ಸುದ್ದಿಮೂಲ ವಾರ್ತೆ ಮಟ್ಟೂರು, ೆ.06:
ಆಯುರ್ವೇದಿಕ್ ನಿರ್ದೇಶನಾಲಯ ಬೆಂಗಳೂರು, ಆಯುರ್ವೇದಿಕ್ ಜಿಲ್ಲಾಾ ಪಂಚಾಯತ್ ರಾಯಚೂರು, ಆಯುರ್ವೇದಿಕ್ ಆಸ್ಪತ್ರೆೆ ಮಟ್ಟೂರು ಸಹಯೋಗದಲ್ಲಿ, ಉಚಿತ ಮಧುಮೇಹ ತಪಾಸಣಾ ಶಿಬಿರ ಹಾಗೂ ಔಷದ ವಿತರಣೆ ಕಾರ್ಯಕ್ರಮ ಮಟ್ಟೂರು ಗ್ರಾಾಮದಲ್ಲಿ ನಡೆಯಿತು.
ವೈದ್ಯಾಾಧಿಕಾರಿ ಡಾ.ಡಿಎಚ್ ಹುಲ್ಲೂರು ಮಾತನಾಡಿ. ಶ್ರಮವಿಲ್ಲದ ಜೀವನ, ಅತಿಯಾದ ಸಿಹಿ ತಿನುಸುಗಳ ಸೇವನೆ, ಸಮಯಕ್ಕೆೆ ಸರಿಯಾಗಿ ಆಹಾರ ಸೇವನೆ ಮಾಡದೆ ಇರುವುದು, ಅತಿಯಾಗಿ ಆಹಾರ ಸೇವನೆ, ಜೀರ್ಣ ಕೊರತೆಯಿಂದ ಮಧುಮೇಹ ಬರಲು ಕಾರಣವಾಗಿದ್ದು, ಇದರ ಬಗ್ಗೆೆ ಭಯ ಬೇಡ, ಒತ್ತಡವಿಲ್ಲದ ಜೀವನ, ಪ್ರತಿದಿನ ನಿಯಮಿತ ಯೋಗಾಸನ, ನಡಿಗೆ, ಸಿರಿ ಧಾನ್ಯಗಳಾದ ರಾಗಿ, ನವಣೆ, ಹಸಿ ತರಕಾರಿಗಳು, ಮೊಳಕೆ ಒಡೆದ ಕಾಳುಗಳು, ಮಿತವಾಗಿ ಆಹಾರ ಸೇವನೆಯಿಂದ ಮಧು ಮೇಹವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ. ಮದ್ಯಪಾನ, ಧೂಮಪಾನದಂತಹ, ದುಶ್ಚಟಗಳಿಂದ ದೂರವಿದ್ದು ನಾವು ನೀಡುವ ಆಯುರ್ವೇದಿಕ್ ಔಷಧಗಳನ್ನು, ಕೆಲವು ದಿನಗಳ ಕಾಲ ನಿರಂತರವಾಗಿ ಸೇವಿಸುವ ಮೂಲಕ ಮಧುಮೇಹ ನಿಯಂತ್ರಣದ ಜೊತೆಗೆ. ಉತ್ತಮ ಆರೋಗ್ಯಕ್ಕೆೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಯೋಗ ಶಿಕ್ಷಕ ಚಂದ್ರಶೇಖರ್ ಮಾತನಾಡಿ, ಮಧುಮೇಹ ಕಾಯಿಲೆ ನಿಯಂತ್ರಣದಲ್ಲಿಡಲು, ಆಯುರ್ವೇದಿಕ್ ಚಿಕಿತ್ಸಾಾಲಯದ ಯೋಗಾಸನಗಳನ್ನು, ಪ್ರಾಾಣಾಯಾಮದ ಮೂಲಕ ಸಾರ್ವಜನಿಕರಿಗೆ ವಿವರಿಸಿದರು.
ಕಾರ್ಯಕ್ರಮದ ಉದ್ಘಾಾಟನೆ ವಿಎಸ್ಎಸ್ಎನ್ ಅಧ್ಯಕ್ಷ ಪಂಪಣ್ಣ ಜಾವೂರ್ ಮಾತನಾಡಿದರು, ಈವೇಳೆ ದೊಡ್ಡನಗೌಡ ಮಾಲಿ ಪಾಟೀಲ್, ಶಂಕ್ರಪ್ಪ ಬಸಣ್ಣ ನಂದಿಹಳ್ಳಿಿ, ವೀರೇಶ್ ನಂದಿಹಳ್ಳಿಿ, ವೀರೇಶ್ ದಿನ್ನಿಿ, ಬಡೇಸಾಬ್, ಆಯುರ್ವೇದಿಕ್ ಸಿಬ್ಬಂದಿಗಳಾದ, ಲಿಂಗಮ್ಮ, ಗಾಯಿತ್ರಿಿ, ಔಷಧ ವಿತರಕ ನಂದಕಿಶೋರ್, ಶರಣಪ್ಪ ಕುಪ್ಪಿಿಗುಡ್ಡ. ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು, ಆರೋಗ್ಯ ತಪಾಸಣೆಗೆ ಒಳಗಾದ ಸಾರ್ವಜನಿಕರಿಗೆ.ಉಚಿತವಾಗಿ ಮಧುಮೇಹದ ಔಷಧಗಳನ್ನು ವಿತರಿಸಲಾಯಿತು.
ನಿತ್ಯ ಯೋಗಾಸನ- ಸಿರಿಧಾನ್ಯಗಳ ಬಳಕೆಯಿಂದ ಮಧುಮೇಹ ನಿಯಂತ್ರಣ: ಡಾ.ಡಿ. ಎಚ್ ಹುಲ್ಲೂರ

