ಸುದ್ದಿಮೂಲ ವಾರ್ತೆ ರಾಯಚೂರು, ೆ.12:
ಕೇಂದ್ರ ಸರ್ಕಾರ 2026ರ ವಿದ್ಯುತ್ ಕಾಯ್ದೆೆ ತಿದ್ದುಪಡಿ ಹಾಗೂ ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಇಂದು ರಾಯಚೂರಿನ ಜೆಸ್ಕಾಾಂ ಕಚೇರಿ ಆವರಣದಲ್ಲಿ ಕವಿಪ್ರನಿನಿ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಜೆಸ್ಕಾಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ನೌಕರರು ಹಾಗೂ ಸಂಘದ ಪದಾಧಿಕಾರಿಗಳು ವಿದ್ಯುತ್ ವಲಯದ ಖಾಸಗೀಕರಣಕ್ಕೆೆ ವಿರೋಧ ವ್ಯಕ್ತಪಡಿಸಿದರು.
ವಿದ್ಯುತ್ ಕ್ಷೇತ್ರ ಸಾರ್ವಜನಿಕ ಮತ್ತು ಸೇವಾ ವಲಯವಾಗಿರುವುದರಿಂದ ಇದನ್ನು ಖಾಸಗೀಕರಣ ಮಾಡಬಾರದು ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆೆ ತಿದ್ದುಪಡಿ ನಿರ್ಧಾರವನ್ನು ಈ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಕೇಂದ್ರದ ಉದ್ದಿಮೆಗಳು ದಿವಾಳಿಯಾಗಿದ್ದು ಈಗ ವಿದ್ಯುತ್ ಕ್ಷೇತ್ರದ ಖಾಸಗಿಕರಣಕ್ಕೆೆ ಮುಂದಾಗಿರುವುದು ಅಪಾಯಕಾರಿ ಸಂಗತಿ ತಕ್ಷಣ ಇದನ್ನು ಪರಿಶೀಲಿಸಿ ಪ್ರಸ್ತಾಾವ ರದ್ದು ಪಡಿಸಲು ಒತ್ತಾಾಯಿಸಿದರು.
ಇಲ್ಲವಾದಲ್ಲಿ ಒಕ್ಕೂಟದ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನೌಕರ ಸಂಘದ ಉಪಾಧ್ಯಕ್ಷ ಜೆ ಎಲ್ ಗೋಪಿ, ಇಂಜಿನಿಯರ್ ಅಸೋಸಿಯೇಷನ್ನ ವೆಂಕಟೇಶ್, ಚಿನ್ನಪ್ಪ, ಮಲ್ಲಿಕಾರ್ಜುನ, ಶಿವರಂಜನಿ, ಯಂಕಣ್ಣ ಎಣ್ಣೆೆ, ಅಯ್ಯಣ್ಣ ಮಹಾಮನಿ, ಸಂಜೀವಕುಮಾರ, ಶಿವನಗುತ್ತಿಿ, ಶಫಿ, ಚಿರಂಜೀವಿ, ನಟರಾಜ, ರಾಘವೇಂದ್ರ, ವಿನಯ ಕುಮಾರ, ಶಿವಮೂರ್ತಿ, ಈರಣ್ಣ, ರಾಮಕೃಷ್ಣ ಮತ್ತು ಅಧಿಕಾರಿ, ನೌಕರರು ಮತ್ತು ಮಹಿಳೆಯರು ಪಾಲ್ಗೊೊಂಡಿದ್ದರು.
ವಿದ್ಯುತ್ ನೌಕರರ ಪ್ರತಿಭಟನೆ ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

