ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.12:
ಬ್ಯಾಾನರ್ ಗಲಾಟೆಯಲ್ಲಿ ವಿವಾದಕ್ಕೆೆ ಗುರಿಯಾಗಿದ್ದ ಬಳ್ಳಾಾರಿ ನಗರ ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿಿ ಅವರನ್ನು ಸರ್ಕಾರ ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆೆ ವರ್ಗಾವಣೆ ಮಾಡಿದ್ದು, ಈ ಹುದ್ದೆೆಗೆ ಬೆಂಗಳೂರು ಸಿಸಿಬಿಯಲ್ಲಿದ್ದ ಗೋವಿಂದರಾಜು ವಿ. ಅವರನ್ನು ವರ್ಗಾವಣೆ ಮಾಡಿದೆ.
ಶಾಸಕ ಜಿ.ಜನಾರ್ದನರೆಡ್ಡಿಿ, ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕರಾದ ಜಿ.ಸೋಮಶೇಖರರೆಡ್ಡಿಿ, ಜಿ.ಕರುಣಾಕರರೆಡ್ಡಿಿ, ಟಿ.ಎಚ್. ಸುರೇಶಬಾಬು ಅವರು, ಬ್ಯಾಾನರ್ ಗಲಭೆಗೆ ನಗರ ಡಿವೈಎಸ್ಪಿಿ ಚಂದ್ರಕಾಂತ್ ನಂದಾರೆಡ್ಡಿಿ ಅವರೇ ಮೂಲ ಕಾರಣವಾಗಿದ್ದು, ಅವರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದರು.
ಈ ಹಿನ್ನಲೆಯಲ್ಲಿ ಬಳ್ಳಾಾರಿ ನಗರ ಡಿವೈಎಸ್ಪಿ ಹುದ್ದೆೆಗೆ ಐಪಿಎಸ್ ಅಧಿಕಾರಿ ಯಶಕುಮಾರ್ ಶರ್ಮ ಅವರನ್ನು ನೇಮಕ ಮಾಡಿತ್ತು. ಆದರೆ, ಚಂದ್ರಕಾಂತ ನಂದಾರೆಡ್ಡಿಿ ಅವರು ಈ ಅಧಿಕಾರಿಗೆ ಅಧಿಕಾರ ಹಸ್ತಾಾಂತರಿಸಲು ಸಾಧ್ಯವಾಗದ ಕಾರಣ
ಐಪಿಎಸ್ ಅಧಿಕಾರಿ ಬಳ್ಳಾಾರಿಯಿಂದ ಹಿಂದಿರುಗಿದ್ದರು.
ರಾಜ್ಯದ 23 ಜನ ಡಿವೈಎಸ್ಪಿ ಗಳ ವರ್ಗಾವಣೆಯಲ್ಲಿ ಚಂದ್ರಕಾಂತ ನಂದಾರೆಡ್ಡಿಿ ಅವರೂ ಸೇರಿದ್ದಾಾರೆ.
ಬಳ್ಳಾರಿ ನಗರ ಡಿವೈಎಸ್ಪಿ ನಂದಾರೆಡ್ಡಿ ವರ್ಗಾವಣೆ

