ಸುದ್ದಿಮೂಲ ವಾರ್ತೆ ತೆಕ್ಕಲಕೋಟೆ, ೆ.09:
ಬಳ್ಳಾಾರಿ ಜಿಲ್ಲೆೆಯ ತೆಕ್ಕಲಕೋಟೆ ಪಟ್ಟಣದ ಹೊರವಲಯದಲ್ಲಿ ಇರುವ ‘ಗೌಡ್ರ ಮೂಲೆ ಬೆಟ್ಟ’ದಲ್ಲಿ ಅಂದಾಜು 5,000 ವರ್ಷಗಳ ಹಿಂದಿನ ಮಾನವನ ಅಸ್ತಿಿಪಂಜರ ಸಿಕ್ಕಿಿರುವಲ್ಲಿಗೆ ಸಾರ್ವಜನಿಕರು, ಆಸಕ್ತರು ಮತ್ತು ಕುತೂಹಲಿಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ಆಗಮಿಸುತ್ತಿಿದ್ದಾಾರೆ.
ಅಮೆರಿಕಾದ ಹಾರ್ಟ್ವಿಕ್ ವಿಶ್ವವಿದ್ಯಾಾಲಯದ ಪ್ರಾಾಧ್ಯಾಾಪಕಿ ಹಾಗೂ ಉತ್ಪನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ಅವರು ಮೂರು ತಿಂಗಳಿನಿಂದ ಈ ಸ್ಥಳದಲ್ಲಿ ಉತ್ಖನನ ನಡೆಸುತ್ತಿಿದ್ದು, ತೆಕ್ಕಲಕೋಟೆ ಸುತ್ತಮುತ್ತಲಿನ ಹಿರೇಅರ್ಲ, ಬೂದಿದಿಬ್ಬ, ಬಾಳೆತೋಟ, ಜಕ್ಕೇರುಗುಡ್ಡ ಮತ್ತು ಉಡೇದಗುಡ್ಡ ಪ್ರದೇಶಗಳಲ್ಲಿ ಮೂರು ತಂಡಗಳು ಉತ್ಪನನ ಹಾಗೂ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿವೆ.
ಅಪರೂಪದ ಪಳೆಯುಳಿಕೆ ಪತ್ತೆೆಯಾಗಿರುವ ವಿಷಯ ಪ್ರಚಾರ ಪಡೆಯುತ್ತಿಿದ್ದಂತೆಯೇ ಸಾರ್ವಜನಿಕರು, ಇತಿಹಾಸಾಸಕ್ತರು, ಕುತೂಹಲಿಗಳು ಮತ್ತು ಮುಖಂಡರು ಸ್ಥಳಕ್ಕೆೆ ಭೇಟಿ ನೀಡುತ್ತಿಿದ್ದಾಾರೆ.
ಬಿಜೆಪಿ ಯುವ ಮೋರ್ಚಾ ಜಿಲ್ಲಾಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ ಅವರು ಉತ್ಖನನದ ಸ್ಥಳಕ್ಕೆೆ ಸೋಮವಾರ ಭೇಟಿ ನೀಡಿ, ತೆಕ್ಕಲಕೋಟೆಯಲ್ಲಿ ನಡೆಯುತ್ತಿಿರುವ ಉತ್ಖನನದ ವಿಷಯವನ್ನು ಪಠ್ಯಗಳಲ್ಲಿ ಸೇರಿಸಬೇಕು. ಈ ಪಟ್ಟಣದ ಸುತ್ತಲೂ ಸಂಶೋಧನೆ ನಡೆಸಿ, ಭೂಗತವಾಗಿರುವ ಸ್ಮಾಾರಕ , ಪಳಯುಳಿಕೆಗಳನ್ನು ಹೊರ ತೆಗೆದು ಜನರಿಗೆ ತಿಳಿಸಲು ಈ ಪಟ್ಟಣದಲ್ಲಿ ಅತ್ಯಾಾಧುನಿಕ ಮ್ಯೂಜಿಯಂ ತೆರೆಯಬೇಕು ಎಂದು ಆಗ್ರಹಿಸಿದರು.
ಉತ್ಖನನ : ತೆಕ್ಕಲಕೋಟೆಯತ್ತ ಚಿತ್ತ

