ಸುದ್ದಿಮೂಲ ವಾರ್ತೆ ರಾಯಚೂರು, ೆ.12:
ಅಖಿಲ ಭಾರತ ಸಾರ್ವತ್ರಿಿಕ ಮುಷ್ಕರ ಬೆಂಬಲಿಸಿ ರಾಯಚೂರು ಗ್ರಾಾಮಾಂತರ ವಿಧಾನಸಭಾ ಕ್ಷೇತ್ರದ ಮೂರು ಕಡೆ ಕಾರ್ಮಿಕರು, ರೈತರು ಸಂಘಟನೆಕಾರರು ರಸ್ತೆೆ ತಡೆ ಚಳವಳಿ ನಡೆಸಿದರು.
ಇಂದು ರಾಯಚೂರು ತಾಲೂಕಿನ ವಡ್ಲೂರು ಕ್ರಾಾಸ್,ಯರಗೇರಾ ಹಾಗೂ ಕುರ್ಡಿ ಕ್ರಾಾಸ್ನಲ್ಲಿ ಸಂಚಾರ ತಡೆದು ಪ್ರತಿಭಟಿಸಿ ಆಕ್ರೋೋಶ ವ್ಯಕ್ತಪಡಿಸಿದರು. ಇದರಿಂದ ಸ್ವಲ್ಪ ಹೊತ್ತು ಸಂಚಾರ ಅಸ್ತವ್ಯಸ್ಥವಾಯಿತು. ಸ್ಥಳಕ್ಕೆೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ನಾಡ ತಹಶೀಲ್ದಾಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರವು ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆದು ಅಸಂಘಟಿತ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಗೊಳಿಸಲು ಸರ್ಕಾರಿ ಸ್ವಾಾಮ್ಯದ ಕೈಗಾರಿಕೆಗಳ ಖಾಸಗಿಕರಣ ಕೈ ಬಿಡಬೇಕು, ವಿದ್ಯುತ್ ತಿದ್ದುಪಡಿ ಕಾಯ್ದೆೆ. ಭೂ ಸುಧಾರಣೆ ಕಾಯ್ದೆೆ ವಾಪಸ್ ಪಡೆಯಬೇಕು ಅದೇ ರೀತಿ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವದಿಯಲ್ಲಿ ರೈತ ವಿರೋಧಿ ಕೃಷಿ ಮತ್ತು ಎಪಿಎಂಸಿ ಕಾಯ್ದೆೆ ರದ್ದುಗೊಳಿಸಿ ರೈತ ಪರವಾದ ಭೂ ಸುಧಾರಣೆ ಕಾಯ್ದೆೆ ಜಾರಿಗೊಳಿಸಲು ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ಒತ್ತಾಾಯಿಸಿದರು.
ವಡ್ಲೂರ್ ಕ್ರಾಾಸ್ ಹತ್ತಿಿರ ನಡೆದ ಹೋರಾಟದ ನೇತೃತ್ವವನ್ನು ಸಂಯುಕ್ತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಜಿ.ವೀರೇಶ, ಜಿಂದಪ್ಪ ವಡ್ಲೂರು ಯರಗೇರಾದಲ್ಲಿ ನಡೆದ ಹೋರಾಟದ ನೇತೃತ್ವವನ್ನು ಎಐಸಿಸಿಟಿಯುನ ಅಜೀಜ್ ಜಾಗೀರದಾರ ಮತ್ತು ಕುರ್ಡಿ ಕ್ರಾಾಸ್ ಬಸವರಾಜ ನೇತೃತ್ವದಲ್ಲಿ ಬಸಲಿಂಗಪ್ಪ ನಗನೂರು, ರಂಗನಾಥ, ರಾಮಪ್ಪ ಹೆಗ್ಗಸನಹಳ್ಳಿಿ, ಸೂಗನಗೌಡ, ಕೆ.ಮಲ್ಲೇಶಪ್ಪ, ಹುಸೇನಪ್ಪ, ಕರವೇ ಅಧ್ಯಕ್ಷ ಸುರೇಶ, ದಲಿತ ಸೇನೆಯ ಅಂಜಿನಯ್ಯ, ರೈತ ಸೇನೆಯ ಸುಮಂಗಲ, ಜಿಲಾನಿಪಾಷ, ಅನ್ಿ ಅಬಕಾರಿ, ಭೀಮಣ್ಣ, ಮಹೇಶ ಇನ್ನಿಿತರರು ಭಾಗವಹಿಸಿದ್ದರು.
ಗ್ರಾಮಾಂತರ ಕ್ಷೇತ್ರದ ವಿವಿಧೆಡೆ ರಸ್ತೆ ತಡೆ, ಮುಷ್ಕರ

