ಸುದ್ದಿಮೂಲ ವಾರ್ತೆ ಸಿಂಧನೂರು, ೆ.10:
ಸರಕಾರ ಮಹತ್ವಾಾಕಾಂಕ್ಷಿ ಯೋಜನೆಯಾದ ಅನ್ನ ಸುವಿಧ ಯೋಜನೆಯಡಿ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಹಾರ ಧಾನ್ಯಗಳ ವಿತರಣೆಯಲ್ಲಿ ನಿಯಮಗಳನ್ನು ಸರಳೀಕರಣ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಸಿಂಧನೂರು ತಾಲೂಕಾ ಘಟಕ ಒತ್ತಾಾಯಿಸಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಅಧ್ಯಕ್ಷ ರಾಜಶೇಖರ ತುರ್ವಿಹಾಳ ಮಾತನಾಡಿ, ಹಿರಿಯ ಪ್ರತಿ ನಾಗರಿಕರಿಗೆ 10 ಕೆಜಿ ಅಕ್ಕಿಿ ಮನೆ ಬಾಗಿಲಿಗೆ ತೆರಳಿ ನೀಡುವ ಮಾರ್ಗಸೂಚಿ ತಂದಿರುವದು ಶ್ಲಾಾಘನೀಯ. ಆದರೆ ಹಿರಿಯ ನಾಗಕರಿಕ ಬಯೋಮೆಟ್ರಿಿಕ್ ಪಡೆದು ಆಹಾರ ಧಾನ್ಯಗಳನ್ನು ವಿತರಿಸುವದು ವಾಸ್ತವಿಕವಾಗಿ ಸಮಸ್ಯೆೆಯಾಗುತ್ತಿಿದೆ. 75 ವರ್ಷ ಮೇಲ್ಪಟ್ಟವರ ಬೆರಳಚ್ಚು ಸ್ಪಷ್ಟವಾಗಿರದ ಹಿನ್ನಲೆಯಲ್ಲಿ ಈ ಪ್ರಕ್ರಿಿಯೆ ಅಸಾಧ್ಯವಾಗುತ್ತಿಿದೆ. ಇದರಿಂದ ಲಾನುಭವಿಗಳಿಗೆ, ನ್ಯಾಾಯಬೆಲೆ ಅಂಗಡಿಗಳ ಸಂಚಾಲಕರಿಗೆ ತೊಂದರೆಯಾಗುತ್ತಿಿದೆ. ಹಿರಿಯ ನಾಗರಿಕರಿಗೆ ಪಡಿತರ ವಿತರಣೆ ಸಂದರ್ಭದಲ್ಲಿ ಬೆರಳಚ್ಚು ಬದಲಾಗಿ ಓಟಿಪಿ ಮೂಲಕ ವಿತರಣೆ ಹಾಗೂ ಲಾನುಭವಿಗಳ ಮನೆಗಳು ಮುಂದೆ ಜಿಪಿಎಸ್ ಭಾವಚಿತ್ರ ತೆಗೆದು ಇಲಾಖೆ ಅಧಿಕಾರಿಗಳಿಗೆ ವಾಟ್ಸ್ಆ್ಯಪ್ ಮೂಲಕ ಅಪ್ಲೋಡ್ ಮಡುವದನ್ನು ದಾಖಲಾತಿಯಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ ಅವರು, ನ್ಯಾಾಯಬೆಲೆ ಅಂಗಡಿಗಳ ಸಂಚಾಲಕರಿಗೆ ಸರಕಾರದಿಂದ ಬರಬೇಕಾದ 4 ತಿಂಗಳ ಕಮಿಷನ್ ಬಿಡುಗಡೆ ಮಾಡಬೇಕು ಎಂದು ಒತ್ತಾಾಯಿಸಿದರು.
ಈ ಸಂದರ್ಭದಲ್ಲಿ ಪಡಿತರ ವಿತರಕರಾದ ಎಂ.ಡಿ.ಸಲೀಮ್, ಸೂಗೂರಯ್ಯ ಸ್ವಾಾಮಿ, ಪಂಪನಗೌಡ ಬನ್ನಿಿಗನೂರು ಹಾಗೂ ಇತರರು ಇದ್ದರು.
ನ್ಯಾಯಬೆಲೆ ಅಂಗಡಿಗಳ ಸಂಚಾಲಕರಿಂದ ಉಪನಿರ್ದೇಶಕರಿಗೆ ಮನವಿ ಹಿರಿಯ ನಾಗರಿಕರಿಗೆ ನಿಯಮ ಸರಳೀಕರಿಸಲು ಮನವಿ

