ಸುದ್ದಿಮೂಲ ವಾರ್ತೆ ಬೆಂಗಳೂರು, ೆ.10:
ನಟಿ, ರೂಪದರ್ಶಿ ಹಾಗೂ ಕೆಎಸ್ಡಿಿಎಲ್ ಉತ್ಪನ್ನಗಳ ಪ್ರಚಾರ ರಾಯಭಾರಿ ತಮನ್ನಾಾ ಭಾಟಿಯಾ ಅವರು ನಗರದ ಖಾಸಗಿ ಹೋಟೆಲ್ನಲ್ಲಿ ಮೈಸೂರು ಸ್ಯಾಾಂಡಲ್ ಸೋಪ್ಗಳ ಹೊಸ ಮಾದರಿ ಜೊತೆಗೆ 57 ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.
ತಿಳಿಗೆಂಪು ಬಣ್ಣದ ಮೈಸೂರು ರೇಷ್ಮೆೆ ಸೀರೆ ತೊಟ್ಟಿಿದ್ದ ತಮನ್ನಾಾ ವೇದಿಕೆಗೆ ಆಗಮಿಸಿ ಮೈಸೂರು ಸ್ಯಾಾಂಡಲ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ನಟಿಯ ಸೌಂಧರ್ಯಕ್ಕೆೆ ನೆರೆದಿದ್ದವರು ಮಾರು ಹೋದರು.
ಮೈಸೂರು ಸ್ಯಾಾಂಡಲ್ ಉತ್ಪನ್ನಗಳು ಕರ್ನಾಟಕದ ಹೆಮ್ಮೆೆಯ ಸಂಕೇತ. ಅಲ್ಲದೆ ಹೆಂಗಳೆಯರ ಪಾಲಿಗೆ ಅಚ್ಚುಮೆಚ್ಚಿಿನ ಸೋಪು ಆಗಿದೆ. ಕೆಎಸ್ಡಿಿಎಲ್ ಸಂಸ್ಥೆೆಯ ಪ್ರಚಾರ ರಾಯಭಾರಿಯಾಗಿ ಹೊಸ ಅಧ್ಯಾಾಯವನ್ನು ವಿಧ್ಯುಕ್ತವಾಗಿ ಆರಂಭಿಸಿದರು.
ಗಂಧದ ಎಣ್ಣೆೆ, ಮಲ್ಲಿಗೆ (ಜಾಸ್ಮೀನ್) ಪರಿಮಳದ ಸೋಪು, ಸುಗಂಧದ್ರವ್ಯ, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆೆ, ಪೆಟ್ರೋೋಲಿಯಂ ಜೆಲ್ಲಿ, ಸಾವಯವ ಉತ್ಪನ್ನಗಳವರೆಗೆ 60 ಉತ್ಪನ್ನಗಳು ಮಾರುಕಟ್ಟೆೆ ಪ್ರವೇಶಿಸಲಿವೆ.
ಜೊತೆಯಲ್ಲೇ ತಮನ್ನಾಾ ಸಂಸ್ಥೆೆಯ ಪರವಾಗಿ ನಡೆಸಿರುವ ಪ್ರಚಾರದ ಹತ್ತಾಾರು ಜಾಹೀರಾತುಗಳು ಕೂಡ ಬಿಡುಗಡೆಯಾದವು. ಇದೇ ಸಂದರ್ಭದಲ್ಲಿ ಸಂಸ್ಥೆೆಯ ಇತಿಹಾಸ ಕಟ್ಟಿಿಕೊಡುವ ಸುಗಂಧ ಸಿರಿ ಮತ್ತು ಅರೋಮ್ಯಾಾಟಿಕ್ ಜರ್ನೀಸ್ ಕಾಫಿ ಟೇಬಲ್ ಪುಸ್ತಕಗಳ ಲೋಕಾರ್ಪಣೆಯೂ ನೆರವೇರಿತು.
ನಟಿ ತಮನ್ನಾಾ ಮಾತನಾಡಿ, ಮೈಸೂರು ಸ್ಯಾಾಂಡಲ್ ಸೋಪು ಕೇವಲ ಒಂದು ಸಾಬೂನಲ್ಲ. ಇದರೊಂದಿಗೆ ಭಾವನೆಗಳು, ಬಾಲ್ಯ ಮತ್ತು ಸುಮಧುರ ನೆನೆಪುಗಳೆಲ್ಲ ಹೆಣೆದುಕೊಂಡಿವೆ. ಇದು ಪರಿಪೂರ್ಣತೆ ಮತ್ತು ಸತ್ಯಗಳ ಸಂಗಮ. ಮಾರುಕಟ್ಟೆೆಯಲ್ಲಿ ಇದಕ್ಕೆೆ ಸಾಟಿಯಾದ ಇನ್ನೊೊಂದು ಸೋಪ್ ಇಲ್ಲ. ಮೈಸೂರು ಸ್ಯಾಾಂಡಲ್ ಸೋಪ್ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾಾನವಿದೆ. ಮುಂದಿನ ಎರಡು ವರ್ಷ ನಾನು ಈ ಗುಣಮಟ್ಟದ ಉತ್ಪನ್ನಗಳ ರಾಯಭಾರಿಯಾಗಿ ಕೆಲಸ ಮಾಡಲಿದ್ದೇನೆ,ಭಿ ಎಂದು ಬಣ್ಣಿಿಸಿದರು.
ಬಳಿಕ ಮಾತನಾಡಿದ ಸಚಿವ ಎಂ ಬಿ ಪಾಟೀಲ, ಕೆಎಸ್ಡಿಿಎಲ್ ಕೇವಲ ಸ್ಯಾಾಂಡಲ್ ಸೋಪ್ಗೆ ಮಾತ್ರ ಸೀಮಿತವಾಗಿಲ್ಲ. ನಾವೀಗ ಜಾಸ್ಮೀನ್ ಪರಿಮಳದ ಐಷಾರಾಮಿ ಸೋಪನ್ನೂ ತಯಾರಿಸುತ್ತಿಿದ್ದೇವೆ. ಮಲ್ಲಿಗೆಯ ತೈಲ ಲೀಟರಿಗೆ 4 ಲಕ್ಷ ರೂಪಾಯಿಗೂ ಜಾಸ್ತಿಿ ಇದೆ. ನಮ್ಮಲ್ಲಿ ತಯಾರಾಗುವ ಈ ಸೋಪ್ಗೆ 400 ರೂಪಾಯಿ ಇಟ್ಟಿಿದ್ದೇವೆ. ಯೂರೋಪಿನ ಮಾರುಕಟ್ಟೆೆಯಲ್ಲಿ ಈ ತರಹದ ಸಾಬೂನಿಗೆ ಭಾರೀ ಬೇಡಿಕೆ ಇದೆ. ಇದೇ ರೀತಿಯಲ್ಲಿ ಸುಗಂಧ ದ್ರವ್ಯಗಳ ವಲಯವನ್ನೂ ಪ್ರವೇಶಿಸಿದ್ದೇವೆ. ಇದಕ್ಕಾಾಗಿ ಸಂಸ್ಥೆೆಯ ಉನ್ನತಾಧಿಕಾರಿಗಳು ಕೊಯಮತ್ತೂರು, ಕನೌಜ್ಗೆ ತೆರಳಿ, ಒಡಂಬಡಿಕೆ ಮಾಡಿಕೊಂಡು ಬಂದಿದ್ದಾರೆಭಿ ಎಂದರು.
ಕೆಎಸ್ಡಿಎಲ್ ಉತ್ಪನ್ನಗಳ ಪೈಕಿ ಸದ್ಯಕ್ಕೆೆ ಶೇಕಡ 1ರಷ್ಟು ಮಾತ್ರ ರ್ತಾಗುತ್ತಿಿದೆ. ಇದನ್ನು ಹೆಚ್ಚು ಮಾಡಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಹೊಸ ಉತ್ಪನ್ನಗಳಲ್ಲಿ ಮಹಾರಾಜ ಮತ್ತು ಮಹಾರಾಣಿ ಸೀರೀಸ್ ಇವೆ. ಪರಂಪರೆಯ ಮಹತ್ವ ಬಿಟ್ಟುಕೊಡದೆ ಸಮಕಾಲೀನ ಅಭಿರುಚಿ ಇಲ್ಲಿ ಬೆಸೆದಿದ್ದೇವೆ ಎಂದು ಅವರು ನುಡಿದಿದ್ದಾರೆ.
ಸಂಸ್ಥೆೆಯ ಅಧ್ಯಕ್ಷ ಸಿ ಎಸ್ ಅಪ್ಪಾಾಜಿ ನಾಡಗೌಡ ಮಾತನಾಡಿ, ಈ ಸಾಲಿನಲ್ಲಿ ಸಂಸ್ಥೆೆಯ ವಹಿವಾಟು 2,000 ಕೋಟಿ ರೂ. ಮುಟ್ಟಲಿದ್ದು, ಲಾಭವು 500 ಕೋಟಿ ರೂ. ದಾಟಲಿದೆ. ಇದಕ್ಕಾಾಗಿ ಆಧುನಿಕ ವಹಿವಾಟು ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ 3 ಕೋಟಿ ಾಲೋವರ್ಸ್ ಹೊಂದಿರುವ, ಅಖಿಲ ಭಾರತ ಮಟ್ಟದ ವರ್ಚಸ್ಸಿಿರುವ ತಮನ್ನಾಾ ಅವರನ್ನು ಬ್ರ್ಯಾಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿರುವುದು ಇದರ ಒಂದು ಭಾಗವಾಗಿದೆ ಎಂದಿದ್ದಾರೆ.
ಕೆಎಸ್ ಡಿಎಲ್ ವ್ಯವಸ್ಥಾಾಪಕ ನಿರ್ದೇಶಕ ಕೆಪಿಎಂ. ಪ್ರಶಾಂತ್. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸ್ವತಂತ್ರ ನಿರ್ದೇಶಕ ಅರವಿಂದ ಗಲಗಲಿ, ತಾಂತ್ರಿಿಕ ಸಲಹೆಗಾರ ರಜನೀಕಾಂತ್, ಶಿವಕುಮಾರ್, ಪ್ರತಿಮಾ ವಂದಗಾರು, ಎಂಎಸ್ಐಎಲ್ ವ್ಯವಸ್ಥಾಾಪಕ ನಿರ್ದೇಶಕ ಮನೋಜ, ಸ್ವತಂತ್ರ ನಿರ್ದೇಶಕ ಶಾಮರಾಜು ಮುಂತಾದವರು ಉಪಸ್ಥಿಿತರಿದ್ದರು.
ಕೆಎಸ್ಡಿಎಲ್ ಪ್ರಚಾರ ರಾಯಭಾರಿ ತಮನ್ನಾ ಭಾಟಿಯಾರಿಂದ ಬಿಡುಗಡೆ ನವೀನ ಮಾದರಿಯ ಮೈಸೂರು ಸ್ಯಾಾಂಡಲ್ ಸೋಪು ಮಾರುಕಟ್ಟೆಗೆ

