ಸುದ್ದಿಮೂಲ ವಾರ್ತೆ ರಾಯಚೂರು, ೆ.10:
ಜಂತುಹುಳು ಬಾಧೆಯಿಂದ ರಕ್ತಹೀನತೆ, ಅಪೌಷ್ಟಿಿಕತೆ ಉಂಟಾಗಿ ದೈಹಿಕ ಬೆಳವಣಿಗೆ ಕುಂಠಿತವಾಗುವುದರಿಂದ ನೀಡುವ ಮಾತ್ರೆೆ ಸೇವಿಸುವಂತೆ ನಿಗಾ ವಹಿಸಲು ಜಿ.ಪಂ ಸಿಇಓ ಈಶ್ವರ ಕುಮಾರ ಕಾಂದೂ ಹೇಳಿದರು.
ನಗರದ ಕೆ.ಇ.ಬಿ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಂಯುಕ್ತಾಾಶ್ರಯದಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆೆ ಚಾಲನೆ ನೀಡಿ ಮಾತನಾಡಿದರು. ಶುಚಿತ್ವಕ್ಕೆೆ ಹೆಚ್ಚಿಿನ ಒತ್ತು ನೀಡಬೇಕಿದೆ. ಜಂತುಹುಳು ದೇಹಕ್ಕೆೆ ಪ್ರವೇಶಿಸುವುದರಿಂದ ಅನೇಕ ರೋಗಗಳಿಗೆ ತುತ್ತಾಾಗಬೇಕಾಗುತ್ತದೆ ಆದ್ದರಿಂದ ರಕ್ತಹೀನತೆ ನಿಯಂತ್ರಣಕ್ಕಾಾಗಿ ಜಂತುಹುಳುಗಳ ನಿವಾರಣೆಗಾಗಿ ಆಲ್ಬೆೆಂಡೋಜೋಲ್ ಮಾತ್ರೆೆಗಳನ್ನು ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು ಸೇರಿದಂತೆ ಎಲ್ಲ ಮಕ್ಕಳಿಗೂ ತಪ್ಪದೆ ಚಿಪಿಸುವ ದಿಶೆಯಲ್ಲಿ ನಿಗಾವಹಿಸಬೇಕು ಎಂದರು.
ಐದು ತಾಲೂಕಿನ 2,737 ಅಂಗನವಾಡಿ ಕೇಂದ್ರಗಳು, 2,448 ಶಾಲೆಗಳಲ್ಲಿ, ಕಾಲೇಜು, ತಾಂತ್ರಿಿಕ ವಿದ್ಯಾಾಲಯ ಸೇರಿದಂತೆ 1 ವರ್ಷದಿಂದ 19 ವರ್ಷದೊಳಗಿನ 7ಲ 33 ಸಾ 702 ಮಕ್ಕಳಿಗೆ ಮಾತ್ರೆೆಗಳನ್ನು ಊಟ ಅಥವಾ ಉಪಹಾರ ಸೇವಿಸಿದ ನಂತರ ತಪ್ಪದೆ ಸೇವಿಸಲು ಕ್ರಮವಹಿಸಿ ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣಾಧಿಕಾರಿ ಡಾ.ಸುರೇಂದ್ರ ಬಾಬು ಮಾತನಾಡಿ, ಜಿಲ್ಲೆಯ ಎಲ್ಲ ವೈದ್ಯಾಾಧಿಕಾರಿಗಳ ನಿಗಾವಣೆಯಲ್ಲಿ ಆರೋಗ್ಯ ಸಿಬ್ಬಂದಿಯವರು ಮಾತ್ರೆೆ ಚಿಪಿಸಿ ನುಂಗಿಸುವ ಕಾರ್ಯ ನಿರ್ವಹಿಸುತ್ತಿಿದದಾರೆ ೆ. 16 ರಂದು ಮಾಪ್ ಅ್ ದಿನದಂದು ಮಾತ್ರೆೆ ಚಿಪಿಸಲಾಗುವುದು ಎಂದರು.
ಶಿಕ್ಷಣ ಇಲಾಖೆ ಡಿಡಿಪಿಐ ಕೆ.ಡಿ ಬಡಿಗೇರ, ಆರ್ಸಿಎಚ್ ಅಧಿಕಾರಿ ಡಾ.ನಂದಿತಾ ಎಂ.ಎನ್., ಜಿಲ್ಲಾ ಬಿಸಿ ಊಟದ ಅಧಿಕಾರಿ ಪ್ರಭು, ತಾಲೂಕಾರೋಗ್ಯಾಾಧಿಕಾರಿ ಡಾ.ಅಮೃತ್ ಹುಕ್ಕೇರಿ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಯುನಸ್ ಬಾಬು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅಮರೇಗೌಡ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು,ಮಕ್ಕಳು ಉಪಸ್ಥಿಿತರಿದ್ದರು.
ಜಂತುಹುಳು ಬಾಧೆಯ ಅಪಾಯ ತಪ್ಪಿಸಿ-ಸಿಇಓ

