿಗಳು, ಬುಧವಾರ ಬೆಳಗ್ಗೆೆ, ಮೆಡಿಕಲ್ ವೇಸ್ಟ್ ಅನ್ನು ಆಸ್ಪತ್ರೆೆಯ ಮುಂಭಾಗದಲ್ಲಿ ಹಾಕಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಮೇಯರ್ ಪಿ. ಗಾದೆಪ್ಪ ಅವರು, ಪರಿಸ್ಥಿಿತಿ ಹೀಗೇ ಮುಂದುವರೆದಲ್ಲಿ ಲೈಸೆನ್ಸ್ ರದ್ದತಿಗೆ ಮುಂದಾಗುತ್ತೇವೆ ಎಂದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಆಯುಕ್ತ ಪಿ.ಸಿ. ಮಂಜುನಾಥ್ ಅವರು, ಎರಡು ಆಸ್ಪತ್ರೆೆಗಳು ಮೆಡಿಕಲ್ ವೇಸ್ಟ್ ಅನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಅನೇಕಸಲ ಮನವಿ ಮಾಡಲಾಯಿತು. ಆದರೆ, ಆಸ್ಪತ್ರೆೆಗಳ ಸಿಬ್ಬಂದಿಗಳು ನಿರ್ಲಕ್ಷ್ಯವಹಿಸಿದರು. ಕಾರಣ, ನಮ್ಮ ಸಿಬ್ಬಂದಿಗಳು ಕಸವನ್ನು – ಮೆಡಿಕಲ್ ವೇಸ್ಟ್ ಅನ್ನು ಆಯಾ ಆಸ್ಪತ್ರೆೆಗಳ ಮುಂದೆ ಹಾಕಿ, ತಮ್ಮ ಸಿಟ್ಟನ್ನು ತೋರಿಸಿರುವುದು ಸ್ವಾಾಗತಾರ್ಹ ಎಂದರು.

