ಸುದ್ದಿಮೂಲ ವಾರ್ತೆ ಕಲಬುರಗಿ, ೆ.07:
ತಾಲೂಕಿನ ಶ್ರೀನಿವಾಸ್ ಸರಡಗಿಯ ಮಹಾಲಕ್ಷ್ಮೀ ಶಕ್ತಿಿ ಪೀಠದ 39ನೇ ಜಾತ್ರಾಾ ಮಹೋತ್ಸವ ಅಂಗವಾಗಿ ಭವ್ಯ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಮಹಾಲಕ್ಷ್ಮೀ ಶಕ್ತಿಿ ಪೀಠಾಧಿಪತಿಗಳಾದ ಡಾ. ಅಪ್ಪಾಾರಾವ ದೇವಿ ಮುತ್ಯಾಾ ಅವರ ಮಾರ್ಗದರ್ಶನದಲ್ಲಿ ನಡೆದ ಭಾವೈಕ್ಯ ಧರ್ಮಸಭೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅರಣ್ಯ ಸಚಿವ ಈಶ್ವರ ಖಂಡ್ರೆೆ ಅವರು ಉದ್ಘಾಾಟಿಸಿದರು. ಕಲಬುರಗಿ ಯುನೈಟೆಡ್ ಆಸ್ಪತ್ರೆೆ ವತಿಯಿಂದ ಉಚಿತ ಆರೋಗ್ಯ ತಪಾಷಣೆ ಶಿಬಿರ ಜರಗಿತು.ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿಿ ಪ್ರದಾನ ಮಾಡಿ ಗೌರವಿಸಲಾಯಿತು.
ಜಾತ್ರಾಾ ಮಹೋತ್ಸವದಲ್ಲಿ ಮುಗಳನಾಗಾಂವ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಚಿಕ್ಕಗುರುನಂಜೇಶ್ವರ ಶ್ರೀಗಳು ಚಿನ್ಮಯಗಿರಿ ವೀರಮಹಾಂತ ಶಿವಾಚಾರ್ಯರು, ಶಿವಕುಮಾರ ಶ್ರೀಗಳು, ಮರಮಾನಂದ ಶ್ರೀಗಳು, ಶಾಂತವೀರ ಶ್ರೀಗಳು, ಶರಣಯ್ಯ ಸ್ವಾಾಮಿಗಳು, ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಿಮೂಡ, ಡಾ.ಸಿದ್ದಲಿಂಗ ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೊಳ, ಬಿಜೆಪಿ ನಗರ ಅಧ್ಯಕ್ಷ ಚಂದು ಪಾಟೀಲ, ಶಿವಾನಂದ ಪಾಟೀಲ್ ಮರತೂರ, ಶರಣಕುಮಾರ್ ಮೋದಿ, ಕಾಂಗ್ರೆೆಸ್ ಮುಖಂಡ ನೀಲಕಂಠರಾವ ಮೂಲಗೆ, ರಾಜು ಲೆಂಗಟಿ, ಅರುಣಕುಮಾರ ಎಸ್. ಪಾಟೀಲ,ವಿನೋದ ಸರಡಗಿ ಇದ್ದರು. ರಾಜ್ಯ ಸೇರಿದಂತೆ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ ರಾಜ್ಯದಿಂದ ಭಕ್ತರು ಆಗಮಿಸಿದ್ದರು.
ಮಹಾಲಕ್ಷಿ ್ಮೀ ಶಕ್ತಿ ಪೀಠದ 39ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿದ ಭವ್ಯ ರಥೋತ್ಸವ

