ಸುದ್ದಿಮೂಲ ವಾರ್ತೆ ಮಾನ್ವಿ, ೆ.06:
ಪ್ರತಿವರ್ಷದಂತೆ ಈ ವರ್ಷವೂ ಮಾನ್ವಿಿ ತಾಲೂಕಿನ ನೀರಮಾನ್ವಿಿ ಶ್ರೀ ಯಲ್ಲಮ್ಮದೇವಿ ರಥೋತ್ಸವ ಹಾಗೂ ಜಾತ್ರಾಾ ಮಹೋತ್ಸವ ಶುಕ್ರವಾರ ಸಂಜೆ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆೆಯಿಂದಲೇ ಭಕ್ತರು ದೇವಿಗೆ ಕಾಯಿ, ಕರ್ಪೂರ, ಹರಕೆ, ದೀಡ್ ನಮಸ್ಕಾಾರಗಳನ್ನು ಹಾಕಿ ನಮನಗಳನ್ನು ಸಲ್ಲಿಸಿದರು.
ಹೂವಿನಿಂದ ಅಲಂಕೃತ ಮಾಡಲಾಗಿದ್ದ ದೇವಿಯ ರಥಕ್ಕೆೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ, ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪೂಜೆ ಸಲ್ಲಿಸಿ, ಕಾಯಿ ಒಡೆಯುವುದರ ಮೂಲಕ ರಥೋತ್ಸವಕ್ಕೆೆ ಚಾಲನೆ ನೀಡಿದರು.
ರಥೋತ್ಸವ ಜರುಗುತ್ತಿಿದ್ದಂತೆಯೇ ಭಕ್ತರು ಉಧೋ, ಉಧೋ ಯಲ್ಲಮ್ಮ ಎಂದು ದೇವಿಯ ಜಯಘೋಷ ಮಾಡಿ ತಮ್ಮ ಅರಿಕೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಯಲ್ಲಮ್ಮದೇವಿ ದೇವಸ್ಥಾಾನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಮಾನ್ವಿಿ ತಹಸೀಲ್ದಾಾರ್ ಭೀಮರಾಯ ರಾಮಸಮುದ್ರ, ಗ್ರೇೇಡ್-2 ತಹಸೀಲ್ದಾಾರ್ ಅಬ್ದುಲ್ ವಾಹೀದ್, ಮುಖಂಡರಾದ ಶಿವರಾಜ ನಾಯಕ ಬಲ್ಲಟಗಿ ವಕೀಲರು, ರಾಜಾ ರಾಮಚಂದ್ರ ನಾಯಕ, ಗೋಪಾಲ್ ನಾಯಕ ನೀರಮಾನ್ವಿಿ, ಕಂದಾಯ ನಿರೀಕ್ಷಕ ಹಾಗೂ ದೇವಸ್ಥಾಾನ ಆಡಳಿತ ಮಂಡಳಿಯ ಕಾರ್ಯದರ್ಶಿ ಚರಣ್ ಸಿಂಗ್ ಠಾರ್ಕೂ, ದೇವಸ್ಥಾಾನದ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಅಪಾರ ಸಂಖ್ಯೆೆಯ ಭಕ್ತರು ಭಾಗವಹಿಸಿದ್ದರು.
ಸಿಂಧನೂರು ಡಿವೈಎಸ್ಪಿಿ ಚಂದ್ರಶೇಖರ ನಾಯಕ ಹಾಗೂ ಮಾನ್ವಿಿ ಪೊಲೀಸ್ ಇನ್ಸ್ಪೆಕ್ಟರ್ ಸೋಮಶೇಖರ ಕೆಂಚರೆಡ್ಡಿಿ ನೇತೃತ್ವದಲ್ಲಿ
ಸೂಕ್ತ ಹಾಗೂ ಬಿಗಿ ಪೊಲೀಸ್ ಬಂದೋಬ್ತ್ ಏರ್ಪಡಿಸಲಾಗಿತ್ತು. ಅಪಾರ ಸಂಖ್ಯೆೆಯ ಜನ ಸೇರಿದ್ದರಿಂದ ರಾಜ್ಯ ಹೆದ್ದಾರಿಯಲ್ಲಿ ಟ್ರಾಾಫಿಕ್ ಜಾಮ್ ಉಂಟಾಗದಂತೆ ಸುವ್ಯವಸ್ಥಿಿತ ಸಂಚಾರ ವ್ಯವಸ್ಥೆೆ ಮಾಡಲಾಗಿತ್ತು.
ವಿಜೃಂಭಣೆಯಿಂದ ಜರುಗಿದ ನೀರಮಾನ್ವಿ ಶ್ರೀ ಯಲ್ಲಮ್ಮದೇವಿ ರಥೋತ್ಸವ

