ಸುದ್ದಿಮೂಲ ವಾರ್ತೆ ಕಲಬುರಗಿ, ೆ.10:
ತಾಲೂಕಿನ ರಹತಾಬಾದ್ ವ್ಯಾಾಪ್ತಿಿಯಲ್ಲಿ ಸ್ಥಾಾಪನೆಗೆ ಘೋಷಣೆಯಾಗಿದ್ದ ಜವಳಿ ಪಾರ್ಕ್ ಕೂಡಲೇ ಕಾಮಗಾರಿ ಪ್ರಾಾರಂಭಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಜವಳಿ ಪಾರ್ಕ್ ಬೇಡಿಕೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಅವಂಟಗಿ ಮತ್ತು ಜೈ ಕರ್ನಾಟಕ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಎಚ್ಚರಿಕೆ ನೀಡಿದ್ದಾಾರೆ.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಒಂದು ಲಕ್ಷ ಉದ್ಯೋೋಗ ಸೃಷ್ಟಿಿ ಮಾಡುವ ಉದ್ದೇಶದಿಂದ ಪಿಎಂ ಮಿತ್ರ ಟೆಕ್ಸ್ಟೈಲ್ ಜವಳಿ ಪಾರ್ಕ್ ಕಳೆದ 2023 ರ ಮಾರ್ಚ್-28ರಂದು ಬಿಜೆಪಿ ಸರ್ಕಾರದ ಸಿಎಂ ಬಸವರಾಜ ಬೊಮ್ಮಾಾಯಿ ಅವಧಿಯಲ್ಲಿ ಕಲಬುರಗಿಯಲ್ಲಿ ಚಾಲನೆ ಕೊಟ್ಟಿಿದ್ದಾರೆ, ಅದೀಗ 3 ವರ್ಷ ಕಳೆದರೂ ಯಾವುದೇ ಕಾಮಗಾರಿಗೆ ಚಾಲನೆ ದೊರೆತಿಲ್ಲ ಎಂದು ಬೇಸರ ಹೊರಹಾಕಿದರು.
ರಾಜ್ಯ ಸರ್ಕಾರದಿಂದ 200ಕೋಟಿ ರೂ., ಕೆಕೆಆರ್ಡಿಬಿಯಿಂದ 190 ಕೋಟಿ ರೂ. ಸೇರಿ ಒಟ್ಟು 390 ಕೋಟಿ ರೂ. ಬಿಡುಗಡೆ ಆದಾಗ ಮಾತ್ರ ಕಾಮಗಾರಿ ಆರಂಭವಾಗುತ್ತದೆ. ನಂತರ ಕೇಂದ್ರ ಸರ್ಕಾರದಿಂದ 600 ಕೋಟಿ ರೂ. ಬಿಡುಗಡೆ ಆಗುತ್ತದೆ ಎನ್ನಲಾಗುತ್ತಿಿದೆ. ಆದರೆ, ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಿಯಾಂಕ್ ಖರ್ಗೆ ಕೇಂದ್ರದತ್ತ ಬೊಟ್ಟು ಮಾಡುತ್ತಿಿದ್ದು, ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಈ ಜವಳಿ ಪಾರ್ಕ್ಗೆ ಜಮೀನು ಕೊಟ್ಟವರಿಗೆ ಉದ್ಯೋೋಗ ಸೃಷ್ಟಿಿ ಮಾಡುವಲ್ಲಿ ವಿಲವಾಗಿವೆ ಎಂದು ಆರೋಪಿಸಿದರು.
ಜವಳಿ ಪಾರ್ಕ್ ಬಗ್ಗೆೆ ಹಳ್ಳಿಿ ಹಳ್ಳಿಿಗೂ ಅರಿವು ಮೂಡಿಸಲು, ಒಂದು ಲಕ್ಷ ಸದಸ್ಯತ್ವ ಅಭಿಯಾನ ನಡೆಸಲು ಸಮಿತಿ ರಚನೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಮಾಳಪ್ಪ ಪೂಜಾರಿ, ಅಣವೀರ ಬೆಳಗುಂಪಿ, ಶರಣು ಅವಂಟಗಿ ಇತರರಿದ್ದರು.

