ಸುದ್ದಿಮೂಲ ವಾರ್ತೆ ಮಾನ್ವಿ, ೆ.12:
ರೈತರು ಭತ್ತದ ಬದಲಿಗೆ ಎಳ್ಳು, ಸಾಸಿವೆ ಬೆಳೆ ಪದ್ದತಿ ಅಳವಡಿಸಿಕೊಳ್ಳಬೇಕೆಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯದ ವಿಸ್ತರಣಾ ನಿರ್ದೇಶಕ ಡಾ.ಎ.ಆರ್ ಕುರುಬರ ಸಲಹೆ ನೀಡಿದರು.
ಗಾರಿಗೆ ಜಾತ್ರೆೆ ಅಂಗವಾಗಿ ಗುರುವಾರ ಕಲ್ಮಠ ಧ್ಯಾಾನ ಮಂದಿರದಲ್ಲಿ ಹಮ್ಮಿಿಕೊಂಡಿದ್ದ ಜಿಲ್ಲಾ ಮಟ್ಟದ ರೈತ ಸಮಾವೇಶ, ಆರೋಗ್ಯ ಶಿಬಿರ ಉದ್ಘಾಾಟಿಸಿ ಮಾತನಾಡುತ್ತಿಿದ್ದರು.
ರಾಯಚೂರು ಕೃಷಿ ವಿಶ್ವವಿದ್ಯಾಾಲಯದಿಂದ ಜಿಲ್ಲೆಯ ವಿವಿಧೆಡೆ 200 ಎಕರೆ ಭತ್ತ ಬೆಳೆಯುವ ಪ್ರದೇಶದಲ್ಲಿ ಎಳ್ಳು, ಸಾಸಿವೆ ಬೆಳೆ ಪದ್ದತಿಯನ್ನು ರೈತರಿಗೆ ಪರಿಚಯಿಸಿದ್ದು ಕಡಿಮೆ ವೆಚ್ಚದಲ್ಲಿ ಹೆಚ್ಚಿಿನ ಲಾಭ ಪಡೆಯುತ್ತಿಿದ್ದಾರೆ. ಭಾರತ ಸರ್ಕಾರ ತಾಳೆ ಬೆಳೆಗೆ ನಿಶ್ಚಿಿತ ಬೆಲೆ ನಿಗದಿ ಪಡಿಸಿರುವುದರಿಂದ ರೈತರು ತಾಳೆ ಬೆಳೆಯನ್ನು ಬೆಳೆಯಬಹುದು. ರೈತರು ಕೇವಲ ಮಳೆ ಅಶ್ರಯಿಸಿ ಬೆಳೆ ಬೆಳೆದಲ್ಲಿ ಕೃಷಿ ಲಾಭದಾಯಕವಾಗಿರುವುದಿಲ್ಲ. ವಿವಿಧ ಬೆಳೆ ಪದ್ದತಿಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡರೆ ನಿಶ್ಚಿಿತ ಅದಾಯ ಪಡೆಯಬಹುದು ಎಂದು ಹೇಳಿದರು.
ಕೃಷಿ ವಸ್ತು ಪ್ರದರ್ಶನ ಮಳಿಗೆ ಉದ್ಘಾಾಟಿಸಿದ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಪ್ರಕಾಶ.ಆರ್.ಚೌಹಾಣ್ ಮಾತನಾಡಿ ರೈತರು ಕೃಷಿ ಇಲಾಖೆಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು ಮಾತನಾಡಿ ಕಲ್ಮಠ ಗಾರಿಗೆ ಜಾತ್ರೆೆ ನಿಮಿತ್ಯ ಜಿಲ್ಲೆಯ ರೈತರಿಗೆ ಅಗತ್ಯ ಅಧುನಿಕ ಕೃಷಿಯ ಕುರಿತು ಮಾಹಿತಿಯನ್ನು ನೀಡುವ ಉದ್ದೇಶದಿಂದ ಜಿಲ್ಲಾ ಮಟ್ಟದ ರೈತ ಸಮಾವೇಶವನ್ನು ಅಯೋಜಿಸಲಾಗಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಚೀಕಲಪರ್ವಿ ಮಠದ ಶ್ರೀ ಸದಾಶಿವ ಮಹಾಸ್ವಾಾಮಿಗಳು, ತಹಸೀಲ್ದಾಾರ್ ಭೀಮರಾಯ ಬಿ.ರಾಮಸಮುದ್ರ, ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಬೆಟ್ಟದೂರು, ಮಂಡ್ಯದ ಸಾವಯವ ರೈತ ಕೃಷ್ಣಪ್ಪ ಬೆನ್ನೂರು, ಹಿರಿಯ ಪರಿಸರ ಅಂಕಣಕಾರ ಅಮರೇಗೌಡ ಗೋನವಾರ, ಕೃಷಿ ವಿಜ್ಞಾನಿ ಡಾ.ಪ್ರಭುರಾಜ, ಸಾವಯವ ಕೃಷಿ ವಿಭಾಗದ ಮುಖ್ಯಸ್ಥ ಡಾ.ಎಂ.ಎ. ಬಸವಣ್ಣೆೆಪ್ಪ ಸಾವಯವ ಕೃಷಿ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ತಿಮ್ಮಣ್ಣ, ಉಪನ್ಯಾಾಸಕರಾದ ಡಾ.ಬಸವಪ್ರಸಾದ,
ಪಕ್ಷಿಪ್ರೇೇಮಿ ಸಲ್ಲಾವುದ್ದೀನ್ ಭಾಗವಹಿಸಿ ವಿವಿಧ ವಿಷಯಗಳ ಕುರಿತು ಉಪನ್ಯಾಾಸ ನೀಡಿದರು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಕೃಷಿ ಕ್ಷೇತ್ರದ ಸಾಧಕರನ್ನು ಸನ್ಮಾಾನಿಸಲಾಯಿತು.
ವೇದಿಕೆಯ ಮೇಲೆ ಕಲ್ಮಠ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಾಚಾರ್ಯ ಡಾ.ಜೀವನೇಶ್ವರಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮಾಾರೆಡ್ಡಿಿ ಭೋಗಾವತಿ, ಸಹಾಯಕ ಕೃಷಿ ನಿರ್ದೇಶಕ ಗುರುನಾಥ, ಅಖಿಲ ಭಾರತ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ, ತಾಲೂಕಾಧ್ಯಕ್ಷ ಅರುಣ್ ಚಂದಾ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದಲಿಂಗಪ್ಪ ವಕೀಲರು, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್, ಗೌರವಾಧ್ಯಕ್ಷ ಶ್ರೀಧರಸ್ವಾಾಮಿ, ಪತ್ರಕರ್ತ ಬಸವರಾಜ ಭೋಗಾವತಿ, ರೈತ ಸಂಘದ ಮುಖಂಡರಾದ ಸೂಗೂರಯ್ಯ ರ್ಆ.ಎಸ್.ಮಠ, ಪ್ರಭಾಕರ ಪಾಟೀಲ್, ಬಸನಗೌಡ ಮಲ್ಲಿನಮಡಗು, ಲಿಂಗಾರೆಡ್ಡಿಿ ಪಾಟೀಲ್, ಸಿದ್ದಯ್ಯಸ್ವಾಾಮಿ, ಚಾಮರಸ ಪಾಟೀಲ್, ಅಮರೇಶ ಆಲ್ದಾಾಳ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಪ್ರಗತಿಪರ ರೈತರು ಭಾಗವಹಿಸಿದ್ದರು.ಕಸ ವಿಲೇವಾರಿಗೆ ಆಸ್ಪತ್ರೆೆ ನಿರ್ಲಕ್ಷ್ಯ ; ಪಾಲಿಕೆ ಸಿಬ್ಬಂದಿಗಳ ಆಕ್ರೋೋಶ
? ಸುದ್ದಿಮೂಲ ವಾರ್ತೆ ಬಳ್ಳಾಾರಿ, ೆ.04:
ಬಳ್ಳಾಾರಿ ನಗರದ ಪಾರ್ವತಿನಗರದ ಪದ್ಮಾಾವತಿ ಕಿಡ್ನಿಿಕೇರ್ ಆಸ್ಪತ್ರೆೆ ಬಸವೇಶ್ವರ ನಗರದ ದ್ವಾಾರಕಾ ಆಸ್ಪತ್ರೆೆ (ಶಾಂತಾ ಸೀತಾರಾಂ ಆಸ್ಪತ್ರೆೆ)ಯವರು ಮೆಡಿಕಲ್ ವೇಸ್ಟ್ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆೆಯನ್ನು ಕೈಗೊಳ್ಳದೇ, ತೀವ್ರ ನಿರ್ಲಕ್ಷ್ಯಕ್ಕೆೆ ಒಳಗಾಗಿದ್ದರು. ಇದರಿಂದ ಬೇಸತ್ತಿಿದ್ದ ಮಹಾನಗರ ಪಾಲಿಕೆಯ ಅಧಿಕಾರಿ – ಸಿಬ್ಬಂದಿಗಳು, ಬುಧವಾರ ಬೆಳಗ್ಗೆೆ, ಮೆಡಿಕಲ್ ವೇಸ್ಟ್ ಅನ್ನು ಆಸ್ಪತ್ರೆೆಯ ಮುಂಭಾಗದಲ್ಲಿ ಹಾಕಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಮೇಯರ್ ಪಿ. ಗಾದೆಪ್ಪ ಅವರು, ಪರಿಸ್ಥಿಿತಿ ಹೀಗೇ ಮುಂದುವರೆದಲ್ಲಿ ಲೈಸೆನ್ಸ್ ರದ್ದತಿಗೆ ಮುಂದಾಗುತ್ತೇವೆ ಎಂದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಆಯುಕ್ತ ಪಿ.ಸಿ. ಮಂಜುನಾಥ್ ಅವರು, ಎರಡು ಆಸ್ಪತ್ರೆೆಗಳು ಮೆಡಿಕಲ್ ವೇಸ್ಟ್ ಅನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಅನೇಕಸಲ ಮನವಿ ಮಾಡಲಾಯಿತು. ಆದರೆ, ಆಸ್ಪತ್ರೆೆಗಳ ಸಿಬ್ಬಂದಿಗಳು ನಿರ್ಲಕ್ಷ್ಯವಹಿಸಿದರು. ಕಾರಣ, ನಮ್ಮ ಸಿಬ್ಬಂದಿಗಳು ಕಸವನ್ನು – ಮೆಡಿಕಲ್ ವೇಸ್ಟ್ ಅನ್ನು ಆಯಾ ಆಸ್ಪತ್ರೆೆಗಳ ಮುಂದೆ ಹಾಕಿ, ತಮ್ಮ ಸಿಟ್ಟನ್ನು ತೋರಿಸಿರುವುದು ಸ್ವಾಾಗತಾರ್ಹ ಎಂದರು.
ಮಾನ್ವಿ : ಗಾರಿಗೆ ಜಾತ್ರೆ ಅಂಗವಾಗಿ ಜಿಲ್ಲಾ ರೈತ ಸಮಾವೇಶದಲ್ಲಿ ಡಾ.ಎ.ಆರ್.ಕುರುಬರ ಸಲಹೆ ‘ರೈತರು ಎಳ್ಳು, ಸಾಸಿವೆ ಬೆಳೆ ಪದ್ದತಿ ಅಳವಡಿಸಿಕೊಳ್ಳಿ’

