ಸುದ್ದಿಮೂಲ ವಾರ್ತೆ ಜಾಲಹಳ್ಳಿ , ೆ.10:
ನಾವು ಕೇವಲ ಜಾತ್ರೆೆ ಆಚರಿಸಲು ಇಲ್ಲಿಗೆ ಬಂದಿಲ್ಲ, ನಮ್ಮ ಸಮಾಜದ ಭವಿಷ್ಯವನ್ನು ರೂಪಿಸುವ ಸಂಕಲ್ಪ ಕೈಗೊಳ್ಳಲು ಸೇರಿದ್ದೇವೆ. ವಾಲ್ಮೀಕಿ ಸಮಾಜ ರಾಜ್ಯದ ನಾಲ್ಕನೇ ಬಹುದೊಡ್ಡ ಸಮಾಜ. ಸಂಖ್ಯೆೆಯಲ್ಲಿ ದೊಡ್ಡವರಾದರೂ ಶೈಕ್ಷಣಿಕವಾಗಿ ನಾವು ಎಷ್ಟು ಬಲಿಷ್ಠರಾಗಿದ್ದೇವೆ ಎಂಬ ಪ್ರಶ್ನೆೆಗೆ ಉತ್ತರ ಹುಡುಕಬೇಕಾದ ಸಮಯ ಈಗ ಬಂದಿದೆ ಎಂದು ಮಾಜಿ ಸಚಿವ ಶಿವನಗೌಡ ನಾಯಕ ಹೇಳಿದರು.
ಹರಿಹರ ತಾಲೂಕಿನ ರಾಜನಹಳ್ಳಿಿಯಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆೆ – ಸಮುದಾಯ ಜಾಗೃತಿಯ ಮಹಾ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜದ ಮಕ್ಕಳಿಗೆ ಶಿಕ್ಷಣವೇ ನಿಜವಾದ ಶಕ್ತಿಿ ಎಂದರು. ಆ ಶಕ್ತಿಿಯನ್ನು ಸಮಾಜಕ್ಕೆೆ ಒದಗಿಸಲು ರಾಜನಹಳ್ಳಿಿ ಗುರುಪೀಠ ಶೈಕ್ಷಣಿಕವಾಗಿ ಇನ್ನಷ್ಟು ಬಲಿಷ್ಠವಾಗಬೇಕು. ಇದಕ್ಕಾಾಗಿ ಪಕ್ಷಭೇದ, ವೈಯಕ್ತಿಿಕ ಭಿನ್ನಾಾಭಿಪ್ರಾಾಯಗಳನ್ನು ಮರೆತು ಪೀಠಾಧ್ಯಕ್ಷರಾದ ಡಾ.ಪ್ರಸನ್ನಾಾನಂದ ಮಹಾಸ್ವಾಾಮಿಗಳೊಂದಿಗೆ ಎಲ್ಲರೂ ಒಗ್ಗಟ್ಟಾಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಇತರೆ ಸಮಾಜಗಳ ಮಠಗಳು ಶಿಕ್ಷಣ, ವಸತಿ, ವಿದ್ಯಾಾರ್ಥಿವೇತನ ಮತ್ತು ಮಾರ್ಗದರ್ಶನದ ಕ್ಷೇತ್ರದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿರುವುದನ್ನು ಉಲ್ಲೇಖಿಸಿದ ಅವರು, ಸುತ್ತೂರು ಮಠ, ಸಿದ್ದಗಂಗಾ ಮಠಗಳಂತೆ ನಮ್ಮ ರಾಜನಹಳ್ಳಿಿ ಮಠವೂ ಬೆಳೆಯಬೇಕು. ಹಾಗಾದರೆ ನಮ್ಮ ಶ್ರೀಮಠ ಮಾತ್ರ ಹಿಂದುಳಿಯಬೇಕೆ? ಎಂದು ಪ್ರಶ್ನಿಿಸಿದರು.
ಕೆಲ ಯುವಕರು ಕೇಳುತ್ತಿಿರುವ ಪೀಠಾಧ್ಯಕ್ಷರು ಸಮಾಜಕ್ಕೆೆ ಏನು ಕೊಟ್ಟಿಿದ್ದಾಾರೆ? ಎಂಬ ಪ್ರಶ್ನೆೆಗೆ ಪ್ರತಿಕ್ರಿಿಯಿಸಿದ ಶಿವನಗೌಡ ನಾಯಕ, ನಾವು ಆಡುವ ಮಾತುಗಳು ಮರೆತು ಹೋಗುತ್ತವೆ, ಆದರೆ ಹೋರಾಟ ಮಾತ್ರ ಉಳಿಯುತ್ತದೆ ಎಂದರು. ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಅಪಾರ ಒತ್ತಡಗಳ ನಡುವೆಯೂ ಹಿಂದೆ ಸರಿಯದೇ ಸಮಾಜದ ಹಕ್ಕಿಿಗಾಗಿ ಹೋರಾಡಿದವರು ಡಾ.ಪ್ರಸನ್ನಾಾನಂದ ಮಹಾಸ್ವಾಾಮಿಗಳೇ. ಅವರ ಅಚಲ ಹೋರಾಟದ ಲವಾಗಿ ವಾಲ್ಮೀಕಿ ಸಮಾಜಕ್ಕೆೆ ಶೇ.7 ಮೀಸಲಾತಿ ದೊರಕಿತು. ಇದು ರಾಜ್ಯದ ಇತಿಹಾಸದಲ್ಲೇ ಚಿನ್ನದ ಅಕ್ಷರಗಳಲ್ಲಿ ಬರೆಯಲ್ಪಟ್ಟ ಹೋರಾಟವಾಗಿದೆ ಎಂದು ಹೇಳಿದರು.
7% ಮೀಸಲಾತಿ ಜಾರಿಗಾಗಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಾಯಿಸಿದ ಅವರು, ಲೋಕಸಭೆಯಲ್ಲಿ ಬಾಕಿ ಇರುವ ಮಸೂದೆ ತರಲು ವಿಳಂಬ ಮಾಡುತ್ತಿಿರುವುದು ದುರಾದೃಷ್ಟಕರ ಸಂಗತಿ ಎಂದರು. ಕೇಂದ್ರ ಸಚಿವರು ಮಾತಾಡಲು ಮಾತ್ರ ಬರುತ್ತಿಿದ್ದಾರೆ. ಒಂದು ಮಸೂದೆ ತರಲು ಇಷ್ಟು ದಿನ ಬೇಕೇ? ಕೇಂದ್ರದ ಮೇಲೆ ಒತ್ತಡ ಹಾಕಿದರೆ ಒಂದೇ ದಿನದಲ್ಲಿ ಕೆಲಸ ಆಗುತ್ತದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಸಮಾಜದ ಮಹನೀಯರನ್ನು ಸ್ಮರಿಸಿದ ಅವರು, ಆದಿಕವಿ ಮಹರ್ಷಿ ವಾಲ್ಮೀಕಿ, ಏಕಲವ್ಯ, ಮಾತೆ ಶಬರಿ, ವೀರ ಮದಕರಿ ನಾಯಕ, ವೀರ ಸಿಂಧೂರ ಲಕ್ಷ್ಮಣ, ರಾಜ ವೆಂಕಟಪ್ಪ ನಾಯಕ, ಸುರಪುರ ಎಲ್.ಜೆ. ಹಾವನೂರು ಮೊದಲಾದವರು ವಾಲ್ಮೀಕಿ ಸಮಾಜದ ಶಕ್ತಿಿಯ ಪ್ರತೀಕಗಳು ಎಂದು ಹೇಳಿದರು. ಪೀಠ ಸ್ಥಾಾಪನೆಗೆ ಕಾರಣರಾದ ಬಸಪ್ಪ ಜಗಳೂರು, ತಿಪ್ಪೇಸ್ವಾಾಮಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರನ್ನು ಕೃತಜ್ಞತೆಯಿಂದ ಸ್ಮರಿಸಿದರು.
ಕಳೆದ 70 ವರ್ಷಗಳಿಂದ ರಾಜಕೀಯ ಪಕ್ಷಗಳು ವಾಲ್ಮೀಕಿ ಸಮಾಜವನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿವೆ ಎಂದು ಆರೋಪಿಸಿದ ಅವರು, ಸಮಾಜದ ಒಬ್ಬರೂ ಉಪಮುಖ್ಯಮಂತ್ರಿಿಯಾಗದಿರುವುದು, ವಾಲ್ಮೀಕಿ ಹಗರಣದ ಸಂದರ್ಭದಲ್ಲಿ ಸಮಾಜದ ಸಚಿವರನ್ನೇ ಬಲಿಪಶು ಮಾಡಿರುವುದು, ಕಾರಣವಿಲ್ಲದೆ ಸಚಿವ ಸ್ಥಾಾನದಿಂದ ಕೈಬಿಟ್ಟ ಘಟನೆಗಳು ನಾಚಿಕೆಗೇಡಿನ ಸಂಗತಿಗಳಾಗಿವೆ ಎಂದರು. ಕೇವಲ ಓಟಿಗಾಗಿ ನಮ್ಮ ಸಮಾಜವನ್ನು ಬಳಸಿಕೊಳ್ಳುವ ರಾಜಕೀಯಕ್ಕೆೆ ನಾವು ಪ್ರಶ್ನೆೆ ಕೇಳಬೇಕಾದ ಸಮಯ ಬಂದಿದೆ ಎಂದು ಹೇಳಿದರು.
ಕಾಯಕವೇ ಕೈಲಾಸ, ದಾಸೋಹವೇ ಮಹಾದಾನ ಎಂಬ ವಚನವನ್ನು ಸ್ಮರಿಸಿದ ಅವರು, ದುಡಿದು, ಕಲಿತು, ಹೋರಾಡಿ ಮುಂದೆ ಸಾಗಿದಾಗ ಮಾತ್ರ ಸಮಾಜಕ್ಕೆೆ ನಿಜವಾದ ಗೌರವ ಸಿಗುತ್ತದೆ.
ಮಹನೀಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ನಮ್ಮ ಕರ್ತವ್ಯ ಮಾತ್ರವಲ್ಲ, ಹೊಣೆಗಾರಿಕೆಯೂ ಹೌದು ಎಂದು ತಿಳಿಸಿದರು.
ಕೊನೆಗೆ ಅವರು, ಶಿಕ್ಷಣಕ್ಕೆೆ ಬೆಂಬಲ ನೀಡೋಣ, ಗುರುಪೀಠವನ್ನು ಬಲಪಡಿಸೋಣ, ಒಗ್ಗಟ್ಟಿಿನಿಂದ ಮುಂದೆ ಸಾಗೋಣ ಎಂದು ಸಮಾಜದ ಬಂಧುಗಳಿಗೆ ಕಿವಿಮಾತು ನೀಡಿದರು.
ಶಿಕ್ಷಣವೇ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿ: ಶಿವನಗೌಡ ನಾಯಕ

