ಸುದ್ದಿಮೂಲ ವಾರ್ತೆ ದೇವದುರ್ಗ, ೆ.06:
ರಾಜ್ಯದಲ್ಲಿ ಪ್ರಾಾಥಮಿಕ ಮತ್ತು ಪ್ರೌೌಢಶಾಲೆ ಗಳಲ್ಲಿ ಮುಖ್ಯ ಅಡುಗೆ ಯವರಾಗಿ ಮತ್ತು ಅಡುಗೆಯವರಾಗಿ ಹಾಗೂ ಅಡುಗೆ ಸಹಾಯಕಿಯರಾಗಿ ಕೆಲಸ ಮಾಡುವ ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಕೊಡಬೇಕು, ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು ಜೊತೆಗೆ ಬಿಸಿಯೂಟ ನೌಕರರಿಗೆ ನಾಲ್ಕನೇ ದರ್ಜೆ ನೌಕರರು ಎಂದು ಪರಿಗಣಿಸಬೇಕು, ಬೆಲೆ ಏರಿಕೆ ತಕ್ಕಂತೆ ಸಂಬಳ ಜಾಸ್ತಿಿ ಮಾಡಬೇಕು ಎನ್ನುವಜೊತೆಗೆ ಬೇಡಿಕೆಗಳಿಗಾಗಿ ೆಬ್ರವರಿ 12 ರಂದು ರಾಜ್ಯಾಾದ್ಯಂತ ಬಿಸಿಯೂಟ ನೌಕರರು ಬಿಸಿಯೂಟ ಬಂದ್ ಮಾಡಿ ಸಾರ್ವತ್ರಿಿಕ ಮುಷ್ಕರ ಮಾಡುತ್ತೇವೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಮತ್ತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಇದೆ ಸಂದರ್ಭದಲ್ಲಿ ಬಿಸಿಯೂಟ ನೌಕರರ ಸಂಘಟನೆ ಅಧ್ಯಕ್ಷರಾದ ಮರಿಯಮ್ಮ ಕಾರ್ಯದರ್ಶಿ ಶ್ರೀಲೇಖಾ, ಮುಖಂಡರಾದ ಶೋಭಾ , ಮಲ್ಲಮ್ಮ, ಮಂಜುಳಾ ಹಾಗೂ ಸಿಐಟಿಯು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಇದ್ದರು.
ಬಿಸಿಯೂಟ ನೌಕರರಿಗೆ ಕನಿಷ್ಠ ವೇತನಕ್ಕೆ ಒತ್ತಾಯಿಸಿ ೆ.12 ಕ್ಕೆ ಬಿಸಿಯೂಟ ಬಂದ್

