ಸುದ್ದಿಮೂಲ ವಾರ್ತೆ ಮಾನ್ವಿ, ೆ.09:
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಾಗೂ ಕಾರ್ಮಿಕ ಕೋಡ್ಗಳನ್ನು ಹಿಂಪಡೆಯಬೇಕು ಎಂಬಿತ್ಯಾಾದಿ ಬೇಡಿಕೆಗಳನ್ನು ಇಟ್ಟುಕೊಂಡು ೆ.12 ರಂದು ಕಾರ್ಮಿಕ
ಸಂಘಟನೆಗಳು ದೇಶವ್ಯಾಾಪಿ ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಿಕ ಮುಷ್ಕರಕ್ಕೆೆ ರಾಜ್ಯಾಾದ್ಯಂತ ಬೆಂಬಲ ನೀಡಿ ಹೋರಾಟದಲ್ಲಿ ಭಾಗವಹಿಸುವುದಾಗಿ ಸಿಐಟಿಯು ತಾಲೂಕಾಧ್ಯಕ್ಷ ಹೆಚ್.ಶರ್ುದ್ದೀನ್ ಪೋತ್ನಾಾಳ್ ಹಾಗೂ ಎಐಕೆಎಸ್ ರಾಜ್ಯಾಾಧ್ಯಕ್ಷ ಬಸವಲಿಂಗಪ್ಪ ನಗನೂರು ತಿಳಿಸಿದರು.
ಸೋಮವಾರ ಪತ್ರಿಿಕಾ ಭವನದಲ್ಲಿ ಪ್ರತ್ಯೇಕ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಹಾಗೂ ಕಾರ್ಪೊರೇಟ್ ವಲಯಗಳಿಗೆ ಆದ್ಯತೆ ನೀಡುತ್ತಿಿರುವ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಮುಷ್ಕರಕ್ಕೆೆ ಕರೆ ನೀಡಲಾಗಿದೆ. ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಕಾರ್ಮಿಕರಿಗೆ, ರೈತರಿಗೆ ಸೌಲಭ್ಯ ಒದಗಿಸದೇ ತೆರಿಗೆಗಳ ಭಾರ ಹೆಚ್ಚಿಿಸುತ್ತಿಿದೆ. ಕಾರ್ಮಿಕರಿಗೆ ಮೂಲ ಸೌಲಭ್ಯ ನೀಡುವಲ್ಲಿ ವಿಲವಾಗಿ, ಕೇವಲ ಕಾರ್ಪೊರೇಟ್ ಸಂಸ್ಥೆೆಗಳು ಹೇಳಿದಂತೆ ಕುಣಿಯುತ್ತಿಿದೆ ಎಂದರು.
ಕೇಂದ್ರ ಸರ್ಕಾರವು, ನರೇಗಾ ಕಾಯ್ದೆೆಯಡಿಯಲ್ಲಿ ಖಾತರಿ ಪಡಿಸಲಾದ ಕೆಲಸ, ಕೆಲಸದ ಹಕ್ಕನ್ನು ಕಸಿದುಕೊಳ್ಳುವುದರ ಜೊತೆಗೆ ಗ್ರಾಾಮೀಣ ಶ್ರಮ ಜೀವಿಗಳ ಕೊಂಡುಕೊಳ್ಳುವ ಸಾಮರ್ಥ್ಯ ಕಡಿಮೆ ಮಾಡುವುದು ಮತ್ತು ಕೃಷಿ ಕಾರ್ಮಿಕರ ಮತ್ತು ಇತರೆ ಗ್ರಾಾಮೀಣ ಕಾರ್ಮಿಕರ ವೇತನವನ್ನು ನಿಗ್ರಹಿಸುತ್ತಿಿದೆ. ವಿದ್ಯುತ್ ಶಕ್ತಿಿಯನ್ನು ಖಾಸಗೀಕರಿಸಿ ವಿದ್ಯುತ್ ಪ್ರಸರಣ, ವಿತರಣಾ ವ್ಯವಸ್ಥೆೆಯ ಅನುಷ್ಠಾಾನ ಮತ್ತು ನಿರ್ವಹಣೆಯನ್ನು ಖಾಸಗಿ ಬಂಡವಾಳಗಾರರಿಗೆ ಕೊಡುತ್ತಿಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಕಾರಣ ೆ.12 ರಂದು ನಡೆಯುವ ಮುಷ್ಕರದಲ್ಲಿ ಕಾರ್ಮಿಕ, ರೈತ, ಕೂಲಿಕಾರ, ದಲಿತ, ಮಹಿಳಾ ಸಂಘಟನೆಗಳು ಹಾಗೂ ವಿದ್ಯಾಾರ್ಥಿ ಯುವ ಜನ ಸಂಘಟನೆಗಳು ಭಾಗವಹಿಸಿ ಯಶಸ್ವಿಿಗೊಳಿಸಬೇಕು ಎಂದು ಹೆಚ್.ಶರ್ುದ್ದೀನ್ ಪೋತ್ನಾಾಳ್ ಮತ್ತು ಬಸವಲಿಂಗಪ್ಪ ನಗನೂರು ಮನವಿ ಮಾಡಿದರು.
ಹೆಚ್. ಶರ್ುದ್ದೀನ್ ಪೋತ್ನಾಾಳ್ ಇವರ ಪತ್ರಿಿಕಾಗೋಷ್ಠಿಿಯಲ್ಲಿ ಎಐಟಿಯುಸಿ ತಾಲೂಕಾಧ್ಯಕ್ಷ ಸಿದ್ರಾಾಮಯ್ಯಸ್ವಾಾಮಿ ಅಕ್ಷರ ದಾಸೋಹ ಕಾರ್ಮಿಕ ಸಂಘಟನೆ ಅಧ್ಯಕ್ಷೆ ಥೇರೆಸಾ ಪಟ್ಟದಕಲ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಚನ್ನಮ್ಮ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಬಾಯಿ ಪೆರಿಕಲ್, ಖಜಾಂಚಿ ಗಂಗೂರೇಖಾ ಗೋಪಾಲ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರುದ್ರಪ್ಪನಾಯಕ, ಸಿಐಟಿಯು ತಾಲೂಕಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಉಪಸ್ಥಿಿತರಿದ್ದರು.
ಬಸವಲಿಂಗಪ್ಪ ನಗನೂರು ಇವರ ಪತ್ರಿಿಕಾಗೋಷ್ಠಿಿಯಲ್ಲಿ ಎಐಕೆಎಸ್ ತಾಲೂಕಾಧ್ಯಕ್ಷ ವಿ.ಮುದುಕಪ್ಪನಾಯಕ ನೀರಮಾನ್ವಿಿ, ಉಪಾಧ್ಯಕ್ಷ ಆನಂದ ಭೋವಿ, ಸದಸ್ಯರಾದ ಯಲ್ಲಪ್ಪ ನಾಯಕ, ಪ್ರಸಾದ ಕುರ್ಡಿ, ದಿಲೀಪ್ ಟೇಲರ್, ಆಂಜನೇಯ ನಾಯಕ, ದೇವೇಂದ್ರ ಉಪಸ್ಥಿಿತರಿದ್ದರು.
ಮಾನ್ವಿ: ೆ.12 ರ ಅಖಿಲ ಭಾರತ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಬೆಂಬಲ

