ಸುದ್ದಿಮೂಲ ವಾರ್ತೆ ಸಿಂಧನೂರು, ೆ.11:
ಮಕ್ಕಳ ಶಿಕ್ಷಣದ ಜೊತೆಗೆ ಆರೋಗ್ಯದೆಡೆಗೆ ಪಾಲಕರು ಗಮನ ಹರಿಸಬೇಕು. ಉತ್ತಮ ಆಹಾರ ಪದ್ದತಿ ರೂಢಿಸಬೇಕು ಎಂದು ತಾಲೂಕಾ ಆರೋಗ್ಯಾಾಧಿಕಾರಿ ಡಾ.ಅಯ್ಯನಗೌಡ ಹೇಳಿದರು.
ನಗರದ ಟೌನ್ಹಾಲ್ನಲ್ಲಿ ಬುಧವಾರ ನಂದಿ ಕಿರಿಯ ಶಾಲೆಯ 8ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಅಪೌಷ್ಠಿಿಕತೆ ಪ್ರಕರಣಗಳು ಹೆಚ್ಚುತ್ತಿಿವೆ. ಮಕ್ಕಳಿಗೆ ಾಸ್ಟ್ುಡ್ ಕೊಡದೇ ಸತ್ವಯುತ ಆಹಾರ ನೀಡಬೇಕು. ಮಕ್ಕಳು ಉತ್ತಮ ಆರೋಗ್ಯವಾಗಿದ್ದರೆ ಕಲಿಕೆಯಲ್ಲಿ ಆಸಕ್ತಿಿ ವಹಿಸುತ್ತಾಾರೆ. ಜೊತೆಗೆ ಮೊಬೈಲ್, ದೂರದರ್ಶನದಿಂದ ಮಕ್ಕಳನ್ನು ದೂರವಿಡಬೇಕು. ಸರಕಾರದಿಂದ ಬಾಲ ಸ್ವಾಾಸ್ಥ್ಯ ಕಾರ್ಯಕ್ರಮ ಜಾರಿಯಲ್ಲಿದ್ದು, ಯಾವುದೇ ಕಾಯಿಲೆಗಳು ಬಂದರೆ ಗುರುತಿಸಲ್ಪಟ್ಟ ಆಸ್ಪತ್ರೆೆಗಳಲ್ಲಿ ಉಚಿತವಾಗಿ ಚಿಕಿತ್ಸೆೆ ಪಡೆದುಕೊಳ್ಳಬಹುದು. ಇದಕ್ಕಾಾಗಿ ಅರೋಗ್ಯ ಕಾರ್ಯಕರ್ತರು ಎಲ್ಲಾಾ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿಿದ್ದಾಾರೆ ಎಂದರು.
ಸಿದ್ದಿ ಸಮಾಧಿ ಯೋಗದ ಗುರುಗಳಾದ ಮಹೇಶ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕಿದೆ. ಪಾಲಕರು ತಮ್ಮ ಮಕ್ಕಳನ್ನು ಇನ್ನೊೊಂದು ಮಗುವಿಗೆ ಹೋಲಿಕೆ ಮಾಡಿ ಮಾತನಾಡಬಾರದು. ಮಕ್ಕಳೆದರು ತಂದೆ-ತಾಯಿಗಳು ಜಗಳವಾಡಬಾರದು. ಮಕ್ಕಳು ಏನೇ ಕೇಳಿದರೂ ಇಲ್ಲ ಎನ್ನಬಾರದು. ಸಮಾಧಾನದಿಂದ ಕೇಳಿ ಸರಿಯಾಗಿದ್ದರೆ ಕೊಡಿಸಿ, ಬೇಡವಾಗಿದ್ದು ಇದ್ದರೆ ಸಮಾಧಾನ ಪಡಿಸಲು ಮುಂದಾಗಬೇಕು. ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾಾರ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸಂಸ್ಥೆೆಯ ಅಧ್ಯಕ್ಷ ಬೆಟ್ಟಪ್ಪ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರ್.ಹೆಚ್.ನಂ-3 ರ ಹಿರಿಯ ಪ್ರಾಾಥಮಿಕ ಶಾಲೆಯ ಮುಖ್ಯಗುರು ಚಂದ್ರಶೇಖರ ಮಾಲಿ ಪಾಟೀಲ್, ಈಶ್ವರೀಯ ವಿಶ್ವವಿದ್ಯಾಾಲಯದ ಪಾರ್ವತಿ ಅಕ್ಕ, ಸುದ್ದಿಮೂಲ ಪತ್ರಿಿಕೆ ವರದಿಗಾರ ಅಮರೇಶ ಅಲಬನೂರು, ಶಿಕ್ಷಣ ಸಂಸ್ಥೆೆಯ ಕಾರ್ಯದರ್ಶಿ ಲಿಂಗಾರೆಡ್ಡಿಿ, ಸದಸ್ಯ ಹನುಮನಗೌಡ ಸೇರಿದಂತೆ ಅನೇಕರು ಇದ್ದರು.
ನಂದಿ ಕಿರಿಯ ಶಾಲೆಯ 8ನೇ ವಾರ್ಷಿಕೋತ್ಸವ ಮಕ್ಕಳಿಗೆ ಶಿಕ್ಷಣದ ಜೊತೆ ಆರೋಗ್ಯದೆಡೆ ಗಮನವಿರಲಿ – ಡಾ.ಅಯ್ಯನಗೌಡ

