ಸುದ್ದಿಮೂಲ ವಾರ್ತೆ ಬೀದರ್, ೆ.07:
ಜಿಲ್ಲಾ ಯೋಜನಾ ಸಮಿತಿಯ ನಾಲ್ಕು ಸದಸ್ಯ ಸ್ಥಾಾನಗಳಿಗೆ ತರಾತುರಿಯಲ್ಲಿ ಚುನಾವಣೆ ನಡೆಸುತ್ತಿಿರುವುದಕ್ಕೆೆ ಜಿಲ್ಲಾ ಪಂಚಾಯಿತಿ ಚುನಾವಣೆ ಸ್ಪರ್ಧಾ ಆಕಾಂಕ್ಷಿಯಾಗಿರುವ ತಾಲ್ಲೂಕಿನ ಗಾದಗಿ ಗ್ರಾಾಮದ ಮುಖಂಡ ರಾಜಕುಮಾರ ಶೇರಿಕಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗ್ರಾಾಮೀಣ ಸ್ಥಳೀಯ ಸಂಸ್ಥೆೆಗಳ ಪ್ರತಿನಿಧಿಗಳನ್ನು ಹೊರತುಪಡಿಸಿ, ನಗರಸಭೆಗೆ ಆಯ್ಕೆೆಯಾದ ಸದಸ್ಯರನ್ನು ಮಹಾನಗರ ಪಾಲಿಕೆ ಸದಸ್ಯರೆಂದು ಪರಿಗಣಿಸಿ ೆ. 24ಕ್ಕೆೆ ಚುನಾವಣೆ ನಡೆಸುತ್ತಿಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಜಿಲ್ಲಾ ಯೋಜನಾ ಸಮಿತಿ ಜಿಲ್ಲೆಯನ್ನು ಪ್ರತಿನಿಧಿಸುವ ಸಮಿತಿಯಾಗಿದೆ. ಸಮಿತಿಗೆ ಗ್ರಾಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆೆಗಳ ಪ್ರತಿನಿಧಿಗಳನ್ನು ಅನುಪಾತದಂತೆ ಆಯ್ಕೆೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

