ಸುದ್ದಿಮೂಲ ವಾರ್ತೆ ರಾಯಚೂರು, ೆ.12:
ರಾಜ್ಯ ಸರ್ಕಾರದ ಮುಂಬರುವ ಬಜೆಟ್ನಲ್ಲಿ ಕಲ್ಯಾಾಣ ಕರ್ನಾಟಕ ಭಾಗದ ಕೈಗಾರಿಕೆಗಳ ಸ್ಥಾಾಪಿಸಲು ಹೆಚ್ಚಿಿನ ಅನುದಾನ ಒದಗಿಸಬೇಕು ಎಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಸಿಯೇಶನ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿಿ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಈ ಭಾಗದಲ್ಲಿ ಕೈಗಾರಿಕೆಗಳಿಗೆ ಉತ್ತೇಜನವಿಲ್ಲದೆ ಉದ್ಯೋೋಗ ಸೃಷ್ಟಿಿ ಸಾಧ್ಯವಿಲ್ಲಘಿ. ಹೀಗಾಗಿ, ಕೆಕೆಆರ್ಡಿಬಿಗೆ 25 ಸಾವಿರ ಕೋಟಿ ಅನುದಾನ ನೀಡಿ ಅದರಲ್ಲಿ ಶೇ.25ರಷ್ಟು ಅನುದಾನ ಕೈಗಾರಿಕೆಗಳಿಗೆ ಮೀಸಲಿಡಲು ಆಗ್ರಹಿಸಿದರು.
ಮಹತ್ವಾಾಕಾಂಕ್ಷಿಿ ಜಿಲ್ಲೆೆಗಳಿಂದ ಗುರುತಿಸಿಕೊಂಡಿರುವ ರಾಯಚೂರು, ಯಾದಗಿರಿ ಜಿಲ್ಲೆೆಗಳಲ್ಲಿ ಹತ್ತಿಿ ಹೆಚ್ಚಿಿ ನ ಪ್ರಮಾಣದಲ್ಲಿ ಉತ್ಪಾಾದನೆಯಾಗುತ್ತಿಿದ್ದು ಮೆಗಾ ಜವಳಿ ಪಾರ್ಕ್ ಸ್ಥಾಾಪಿಸಲು ಕೇಂದ್ರದ ಮಲೆ ಒತ್ತಡ ಹಾಕಲಿ 42 ಜನ ಶಾಸಕರಿದ್ದು ಮುಖ್ಯಮಂತ್ರಿಿ ಮೇಲೆ ಒತ್ತಡ ಹಾಕಲು ಕೋರಿದ ಅವರು ಕೃಷಿ ಆಧಾರಿತ ಕೈಗಾರಿಕೆಗಳಿದ್ದು ಕಡಿಮೆ ದರದಲ್ಲಿ ಕೈಗಾರಿಕೆ ಸಾಲ ಯೋಜನೆ ರೂಪಿಸಬೇಕು ಎಂದು ಕೋರಿದರು.
ಮಹಿಳಾ ಉದ್ಯಮಿಗಳಿಗೆ ಈ ಹಿಂದೆ ಇದ್ದ ಶೇ.4ರ ಬಡ್ಡಿಿ ದರದಲ್ಲಿನ ಸಾಲ ಯೋಜನೆ 10 ಕೋಟಿಗೆ ಹೆಚ್ಚಿಿ ಸಿ ಮುಂದುವರಿಸಬೇಕು ವಿದ್ಯುತ್ ಬಿಲ್ ದರದಲ್ಲಿ ರಿಯಾಯಿತಿ ನೀಡಿ, ನಗರದಕ್ಕೆೆ ಮೂರನೇ ಹಂತದ ನೀರಿನ ಯೋಜನೆ ಮಂಜೂರು ಮಾಡಬೇಕು, ಸಿರಿಧಾನ್ಯ ಬೆಳೆಯಲು ರೈತರಿಗೆ ಮೂರು ಎಕರೆ ಭೂಮಿ ಮಂಜೂರು ಮಾಡಿ ಪ್ರೋೋತ್ಸಾಾಹಿಸಲು ಶಾಸಕರು ಒತ್ತಡ ಹಾಕಲಿ ಎಂದು ಕೋರಿದರು. ಈ ಬಗ್ಗೆೆ ಈಗಾಗಲೇ ಮುಖ್ಯಮಂತ್ರಿಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ನಾಗನಗೌಡ ಹರವಿ, ರಮೇಶ, ನಾರಾಯಣ ಸೇಠ್ ಇದ್ದರು.

