ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.07:
ಸ್ಥಳೀಯ ಸಂಸ್ಥೆೆಗಳು ಮತ್ತು ಪಂಚಾಯಿತಿಗಳ ಚುನಾವಣೆಯನ್ನು ಬ್ಯಾಾಲೆಟ್ ಪೇಪರ್ ಳುೂಲಕ ನಡೆಸಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ಕಾಂಗ್ರೆೆಸ್ ಪಕ್ಷಕ್ಕೆೆ ಸೋಲು ಖಚಿತ ಎಂದು ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಅವರು ತಿಳಿಸಿದ್ದಾಾರೆ.
ಅವರ ಗೃಹ ಕಚೇರಿಯಲ್ಲಿ ಸುದ್ದಿಗಾರರ ಜೊತೆಯಲ್ಲಿ ಶನಿವಾರ ಮಾತನಾಡಿದ ಅವರು, ಕಾಂಗ್ರೆೆಸ್ ಪಕ್ಷವು ಬ್ಯಾಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿ, ಗೆಲ್ಲುವ ವಿಶ್ವಾಾಸದ ಉತ್ಸಾಾಹದಲ್ಲಿದೆ. ಆದರೆ, ವಾಸ್ತವದಲ್ಲಿ ಮುಂಬರುವ ದಿನಗಳಲ್ಲಿ ಯಾವುದೇ ಚುನಾವಣೆ, ಬ್ಯಾಾಲೆಟ್ ಅಥವಾ ಇವಿಎಂ ಆದರೂ ಕಾಂಗ್ರೆೆಸ್ ಸೋಲು ಖಚಿತ ಎಂದು ಹೇಳಿದರು.
ತುಂಗಭದ್ರಾಾ ಜಲಾಶಯದ ಕ್ರಸ್ಟ್ಗೇಟ್ ಅಳವಡಿಸುವ ಕಾಮಗಾರಿಯು ನಿಧಾನಗತಿಯಲ್ಲಿ ನಡೆದಿದೆ. ೆಬ್ರವರಿ 28ರೊಳಗಾಗಿ ಶೇ. 20 ರಷ್ಟು ಪೂರ್ಣಗೊಳಿಸದೆ ಇದ್ದಲ್ಲಿ ಮಾರ್ಚ್ 1 ರಿಂದ ಜಲಾಶಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ನಗರದ ಹೊರ ವಲಯದಲ್ಲಿ ಅಕ್ರಮವಾಗಿ ದಾಸ್ತಾಾನು ಆಗಿರುವ ನಾಲ್ಕು ಸಾವಿರ ಚೀಲ ಯೂರಿಯಾದ ಕುರಿತು ತನಿಖೆ ನಡೆಸಿ, ತಪ್ಪಿಿತಸ್ತರಿಗೆ ಶಿಕ್ಷೆ ಆಗಬೇಕು ಎಂದರು. ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿದ್ದರು.
ಬ್ಯಾಲೆಟ್ ಪೇಪರ್ ಕಾಂಗ್ರೆಸ್ ಸೋಲಿಗೆ ಶ್ರೀಕಾರ : ಬಿ. ಶ್ರೀರಾಮುಲು

