ಸುದ್ದಿಮೂಲ ವಾರ್ತೆ ಮುದಗಲ್ , ೆ.08:
ಸ್ಥಳೀಯ ಪಟ್ಟಣದ ವಾರ್ಡ್ ನಂ.6ರಲ್ಲಿ ನಗರೋತ್ಥಾಾನ ಯೋಜನೆಯಡಿ 4ನೇ ಹಂತದ ಕಾಮಗಾರಿಗೆ ಲಿಂಗಸುಗೂರು ಶಾಸಕ ಮಾನಪ್ಪ ಡಿ ವಜ್ಜಲ್ ಶನಿವಾರ ಚಾಲನೆ ನೀಡಿದರು.
ಕಾಮಗಾರಿಯ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸಂತೋಷ ಸುರಪುರ ಮನೆಯಿಂದ ಪಟ್ಟಣಶೆಟ್ಟಿಿ ಮನೆವರೆಗೆ, ಈರಣ್ಣ ದೇವಸ್ಥಾಾನ ದಿಂದ ಬಸವರಾಜಪ್ಪನ ಮನೆವರೆಗೆ, ಹಳೆಪೇಟೆ ರಸ್ತೆೆಯಿಂದ ಬೋರವೆಲ್ ಹಾಗೂ ಷಣ್ಮುಖಪ್ಪನ ಮನೆಯಿಂದ ಪಟ್ಟಣಶೆಟ್ಟಿಿ ಮನೆವರೆಗೆ 2.5 ಕೋ.ರೂ ಮೊತ್ತದ ಸಿಸಿ ರಸ್ತೆೆ, ಚರಂಡಿ ಕಾಮಗಾರಿಗಳ ಪ್ಯಾಾಕೇಜ್ ಮಾಡಲಾಗಿದೆ.
ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಕಾಮಗಾರಿ ನೋಡಿಕೊಳ್ಳುತ್ತಿಿದ್ದು. ಕಾಮಗಾರಿಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿಸಲು ಸಂಬಂಧಿಸಿದ ಗುತ್ತೇದಾರರಿಗೆ ಉತ್ತಮ ಗುಣಮಟ್ಟದಿಂದ ಕಾಮಗಾರಿ ನಿರ್ವಹಿಸಬೇಕು ಎಂದು ಸೂಚಿಸಿದರು.
ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಿಹಾಳ, ತಾಲೂಕಾಧ್ಯಕ್ಷ ನಾಗಭೂಷಣ್, ಅಯ್ಯಪ್ಪ ವಕೀಲ, ಹುಲ್ಲೇಶ ಸಾಹುಕಾರ, ಗಿರಿಮಲ್ಲನಗೌಡ, ಮಲ್ಲಪ್ಪ ಮಾಟೂರ, ಕರಿಯಪ್ಪ ಯಾದವ್, ನಾಗರಾಜ್ ತಳುವಾರ, ಉದಯಕುಮಾರ ಕಮ್ಮಾಾರ, ಸಣ್ಣ ಸಿದ್ದಯ್ಯ, ಮಲ್ಲಪ್ಪ ಹೂಗಾರ್, ರವಿ ಕಟ್ಟಿಿಮನಿ, ಮಂಜುನಾಥ ನಂದವಾಡಗಿ, ಚಂದಾವಲಿಸಾಬ, ಕಾಂತು ಪತ್ತಾಾರ್, ಪುರಸಭೆ ಮುಖ್ಯಾಾಧಿಕಾರಿ ಪ್ರವೀಣ್ ಬೋಗಾರ್, ಲೋಕೋಪಯೋಗಿ ಇಲಾಖೆ ಇಂಜನಿಯರ್ ಗಜಾನನ, ಪುರಸಭೆ ಇಂಜನಿಯರ್ ಹಾಗೂ ಅನೇಕರಿದ್ದರು.
ಮುದಗಲ್ : ನಗರೋತ್ಥಾನ ಕಾಮಗಾರಿಗೆ ಶಾಸಕ ಮಾನಪ್ಪ ವಜ್ಜಲ್ ಚಾಲನೆ

