ಸುದ್ದಿಮೂಲ ವಾರ್ತೆ ಸಿಂಧನೂರು, ೆ.07:
ಆಧುನಿಕತೆಯ ಕಾಲಘಟ್ಟದಲ್ಲಿ ಸ್ವಾಾರ್ಥತೆ ಹೆಚ್ಚುತ್ತಿಿದ್ದು, ವಿದ್ಯಾಾವಂತರೆ ಸಮಾಜಕ್ಕೆೆ ಮಾರಕವಾಗುತ್ತಿಿದ್ದಾಾರೆ. ಸಂಸ್ಕಾಾರವಿಲ್ಲದ ಶಿಕ್ಷಣ ಅಪಾಯಕಾರಿಯಾಗಿದ್ದು, ಶಾಲಾ-ಕಾಲೇಜುಗಳಲ್ಲಿ ಸಂಸ್ಕಾಾರಯುತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಬೆಂಗಳೂರಿನ ವಿವೇಕಾನಂದ ಇನ್ಸ್ಟ್ಯೂಟ್ ಅ್ ಯೂತ್ ಅವೆಕೆನಿಂಗ್ನ ವ್ಯವಸ್ಥಾಾಪಕ ನಿರ್ದೇಶಕ ರಮೇಶ ಉಮ್ರಾಾಣಿ ಅಭಿಪ್ರಾಾಯಪಟ್ಟರು.
ನಗರದ ಸತ್ಯಗಾರ್ಡನ್ನಲ್ಲಿ ಶನಿವಾರ ಹಮ್ಮಿಿಕೊಂಡಿದ್ದ ಸಂಕೇಕ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಾಲಯದ ಅಂತಿಮ ವರ್ಷದ ವಿದ್ಯಾಾರ್ಥಿಗಳ ಬೀಳ್ಕೊೊಡುಗೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಾಸ ನೀಡಿದರು.
ಪ್ರಸ್ತುತ ದಿನಗಳಲ್ಲಿ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗುತ್ತಿಿದ್ದಾಾರೆ. ಶಿಕ್ಷಣ ಎಂದರೆ ಸಾಮರ್ಥ್ಯ. ಅಲೋಚನಾ ಶಕ್ತಿಿ ವೃದ್ದಿಸುವದು. ವಿದ್ಯಾಾರ್ಥಿಗಳಲ್ಲಿ ಆತ್ಮಶಕ್ತಿಿ, ಅಂತಃಶಕ್ತಿಿ ಜಾಗೃತಗೊಳಿಸುವದು. ಬಡತನ ಸೋಲಿಗೆ ಕಾರಣವಲ್ಲ. ಮಕ್ಕಳು ಸಮಾಜಕ್ಕೆೆ, ತಂದೆ-ತಾಯಿಗೆ ಭಾರವಾಗುತ್ತಿಿದ್ದಾಾರೆ. ಸ್ವಾಾಮಿ ವಿವೇಕಾನಂದರ ಚಿಂತನೆಗಳು ಇಂದು ಸಮಾಜಕ್ಕೆೆ ಅಗತ್ಯವಾಗಿವೆ. ಪರೀಕ್ಷೆಗೆ ಬರುವದಿಲ್ಲ ಎನ್ನುವ ಕಾರಣಕ್ಕೆೆ ವಿದ್ಯಾಾರ್ಥಿಗಳು ಓದುತ್ತಿಿಲ್ಲ ಎಂದು ವಿಷಾದಿಸಿದ ಅವರು, ಸರಿಯಾದ ದಾರಿ ಆಯ್ಕೆೆ ಮಾಡಿ ವಿದ್ಯಾಾರ್ಥಿಗಳು ಮುಂದೆ ಬರುತ್ತಾಾರೆ. ಶ್ರದ್ಧೆೆಯಿಂದ ಓದಬೇಕು. ಸತತ ಪ್ರಯತ್ನದಿಂದ ಎಲ್ಲವನ್ನೂ ಸಾಧಿಸಬಹುದು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಾಟಿಸಿದ ನ್ಯಾಾಯವಾದಿ ಹೇಮಲತಾ ಜೋಳದರಾಶಿ ಮಾತನಾಡಿ, ವಿದ್ಯಾಾರ್ಥಿಗಳು ಏನಾಗಬೇಕು ಎನ್ನುವದನ್ನು ಮೊದಲೇ ನಿರ್ಧರಿಸಿ ಆ ದಿಕ್ಕಿಿನತ್ತ ಪಯಣ ಮಾಡಬೇಕಿದೆ. ಗುರಿಯಿದ್ದರೆ ಮಾತ್ರ ಸಾಧನೆ ಸಾಧ್ಯ. ಸಾಧನೆಯ ಕಡೆಗೆ ಸತತ ಪ್ರಯತ್ನ ಮಾಡಬೇಕು ಎನ್ನುವ ಮೂಲಕ ಮಹಿಳಾ ಕಾನೂನುಗಳ ಬಗ್ಗೆೆ ವಿದ್ಯಾಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಕೇತ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಎಸ್.ಬಸವರಾಜ ಮಾತನಾಡಿ, ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ, ಸಂಸ್ಕಾಾರಯುತ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆೆ ಕಟ್ಟಿಿದೆ. ಸಮಾಜಕ್ಕೆೆ ಮೌಲ್ಯಗಳು ಬೇಕಿದೆ. ಮೌಲ್ಯಗಳನ್ನು ನೀಡುವ ಕೆಲಸ ಶಿಕ್ಷಣ ಸಂಸ್ಥೆೆಗಳು ಮಾಡಬೇಕಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಾಚಾರ್ಯ ಬಸವರಾಜ ಬೊಮ್ಮನಾಳ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕ ಬಸವರಾಜ ಜವಳಗೇರಾ, ಆಯನೂರು ಸರಕಾರಿ ಪ್ರೌೌಢಶಾಲೆಯ ಮುಖ್ಯಗುರು ಚನ್ನಬಸಪ್ಪ ಎನ್, ತುರ್ವಿಹಾಳ ಸರಕಾರಿ ಪ್ರೌೌಢಶಾಲೆಯ ಮುಖ್ಯಗುರು ಸತೀಷ, ಸಂಕೇತ ಶಿಕ್ಷಣ ಸಂಸ್ಥೆೆಯ ಕಾರ್ಯದರ್ಶಿ ಎಸ್.ಅನಿಲರಾಜ ವಕೀಲ, ಪದವಿ ಕಾಲೇಜಿನ ಪ್ರಾಾಚಾರ್ಯ ರವಿಕುಮಾರ ವೇದಿಕೆಯಲ್ಲಿದ್ದರು.
ಸಂಕೇತ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ : ಬೀಳ್ಕೊಡುಗೆ ಸಮಾರಂಭ ಸಂಸ್ಕಾರವಿಲ್ಲದ ಶಿಕ್ಷಣ ಅಪಾಯಕಾರಿ – ರಮೇಶ ಉಮ್ರಾಣಿ

