ಸುದ್ದಿಮೂಲ ವಾರ್ತೆ ರಾಯಚೂರು, ೆ.09:
ರಾಯಚೂರು ಶಸ ಚಿಕಿತ್ಸಕರ ಸಂಘ, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆೆ, ಶಸ ಚಿಕಿತ್ಸಾಾ ವಿಭಾಗ ಇವರುಗಳ ಸಂಯುಕ್ತಾಾಶ್ರಯದಲ್ಲಿ – 2026ರ ರಾಜ್ಯ ಮಟ್ಟದ ಶಸ ಚಿಕಿತ್ಸಾಾ ಸಮಾವೇಶವನ್ನು ನಗರದ ರಿಮ್ಸ್ ಅಡಿಟೋರಿಯಂ ನಲ್ಲಿ ೆ.13, 14 ಹಾಗೂ 15ರಂದು ಮೂರು ದಿನಗಳ ಕಾಲ ಹಮ್ಮಿಿಕೊಳ್ಳಲಾಗಿದೆ.
ಸಮಾವೇಶವನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಾಭಿವೃದ್ಧಿಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶೆರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಉದ್ಘಾಾಟನೆ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಶಸ ಚಿಕಿತ್ಸಾಾ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಮರುಥು ಪಾಂಡ್ಯನ್, ಶಸ ಚಿಕಿತ್ಸಾಾ ಸಂಘದ ರಾಜಾಧ್ಯಕ್ಷರಾದ ಡಾ.ರಾಜಗೋಪಾಲ ಶಣೈ, ಡಾ.ನಾಗರಾಜ ಭಾಲ್ಕಿಿ ಅವರು ಭಾಗವಹಿಸಲಿದ್ದಾರೆ.
ಈ ಸಮಾವೇಶಕ್ಕೆೆ ರಾಷ್ಟ್ರ, ರಾಜ್ಯ ಮಟ್ಟದ ಒಂದೂ ಸಾವಿರಕ್ಕೂ ಹೆಚ್ಚು ಶಸ ಚಿಕಿತ್ಸಾಾ ತಜ್ಞರುಗಳು ಭಾಗವಹಿಸಲಿದ್ದಾರೆ ಎಂದು ರಿಮ್ಸ್ ಬೋಧಕ ಆಸ್ಪತ್ರೆೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಎಸ್.ಡಿ. ಮಂಡೋಲ್ಕರ್, ಸಂಘಟನಾ ಕಾರ್ಯದರ್ಶಿಗಳು ಆಗಿರುವ ರಾಜೀವಗಾಂಧಿ ಸೂಪರ್ ಸ್ಪೇಷಾಲಿಟಿ (ಓಪೆಕ್) ಅಸ್ಪತ್ರೆೆಯ ವಿಶೇಷಾಧಿಕಾರಿಗಳಾದ ಡಾ.ರಮೇಶ ಸಿ.ಸಾಗರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

