ಸುದ್ದಿಮೂಲ ವಾರ್ತೆ ಹರಪನಹಳ್ಳಿ, ೆ.07:
ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಲಿತಾಂಶ ಕಳೆದ ವರ್ಷಕ್ಕಿಿಂತ ಈ ವರ್ಷ ಲಿತಾಂಶ ವೃದ್ಧಿಿಗೆ ಅಗತ್ಯ ಕ್ರಮ ಕೈಗೊಳ್ಳಿಿ. ಶಿಕ್ಷಕರು ಸಮಯ ಕಾಲ ಹರಣ ಮಾಡದೆ ತಮ್ಮ ವೃತ್ತಿಿ ಧರ್ಮ ಪಾಲನೆ ಮಾಡಿ ಹೊರಗಿನ ರಾಜಕೀಯ ವಿಚಾರಗಳಿಗೆ ಗಮನ ಕೊಡದೆ ಮಕ್ಕಳ ಉಜ್ವಲ ಭವಿಷ್ಯಕ್ಕೆೆ ದಾರಿ ತೋರಿಸಿ ಎಂದರು.
ಪಟ್ಟಣದ ತಾಲೂಕು ಪಂಚಾಯತ್ ರಾಜೀವ್ ಗಾಂಧಿ ಸಭಾಂಗಣದಲ್ಲಿ ತಾಲೂಕಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ಪಾಲ್ಗೊೊಂಡು ವಿವಿಧ ಇಲಾಖೆಯ ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆ ಮಾಹಿತಿ ಪಡೆದರು.
ಎಸ್ಎಸ್ಎಲ್ಸಿಿ ಪರೀಕ್ಷೆ ಲಿತಾಂಶ ವೃದ್ಧಿಿಗೆ ಶಿಕ್ಷಣ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಗ್ರಾಾಮಗಳಲ್ಲಿ ವಿದ್ಯಾಾರ್ಥಿಗಳ ಪರೀಕ್ಷೆಯನ್ನ ಗಮನದಲ್ಲಿರಿಸಿ ಕೆಲ ದಿನಗಳ ಕಾಲ ಪೋಷಕರ ಟಿವಿ,ಮೊಬೈಲ್ ಮತ್ತು ಇತರೇ ಮನೋರಂಜನೆ ನೀಡುವ ವಸ್ತುಗಳಿಂದ ದೂರವಿರುವಂತ್ತೆೆ ಜಾಗೃತಿ ಮೂಡಿಸುವ ಕೆಲಸವನ್ನ ಕಡ್ಡಾಾಯವಾಗಿ ಮಾಡಬೇಕು ಎಂದು ಎಲ್ಲಾ ಪಿಡಿಓ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೇಸಿಗೆಯಲ್ಲಿ ಗ್ರಾಾಮೀಣ ಭಾಗಕ್ಕೆೆ ನೀರೊದಗಿಸುವುದು ದೊಡ್ಡ ಸವಾಲಾಗಿದ್ದು, ತಾಲೂಕಿನ ಯಾವುದೇ ಗ್ರಾಾಮದಲ್ಲಿ ನೀರಿನ ಸಮಸ್ಯೆೆಯಾಗದಂತೆ ಅಧಿಕಾರಿಗಳು ಜವಾಬ್ದಾಾರಿಯುತವಾಗಿ ಕಾರ್ಯ ನಿರ್ವಹಿಸಬೇಕು, ನೀರಿನ ಅಭಾವವಾದಲ್ಲಿ ಖಾಸಗಿ ಬೋರ್ವೆಲ್ ಮೂಲಕ ಸಮರ್ಪಕ ಮೂಲ ವ್ಯವಸ್ಥೆೆ ಕಲ್ಪಿಿಸಿಕೊಡಬೇಕು ಎಂದರು.
ತಾಲೂಕಿನಲ್ಲಿ ಕೇಂದ್ರ ಸರಕಾರ ಜಲಜೀವನ ಮಿಷನ್ ಎಂಬ ಮಹತ್ವದ ಯೋಜನೆ ಯಡಿಯಲ್ಲಿ ಆನೇಕ ಗ್ರಾಾಮಗಳಲ್ಲಿ ಕುಡಿಯಲು ನೀರು ಬರುತ್ತಿಿಲ್ಲ. ನಳಗಳು ಹಾಳಾಗುತ್ತಿಿವೆ ಎಂದು ಗ್ಯಾಾರಂಟಿ ಯೋಜನೆಯ ಅಧ್ಯಕ್ಷ ಉದಯಶಂಕರ್ ಸಭೆಯ ಗಮನಕ್ಕೆೆ ತಂದರು. ಕೇವಲ ರಾಜ್ಯವಲ್ಲದೆ ಇಡೀ ದೇಶಾದ್ಯಂತ ಅತ್ಯಂತ ಕಳಪೆ ಮಟ್ಟದಲ್ಲಿ ನಡೆದಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಆಕ್ರೋೋಶ ವ್ಯಕ್ತಪಡಿಸಿದರು.
ತಹಶೀಲ್ದಾಾರ ಬಿ.ವಿ.ಗಿರೀಶ್ ಬಾಬು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ, ನಗರಸಭೆ ಪೌರಾಯುಕ್ತ ರೇಣುಕಾ ದೇಸಾಯಿ ಗ್ಯಾಾರಂಟಿ ಯೋಜನೆಯ ಅನುಷ್ಠಾಾನ ಸಮಿತಿಯ ಅದ್ಯಕ್ಷ ಉದಯಶಂಕರ್, ಎಇಇ ರಾಘವೇಂದ್ರ, ಆರ್ ಡಿ ಪಿ ಆರ್ ನ ಕುಬೇಂದ್ರನಾಯ್ಕ್, ಕೃಷಿ ಇಲಾಖೆಯ ಜಯಸಿಂಹ, ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಾಪಕಿ ಎಂ ಮಂಜುಳಾ ಸಮಾಜ ಕಲ್ಯಾಾಣಾಧಿಕಾರಿ ಎಸ್.ಆರ್.ಗಂಗಪ್ಪ, ಬಿಸಿಎಂ ಸಹಾಯಕ ನಿರ್ದೇಶಕ ಭೀಮಪ್ಪ, ಪರಿಶಿಷ್ಟ ಪಂಗಡ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ ಇಲಾಖೆಯ ಇಬ್ರಾಾಹಿಂ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕೆಡಿಪಿ ಸಮಿತಿ ಸಭೆಯ ಸದಸ್ಯರು ಹಾಜರಿದ್ದರು.
ಎಸ್ಎಸ್ಎಲ್ಸಿ ಪರೀಕ್ಷಾ ಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಗಮನ ಹರಿಸಲು ಲತಾ ಮಲ್ಲಿಕಾರ್ಜುನ್ ಸೂಚನೆ

