ಸುದ್ದಿಮೂಲ ವಾರ್ತೆ ಸಿಂಧನೂರು, ೆ.10:
ಪದವಿ ಪ್ರಮಾಣಪತ್ರ ಪಡೆಯುವದರಿಂದ ವಿದ್ಯಾಾರ್ಥಿಗಳ ಸಾಧನೆ ಅಳೆಯಲಾಗದು. ವ್ಯಕ್ತಿಿತ್ವ ಬದಲಿಸುವ ಮೌಲ್ಯಾಾಧಾರಿತ ಶಿಕ್ಷಣಕ್ಕೆೆ ಹೆಚ್ಚಿಿನ ಒತ್ತು ನೀಡುವ ಅಗತ್ಯವಿದೆ ಎಂದು ಹಳೆಕೋಟೆ, ಬಳಗಾನೂರು ಮಠದ ಸಿದ್ದಬಸವ ಮಹಾಸ್ವಾಾಮಿಗಳು ನುಡಿದರು.
ನಗರದ ಟೌನ್ಹಾಲ್ನಲ್ಲಿ ಮಂಗಳವಾರ ಎಕ್ಸಲೆಂಟ್ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಾಲಯದ ದ್ವಿಿತೀಯ ಪಿಯುಸಿ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾಾರ್ಥಿಗಳ ಬೀಳ್ಕೋೋಡುಗೆ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಿದೆ. ಆದರೆ ಮೌಲ್ಯಗಳು ದೂರವಾಗುತ್ತಿಿವೆ. ತಂದೆ-ತಾಯಿಗಳು ಅದೆಷ್ಟೋೋ ಕಷ್ಟ ಪಟ್ಟು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾಾರೆ. ಕಾಲೇಜಿನ ದಿನಗಳಲ್ಲಿ ವಿದ್ಯಾಾರ್ಥಿ ಜೀವನದ ಬದಲಾವಣೆ ತರುವ ಘಟ್ಟವಾಗಿರುತ್ತದೆ. ಪುಸ್ತಕಗಳನ್ನು ಒಳ್ಳೆೆಯ ಸ್ನೇಹಿತರು. ಅತ್ಯಂತ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಎಲ್ಲವನ್ನು ಸಾಧಿಸಬಹುದಾಗಿದೆ ಎಂದರು.
ಎಕ್ಸಲೆಂಟ್ ್ಯೂಚರ್ ಅಚಿವರ್ಸ್ ಪರೀಕ್ಷೆಯ ವಿಜೇತ ವಿದ್ಯಾಾರ್ಥಿಗಳಿಗೆ ಬಹುಮಾತ ವಿತರಿಸಿದ ಕನಕದಾಸ ಶಿಕ್ಷಣ ಸಂಸ್ಥೆೆಯ ಆಡಳಿತಾಧಿಕಾರಿ, ಪಿಕಾರ್ಡ್ ಬ್ಯಾಾಂಕ್ನ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿ, ವಿದ್ಯಾಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗಿರುವದರಿಂದ ನಿಗದಿತ ಶೈಕ್ಷಣಿಕ ಪ್ರಗತಿ ಕಾಣುತ್ತಿಿಲ್ಲ. ವಿದ್ಯಾಾರ್ಥಿಗಳಲ್ಲಿ ಓದುವ ಹವ್ಯಾಾಸವೇ ಕಡಿಮೆಯಾಗುತ್ತಿಿದೆ. ನಮ್ಮ ಭಾಗದ ವಿದ್ಯಾಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಬೇಕು. ಆ ನಿಟ್ಟಿಿನಲ್ಲಿ ಕಾಲೇಜುಗಳ ಪ್ರಯತ್ನಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಪದವಿ ಪೂರ್ವ ಕಾಲೇಜಿನ ಪ್ರಾಾಚಾರ್ಯ ಮಂಜುನಾಥ ಸೋಮಲಾಪುರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆೆಯ ಕಾರ್ಯದರ್ಶಿ ವೆಂಕಟರಾವ್ ಎಂ, ಅಧ್ಯಕ್ಷ ಮನ್ನೆೆ ತಿರುಪತಯ್ಯ, ಆಡಳಿತಾಧಿಕಾರಿ ಏಕಾಂಬರೇಶ್ವರಿ ಎಂ, ಜಾನಪದ ಲೋಕ ಪ್ರಶಸ್ತಿಿ ಪುರಸ್ಕೃತ ನಾರಾಯಣಪ್ಪ ಮಾಡಶಿರವಾರ, ಅಲಬನೂರು ಸರಕಾರಿ ಪ.ಪೂ.ಕಾಲೇಜಿನ ಪ್ರಾಾಚಾರ್ಯ ಡಾ.ಶಿವರಾಜ, ಪಾಟೀಲ್ ಶಿಕ್ಷಣ ಸಂಸ್ಥೆೆಯ ಕಾರ್ಯದರ್ಶಿ ಆರ್.ಸಿ.ಪಾಟೀಲ್, ಕೆಎಸ್ಸಿಎ ರಾಯಚೂರು ವಲಯ ಅಧ್ಯಕ್ಷ ಚಂದ್ರಶೇಖರ ಮೈಲಾರ ಸೇರಿದಂತೆ ಇತರರು ಭಾಗವಹಿಸಿದ್ದರು.
ಎಕ್ಸಲೆಂಟ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ – ಸಿದ್ದಬಸವ ಸ್ವಾಮೀಜಿ

