ಸುದ್ದಿಮೂಲ ವಾರ್ತೆ ರಾಯಚೂರು, ೆ.13:
ಮಾರಕ ಕ್ಯಾಾನ್ಸರ್ಗೆ ಚಿಕಿತ್ಸೆೆ ಗುಣಮಟ್ಟದ ಹೊಸ ತಂತ್ರಜ್ಞಾನದ ಮೂಲಕ ಬೆಂಗಳೂರಿನ ಯಲಹಂಕದ ಮಣಿಪಾಲ ಆಸ್ಪತ್ರೆೆ ಸಿದ್ದವಾಗಿದೆ ಎಂದು ಆಸ್ಪತ್ರೆೆಯ ಕ್ಯಾಾನ್ಸರ್ ವಿಭಾಗದ ಮುಖ್ಯ ಸಲಹೆಗಾರ ಡಾ.ವಿಕ್ರಂ ಮಯ್ಯಾಾ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಮಣಿಪಾಲ್ ಸಮೂಹದಿಂದ ಸ್ಥಾಾಪಿತ ಆಸ್ಪತ್ರೆೆಯಲ್ಲಿ ಅತ್ಯಾಾಧುನಿಕ ತಂತ್ರಜ್ಞಾನ ಮೂಲಕ ಎಲ್ಲ ಬಗೆಯ ಕ್ಯಾಾನ್ಸರ್ ರೋಗಗಳಿಗೆ ಪ್ರಾಾಥಮಿಕ ಹಂತದಲ್ಲಿ ಶಸ್ತ್ರ ಚಿಕಿತ್ಸೆೆಯೊಂದಿಗೆ ಕ್ಯಾಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆೆಗೆ ಪ್ರಮುಖ ಹೆಜ್ಜೆೆಯಾಗಿ, ಮಣಿಪಾಲ್ ಆಸ್ಪತ್ರೆೆಯಲ್ಲಿ ವಿಶ್ವದ ಕ್ಯಾಾನ್ಸರ್ ಆಸ್ಪತ್ರೆೆಯಲ್ಲಿ ಮೊದಲ ಬಾರಿಗೆ ಎಲೆಕ್ಟ್ರಾಾನಿಕ್ ಇವೋ ಡಿಜಿಟಲ್ ಲೀನಿಯರ್ ಆಕ್ಸಿಿಲೇಟರ್ ಯಂತ್ರ ಅಳವಡಿಸಲಾಗಿದೆ. ಕೃತಕ ಬುದ್ದಿಮತ್ತೆೆಯ ಮೂಲಕ ಐದು ವಿಶೇಷ ವಿಭಾಗಗಳು ಕಾರ್ಯ ನಿರ್ವಹಿಸುತ್ತವೆ ಎಂದರು.
ರೋಗಿಗಳಿಗೆ ಸಕಾಲಿಕ ತಪಾಸಣೆ, ಜೀವನಶೈಲಿ ಸಮಾಲೋಚನೆ ಮತ್ತು ಅಪಾಯದ ವೌಲ್ಯ ಮಾಪನದೊಂದಿಗೆ ಆರಂಭಿಕ ಹಂತದಲ್ಲಿ ಕ್ಯಾಾನ್ಸರ್ ಪತ್ತೆೆ ಹಚ್ಚಲಾಗುವುದು. ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಕ್ಯಾಾನ್ಸರ್ ರೋಗದ ಬಗ್ಗೆೆ ಜನರಲ್ಲಿ ಮೂಢನಂಬಿಕೆ ಇದ್ದು, ರೋಗದ ಬಗ್ಗೆೆ ಭಯ ಬೇಡ ಅತ್ಯಾಾಧುನಿಕ ತಂತ್ರಜ್ಞಾನ ಮತ್ತು ಬಹು ಶಿಸ್ತಿಿನ ವೈದ್ಯರ ತಂಡದೊಂದಿಗೆ ಎಲ್ಲ ಬಗೆಯ ಕ್ಯಾಾನ್ಸರ್ ನಿರ್ವಹಿಸಲಾಗುವುದು ಎಂದು ಹೇಳಿದರು.
ಒಂದೇ ರೀತಿಯ ಕ್ಯಾಾನ್ಸರ್ ರೋಗ ಇಬ್ಬರು ವ್ಯಕ್ತಿಿಯಲ್ಲಿ ಪತ್ತೆೆಯಾದರೆ ಚಿಕಿತ್ಸೆೆ ಮಾತ್ರ ಬೇರೆ ಬೇರೆಯಲ್ಲಿ ನೀಡುವ ಸಾಧ್ಯತೆ ದೆ ಎಂದರು. ಗುಟ್ಕಾಾ, ತಂಬಾಕು, ತಂಬಾಕು ಉತ್ಪನ್ನಗಳ ಸೇವನೆಯಿಂದ ಪುರುಷರಲ್ಲಿ ಪತ್ತೆೆಯಾದರೆ ಮಹಿಳೆಯರಲ್ಲಿ ಸ್ತನ ಕ್ಯಾಾನ್ಸರ್ ಕಾಣಿಸಿಕೊಳ್ಳುತ್ತಿಿದೆ. ಅಂಕಿ ಸಂಖ್ಯೆೆಗಳ ಪ್ರಕಾರ ಗ್ರಾಾಮೀಣ ಭಾಗದ ಜನರೇ ಹೆಚ್ಚು ಸಮಸ್ಯೆೆಗೆ ಒಳಗಾಗುತ್ತಿಿದ್ದಾರೆ ಇನ್ನೂ ಇತ್ತೀಚೆಗೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಾಗಿ ಕ್ಯಾಾನ್ಸರ್ ಕಾಣಿಸಿಕೊಳ್ಳುತ್ತಿಿದ್ದು, ಸ್ತನ ಹಾಗೂ ಗರ್ಭಕೋಶದ ಕ್ಯಾಾನ್ಸರ್ ಪ್ರಕರಣಗಳು ಹೆಚ್ಚಾಾಗಿವೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಡಾ. ಅರೋನ್ ರ್ನಾಂಡೀಸ್ ಇದ್ದರು.

