ಸುದ್ದಿಮೂಲ ವಾರ್ತೆ ಸಿಂಧನೂರು, ೆ.07:
ನಗರದ ಹಳೆ ಬಜಾರದಲ್ಲಿರುವ ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾಾನದ ನೂತನ ಕಟ್ಟಡ ಹಾಗೂ ಶ್ರೀ ಆಂಜನೇ ಭಕ್ತಿಿಯಿಂದ ನಡೆಯಿತು.
ಬೆಳಿಗ್ಗೆೆ ಕಣ್ವ ಮಠದ ಶ್ರೀ ವಿದ್ಯಾಾ ಕಣ್ವ ವಿರಾಜತೀರ್ಥ ಶ್ರೀಪಾದಂಗಳವರು ಹುಣಸಿ ಹೊಳೆ, ಮೂರು ಮೈಲ್ ಕ್ಯಾಾಂಪಿನ ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯ ಮಹಾಸ್ವಾಾಮಿಗಳು ಹಾಗೂ ಕಲ್ಮಠದ ಸಿದ್ದಲಿಂಗ ಶಿವಾಚಾರ್ಯರು ಆಂಜನೇಯ ಸ್ವಾಾಮಿಯ ಮೂರ್ತಿಯ ಪ್ರಾಾಣ ಪ್ರತಿಷ್ಠಾಾಪನೆಯನ್ನು ನೆರವೇರಿಸಿದರು. ಇದಕ್ಕೂ ಮುನ್ನ ಹನುಮಂತ ಆಚಾರ್ ಬಾದರ್ಲಿ ನೇತೃತ್ವದಲ್ಲಿ ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಶಾಸಕ ಹಂಪನಗೌಡ ಬಾದರ್ಲಿ, ಸಿಂಧನೂರು ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಸದಸ್ಯ ಖಾಜಿ ಮಲಿಕ್, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರೆಡ್ಡೆೆರ್, ದೇವಸ್ಥಾಾನ ಸಮಿತಿಯ ಅಧ್ಯಕ್ಷ ಶ್ರೇೇಣಿಕರಾಜ ಶೇಟ್, ಕಾರ್ಯದರ್ಶಿ ಸಂಜಯ್ ಪಾಟೀಲ್, ನಗರ ಸಭೆ ಮಾಜಿ ಸದಸ್ಯರಾದ ಗೋವಿಂದರಾವ್ ಕುಲಕರ್ಣಿ, ವೆಂಕಟರಾವ್ (ರಾಜು) ಬಂಡಿ, ಮುಖಂಡರಾದ ನರಸಿಂಹ ಆಚಾರ್ಯ ಪುರೋಹಿತ, ಛತ್ರಪ್ಪ ಕುರಕುಂದಿ, ಹರುಣ್ ಪಾಷಾ ಜಾಗೀರ್ದಾರ್ ,ವಿರುಪಣ್ಣ ಗುಡಿ, ಉಮೇಶ ಗೊಮರ್ಸಿ , ಎಲ್ಲಪ್ಪ ಸುರಪುರ ಸೇರಿದಂತೆ ದೇವಸ್ಥಾಾನ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆೆ ಕಲ್ಪಿಿಸಲಾಗಿತ್ತು.
ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀಪ್ರಸನ್ನ ಆಂಜನೇಯ ಮೂರ್ತಿ ಪ್ರಾಾಣ ಪ್ರತಿಷ್ಠಾಪನೆ

