ಸುದ್ದಿಮೂಲ ವಾರ್ತೆ ರಾಯಚೂರು, ೆ.10:
ಕಾರ್ಮಿಕ ವಿರೋಧಿಯಾಗಿರುವ ನಾಲ್ಕು ಸಂಹಿತೆಗಳ ಖಂಡಿಸಿ ೆ.12ರಂದು ನಡೆಯುವ ಮುಷ್ಕರ ಸ್ವಯಂ ಪ್ರೇರಿತವಾಗಿ ಬೆಂಬಲಿಸಲು ಕೋರಿ ಇಂದು ನಗರದಾದ್ಯಂತ ಬೈಕ್ ರ್ಯಾಾಲಿ ನಡೆಸಲಾಯಿತು.
ಇಂದು ನಗರದ ಅಂಬೇಡ್ಕರ್ ವೃತ್ತದ ಬಳಿ ಜಮಾಯಿಸಿದ ಜಸಿಟಿಯು ಕಾರ್ಮಿಕ ಒಕ್ಕೂಟದ ಮುಖಂಡರು ಪ್ರಮುಖ ರಸ್ತೆೆಘಿಗಳಲ್ಲಿ ಬೈಕ್ ರ್ಯಾಾಲಿ ನಡೆಸಿ ಬುಧವಾರದ ಮುಷ್ಕರಕ್ಕೆೆ ಬೆಂಬಲಿಸಿ ಅಂಗಡಿ ಮುಂಗಟ್ಟು ಬಂದ್ ಮಾಡಬೇಕು ಎಂದು ಕೋರಿದರು.
ಕೇಂದ್ರ ಸರ್ಕಾರ ದುಡಿಯುವ ವರ್ಗದ ವಿರೋಧಿ 4 ಕಾರ್ಮಿಕ ಸಂಹಿತೆಗಳ ಜಾರಿ ಮಾಡಲಾಗುತ್ತಿಿದೆ. ಅದನ್ನು ರಾಜ್ಯ ಸರ್ಕಾರವೂ ಅನುಷ್ಠಾಾನಕ್ಕೆೆ ಮುಂದಾಗಿದ್ದು ತಕ್ಷಣ ಅದನ್ನು ವಾಪಾಸ್ ಪಡೆಯಲು ಆಗ್ರಹಿಸಿ ಈ ಹೋರಾಟ ಮಾಡಲಾಗುತ್ತಿಿದೆ . ಅಲ್ಲದೆ, ಕೃಷಿ ಕೂಲಿಕಾರರಿಗೆ ಅನುಕೂಲ ಮಾಡಿಕೊಡಬೇಕಿದ್ದ ಉದ್ಯೋೋಗ ಖಾತ್ರಿಿಗೆ ವಿ.ಬಿ.ಜಿ. ರಾಮ್ಜಿ ಎಂದು ಹೆಸರಿಟ್ಟು ಕೂಲಿಯ ಉದ್ದೇಶ ಹಾಳು ಮಾಡಲು ಹೊರಟಿದ್ದು ಅದನ್ನು ರದ್ದು ಪಡಿಸಬೇಕು ರಾಜ್ಯ ಸರ್ಕಾರ ಜಾರಿಗೆ ತರಬಾರದೆಂದು ಈ ಹೋರಾಟ ನಡೆಯುತ್ತಿಿದ್ದು ಎಲ್ಲ ವರ್ತಕರು, ವ್ಯಾಾಪಾರಿಗಳು ದುಡಿಯುವ ವರ್ಗ, ಕೂಲಿಕಾರರು ಬೆಂಬಲಿಸಲು ಮನವಿ ಮಾಡುತ್ತ ರ್ಯಾಾಲಿ ಸಾಗಿತು.
ಜಸಿಟಿಯು ಮುಖಂಡರಾದ ಕೆ.ಜಿ.ವೀರೇಶ, ಮಹೇಶ ಚೀಕಲಪರ್ವಿ, ಅಜೀಜ್ ಜಾಗೀರದಾರ, ಹನುಮಂತು, ಡಿ.ಎ ಸ್.ಶರಣಬಸವ , ಜಿಲಾನಿಪಾಶಾ, ಅಣ್ಣಪ್ಪ, ಅನ್ೀ ಅಬಕಾರಿ, ಮಾರೆಪ್ಪ, ಎನ್ ಎಸ್.ವೀರೇಶ, ಭೀಮಣ್ಣ, ಜಗದೀಶ, ವೀರೇಶ ಸೇರಿದಂತೆ ಕಾರ್ಮಿಕರು ಭಾಗವಹಿಸಿದ್ದರು.
ಮುಷ್ಕರ ಬೆಂಬಲಿಸಲು ಕೋರಿ ಬೈಕ್ ರ್ಯಾಾಲಿ

