ಸುದ್ದಿಮೂಲ ವಾರ್ತೆ ಬೀದರ್, ೆ.04:
ತಾಳ್ಮೆೆಯಿಂದ ಜವಾಬ್ದಾಾರಿ ವಹಿಸಿಕೊಂಡು ರಾಜ್ಯ ಸಮ್ಮೇಳನ ಯಶಸ್ವಿಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ ಲೋಕೇಶ ಹೇಳಿದರು.
ನಗರದ ಜಿಲ್ಲಾ ಪತ್ರಿಿಕಾ ಭವನದಲ್ಲಿ ಮಂಗಳವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಜರುಗಿದ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಅವರು, ಹಳಬರು ಹಾಗೂ ಹೊಸಬರು ಎಲ್ಲರು ಒಟ್ಟಾಾಗಿದ್ದಿರಿ. ಅದಕ್ಕಾಾಗಿ ಬೀದರ್ ಗೆ ಸಮ್ಮೇಳನ ನೀಡಲಾಗಿದೆ. ಸಮ್ಮೇಳನಕ್ಕೆೆ ಕೇವಲ 42 ದಿನಗಳು ಬಾಕಿ ಇವೆ. ಸಮ್ಮೇಳನಕ್ಕೆೆ ಬಂದವರಿಗೆ ಮಾತ್ರ ಶುಲ್ಕ ಪಡೆದು ರಸಿದಿ ಹಾಗೂ ಕಾಣಿಕೆ ನೀಡಬೇಕು. ವಸತಿ ಕೆಲಸ ಬಹಳ ಮುಖ್ಯ. ಊಟದ ವ್ಯವಸ್ಥೆೆ ಮಾಡಿಸುವಲ್ಲಿ ಉತ್ತರ ಕರ್ನಾಟಕದವರು ಯಾವತ್ತೂ ಎತ್ತಿಿದ ಕೈ. ಅನುಭವಿ ಪತ್ರಕರ್ತರಿಗೆ ಸಮಿತಿಗಳ ಜವಾಬ್ದಾಾರಿ ನೀಡಬೇಕಾಗಿದೆ ಎಂದರು. ಬೀದರ್ ಜಿಲ್ಲೆಯ ಎಲ್ಲ ಪತ್ರಕರ್ತರ ಕುಟುಂಬ ಸಮ್ಮೇಳನದಲ್ಲಿ ಭಾಗಿಯಾಗಿ ಒಟ್ಟಾಾರೆ ಸಮ್ಮೇಳನ ಯಶಸ್ವಿಿಗೆ ಕಂಕಣಬದ್ದರಾಗುವಂತೆ ಲೋಕೇಶ ತಿಳಿಸಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಅನಂದ ದೇವಪ್ಪ ಪ್ರಾಾಸ್ತಾಾವಿಕ ಮಾತನಾಡಿದರು.ಮಾಜಿ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕುರ, ಮಾಜಿ ಜಿಲ್ಲಾಧ್ಯಕ್ಷರಾದ ಡಿ.ಕೆ ಗಣಪತಿ, ಬಸವರಾಜ ಕಾಮಶೆಟ್ಟಿಿ, ಮಲ್ಲಿಕಾರ್ಜುನ ಬಿರಾದಾರ, ಹಿರಿಯ ಪತ್ರಕರ್ತ ದೀಪಕ ವಾಲಿ, ಮಲ್ಲಿಕಾರ್ಜುನ ಮರಕಲೆ, ಇತರರು ತಮ್ಮ ಅನುಭವ ಹಂಚಿಕೊಂಡರು.
ಅಪ್ಪಾಾರಾವ ಸೌದಿ ಸರ್ವರನ್ನು ಸ್ವಾಾಗತಿಸಿ, ಶಿವ ಕುಮಾರ ಸ್ವಾಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

