ಸುದ್ದಿಮೂಲ ವಾರ್ತೆ ರಾಯಚೂರು, ೆ.11:
ರೈತರಿಗೆ ತ್ವರಿತವಾಗಿ ವಿದ್ಯುತ್ ಪರಿವರ್ತಕ ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಾ ಸಮಿತಿ ಒತ್ತಾಾಯಿಸಿತು.
ಇಂದು ಜೆಸ್ಕಾಾಂ ಕಚೇರಿಯ ಸ್ಥಾಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳ ನಿಯೋಗ 12 ತಾಸುಗಳ ವಿದ್ಯುತ್ ಪೂರೈಕೆ ಮಾತು ಸುಳ್ಳಾಾಗಿದ್ದು 3-4 ಗಂಟೆ ವಿದ್ಯುತ್ ಕಡಿತಗೊಳಿಸುವುದು ಸಲ್ಲದು ಇದರಿಂದ ರೈತರು ಬೆಳೆದ ಬೆಳೆಗೆ ಹಾನಿಯಾಗುತ್ತಿಿದೆ. ಮನಸಿಗೆ ಬಂದಾಗ ವಿದ್ಯುತ್ ಕಡಿತಗೊಳಿಸಿದರೆ ಪರಿವರ್ತಕಗಳು, ಪಂಪ್ಸೆಟ್ಗಳು ಹಾಳಾಗುತ್ತಿಿವೆ ಎಂದು ದೂರಿದರು.
ಹೀಗಾಗಿ, ರೈತರಿಗೆ ಸರ್ಕಾರ ನೀಡಿದ ಭರವಸೆಯಂತೆ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಸಬೇಕು, ಪರಿವರ್ತಕ ಸುಟ್ಟು ಹೋದ ಕನಿಷ್ಠ 48 ಗಂಟೆಗಳಲ್ಲಿ ಮರುಸ್ಥಾಾಪಿಸಲು ಕ್ರಮ ವಹಿಸಬೇಕು, ಅನೇಕ ಕಡೆ ಜಮೀನುಗಳಲ್ಲಿ ವಿದ್ಯುತ್ ಕಂಬ ಉರುಳಿ ನಿಂತಿದ್ದು ಅವುಗಳ ಬದಲಿಸಬೇಕು, ಮಂಡಲಗೇರಾ ಹಾಗೂ ಕಡಗಂದೊಡ್ಡಿಿಯಲ್ಲಿ ಯಾರದೊ ಹೆಸರಿಗೆ ಸಾವಿರಾರು ಮೊತ್ತದ ಬಿಲ್ ನೀಡಿದ್ದು ಅದನ್ನು ಸರಿಪಡಿಸಬೇಕು, ಮೀಟರ್ಗಳಿಗೆ ಸೀಲ್ ಹಾಕಬೇಕು ರೀಡರ್ಗಳು ಅದನ್ನು ತೆಗೆಯದಂತೆ ಸೂಚಿಸಬೇಕು, ತೆಗೆದರೆ ಅವರ ಸ್ವಂತ ಖರ್ಚಿನಲ್ಲಿ ದುರಸ್ತಿಿ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಾಧ್ಯಕ್ಷ ಅಬ್ದುಲ್ ವಾಜೀದ್, ತಾಲೂಕಾಧ್ಯಕ್ಷ ರಮೇಶ, ಲಕ್ಷ್ಮಣಗೌಡ ಕಡಗಂದೊಡ್ಡಿಿಘಿ, ನರಸಪ್ಪ ಹೊಕ್ರಾಾಣಿ, ನರಸಿಂಗರಾವ್ ಕುಲಕರ್ಣಿ, ವೀರೇಶಗೌಡ, ಇಬ್ರಾಾಹಿಂ, ಚಂದಾಸಾಬ್, ಬಾಪೂರ ತಿಮ್ಮಪ್ಪ ಸೇರಿ ಇತರರಿದ್ದರು.
ನಿರಂತರ ವಿದ್ಯುತ್, ಪರಿವರ್ತಕ ಶೀಘ್ರ ಪೂರೈಕೆಗೆ ಒತ್ತಾಯ

