ಸುದ್ದಿಮೂಲ ವಾರ್ತೆ ರಾಯಚೂರು, ೆ.11:
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ರಾಯಚೂರಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ಯುವ ರೆಡ್ ಕ್ರಾಾಸ್ ಘಟಕ ಹಾಗೂ ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ರಾಯಚೂರು ಇವರ ಸಹಯೋಗದೊಂದಿಗೆ ರಾಷೀಯ ಜಂತುಹುಳ ನಿವಾರಣಾ ಕಾರ್ಯಕ್ರಮಶ್ರಿ ಹಮ್ಮಿಿಕೊಳ್ಳಲಾಗಿತ್ತು.
ರಕ್ತ ಹೀನತೆ ನಿಯಂತ್ರಣಕ್ಕಾಾಗಿ ಜಂತುಹುಳುಗಳ ನಿವಾರಣೆಗಾಗಿ ಆಲ್ಬೆೆಂಡೋಜೋಲ್ ಮಾತ್ರೆೆಗಳನ್ನು ವಿದ್ಯಾಾರ್ಥಿಗಳಿಗೆ ವಿತರಿಸಲಾಯಿತು.
ಜಿಲ್ಲಾಾ ವೈದ್ಯಾಾಧಿಕಾರಿ, ಡಾ. ನಂದಿತಾ, ಮಾತಾನಾಡುತ್ತಾಾ, ವಿದ್ಯಾಾರ್ಥಿಗಳ ಉಜ್ವಲ ಭವಿಷ್ಯಕ್ಕಾಾಗಿ ಅವರು ತಮ್ಮ ಆರೋಗ್ಯ ಕಾಪಾಡಿಕೊಂಡು ಹೋಗುವುದು ಅಗತ್ಯವಾಗಿದ್ದು ಸಮುದಾಯದಲ್ಲಿ ಜಂತುಹುಳು ತಡೆಗೆ ಶೌಚಕ್ಕಾಾಗಿ ಶೌಚಾಲಯಗಳ ಬಳಕೆ, ಕೈಗಳನ್ನು ತೊಳೆಯುವುದು, ಪಾದರಕ್ಷೆಗಳ ಬಳಕೆ, ಶುದ್ದ ನೀರಿನ ಸೇವನೆ, ಪೌಷ್ಠಿಿಕ ಆಹಾರ ಸೇವಿಸುವುದು ಇತ್ಯಾಾದಿ ಅಂಶಗಳನ್ನು ತಿಳಿಯಪಡಿಸುತ್ತಾಾ ಪ್ರತಿಯೊಬ್ಬರು ಇದನ್ನು ತಪ್ಪದೆ ಪಾಲಿಸಬೇಕೆಂದು ಸಲಹೆ ನೀಡಿದರು.
ಆರೋಗ್ಯಾಾಧಿಕಾರಿ ಡಾ.ಅಶ್ಫಾಾಕ್ ಇವರು ವಿದ್ಯಾಾರ್ಥಿನಿಯರಿಗೆ ಆರೋಗ್ಯದ ಬಗ್ಗೆೆ ಅರಿವು ಮೂಡಿಸಲು ಜಿಲ್ಲಾಾದ್ಯಂತ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಾಂಶುಪಾಲರಾದ ಡಾ. ಸುಗುಣ ಬಸವರಾಜ ರವರು ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ವಿದ್ಯಾಾರ್ಥಿಗಳಿಗಾಗಿ ಆಯೋಜಿಸುವುದು ಅವಶ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ವಿದ್ಯಾಾರ್ಥಿನಿಯರು ಜಂಕ್ ಆಹಾರ ಅಥವಾ ಅನಾರೋಗ್ಯಕರ ತಿನಿಸುಗಳಿಗೆ ಹೆಚ್ಚು ಮಾರು ಹೋಗದೆ ತಮ್ಮ ಆರೋಗ್ಯದ ಬಗ್ಗೆೆ ಗಮನಹರಿಸುವುದು ಅಗತ್ಯವಾಗಿದೆಯೆಂದು ಹೇಳಿದರು.
ಕು.ಚೈತನ್ಯ, ಬಿ.ಕಾಂ. ಆರನೇಸೆಮಿಸ್ಟರ್ ವಿದ್ಯಾಾರ್ಥಿನಿ ಇವರು ನಿರೂಪಿಸಿದರು. ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಜ್ಯೋೋತಿ ಸಿ.ಕೆ. ಸಹ ಪ್ರಾಾಧ್ಯಾಾಪಕರು ಭೌತಶಾಸ ವಿಭಾಗ, ಇವರು ಪ್ರಾಾಸ್ತಾಾವಿಕ ಭಾಷಣ ಮಾಡಿದರು. ಡಾ. ಉಮಾದೇವಿ, ಸಹ ಪ್ರಾಾಧ್ಯಾಾಪಕರು, ವಾಣಿಜ್ಯ ವಿಭಾಗ, ಅತಿಥಿಗಳನ್ನು ಸ್ವಾಾಗತಿಸಿದರು. ಯುವ ರೆಡ್ ಕ್ರಾಾಸ್ ಘಟಕದ ಸಂಚಾಲಕ ಡಾ. ಸುರೇಶ ಎಸ್. ಗ್ರಂಥಪಾಲಕರು, ವಂದಿಸಿದರು. ಕಾಲೇಜಿನ ಎಲ್ಲಾಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಅತಿಥಿ ಉಪನ್ಯಾಾಸಕರು ಉಪಸ್ಥಿಿತರಿದ್ದರು.
ರಾಷೀಯ ಜಂತುಹುಳ ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ

