ಸುದ್ದಿಮೂಲ ವಾರ್ತೆ ಸಿರವಾರ, ೆ.11:
ೆ.12 ಮಸ್ಕಿಿ ತಾಲೂಕಿನ ಗುಡಿಹಾಳ ಗ್ರಾಾಮದಲ್ಲಿ ಬಾಲ್ಯ ವಿವಾಹ ಮಾಡುವುದು ಪತ್ತೆೆಯಾಗಿದೆ.
ಮಕ್ಕಳ ಸಹಾಯ ವಾಣಿಗೆ ದೂರು ಬಂದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆಯ ಅಂಗನವಾಡಿ ಮೇಲ್ವಿಿಚಾರಕಿ ಮಹಾಂತಮ್ಮ ಹಾಗೂ ಕವಿತಾಳ ಪೊಲೀಸ್ ಠಾಣೆಯ ಎಎಸ್ ಐ ಮಹಮ್ಮದ್ ಜಾರ್ ಹಾಗೂ ಶಾಲೆಯ ಮುಖ್ಯಗುರು ಸಮಂತ, ಪಾಮನಕಲ್ಲೂರು ಗ್ರಾಾಮ ಪಂಚಾಯತಿ ಪಿಡಿಓ ಮಲ್ಲಯ್ಯ ಅವರು ಒಳಗೊಂಡ ತಂಡ ಬಾಲ್ಯ ವಿವಾಹ ತಡೆದ ಘಟನೆ ಬುಧವಾರ ಜರುಗಿದೆ.
ರಾಯಚೂರು ಮಹಿಳಾ ಮತ್ತು ಮಕ್ಕಳ ರಕ್ಷಣಾ ಕೇಂದ್ರಕ್ಕೆೆ ಕಳಿಸಲಾಗಿದೆ.
ಈ ಬಗ್ಗೆೆ ತನಿಖೆ ಮಾಡಿ ಬಾಲ್ಯ ವಿವಾಹ ಪ್ರಚೋದನೆ ಮಾಡಿದವರು ಅದಕ್ಕೆೆ ಸಂಬಂಧಿಸಿದ ವರ ಹಾಗೂ ಕುಟುಂಬದ ಮೇಲೆ ದೂರು ನೀಡಿದಾಗ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಸಿರವಾರ ಸಿಪಿಐ ಎಂ.ಶಶಿಕಾಂತ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆಯ ಸಿರವಾರ ತಾಲೂಕು ಅಧಿಕಾರಿಗಳು ದೂರವಾಣಿ ಬಂದ್ ಮಾಡಿಕೊಂಡಿದ್ದು, ಮೇಲ್ವಿಿಚಾರಕಿ ಮಹಾಂತಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ ಸೇರಿ ಬಾಲಕಿ ಹಾಗೂ ಅವರ ತಾಯಿಯನ್ನು ರಾತ್ರಿಿ ವೇಳೆಯಲ್ಲಿ ಬಾಲ ಮಂದಿರಕ್ಕೆೆ ಕರೆದುಕೊಂಡು ಹೋಗಿ ಬಿಟ್ಟು ಬಂದರು. ಬಾಲ್ಯ ವಿವಾಹ ತಡೆಯಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಹಾಯ ಮಾಡಲಿಲ್ಲ, ಯಾವುದೇ ಸಹಕಾರ ನೀಡಿಲ್ಲ ಎಂಬ ಮಾತುಗಳು ಕೇಳಿ ಬಂದವು.

