ಸುದ್ದಿಮೂಲ ವಾರ್ತೆ ರಾಯಚೂರು, ೆ.13:
ರಾಜ್ಯ ಸರ್ಕಾರದ ಮುಂಬರುವ ಬಜೆಟ್ನಲ್ಲಿ ರಾಯಚೂರು ಜಿಲ್ಲೆೆಯಲ್ಲಿ ಕೆಎಸ್ಆರ್ಪಿ ಪಡೆ ಸ್ಥಾಾಪಿಸಿ ಸಿಬ್ಬಂದಿಗೆ ಪದೋನ್ನತಿಗೆ ಕ್ರಮ ವಹಿಸಲಿ ಎಂದು ಅಖಿಲಾಂಡ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಿತಿಯ ವಿಭಾಗೀಯ ಅಧ್ಯಕ್ಷ ವೆಂಕಟೇಶ ನಾಯಕ ಅಸ್ಕಿಿಹಾಳ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಗಡಿಭಾಗದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಆಂಧ್ರ,ತೆಲಂಗಾಣ ಗಡಿಗೆ ಹೊಂದಿಕೊಂಡದ್ದು ಕಾನೂನು ಸುವ್ಯವಸ್ಥೆೆಗೆ ಅಗತ್ಯವಾಗಿ ವಿಶೇಷ ಭದ್ರತೆ ಒದಗಿಸಲು ಜೊತೆಗೆ ನಮ್ಮಲ್ಲಿ ಆರ್ಟಿಪಿಎಸ್, ವೈಟಿಪಿಎಸ್, ಹಟ್ಟಿಿ ಚಿನ್ನದ ಗಣಿ, ರಾಜಕೀಯ ಸಮಾವೇಶಗಳು, ಧಾರ್ಮಿಕ ಜಾತ್ರೆೆಗಳು, ಕೈಗಾರಿಕಾ ಘಟಕಗಳು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಕೆಎಸ್ಆರ್ಪಿ ಪಡೆಯ ಅವಶ್ಯಕತೆ ಹೆಚ್ಚಿಿದೆ ಎಂದರು.
ತುರ್ತು ಸಂದರ್ಭಗಳಲ್ಲಿ ದೂರದ ಜಿಲ್ಲೆೆಯಿಂದ ಇಲ್ಲಿಗೆ ಬರಲು ಹೆಚ್ಚು ಸಮಯ ಪಡೆಯುತ್ತಿಿದ್ದು ಸಕಾಲಕ್ಕೆೆ ಸೇವೆ ಸಿಗದು ಹೀಗಾಗಿ, ಈಗಾಗಲೇ ಕಲ್ಯಾಾಣ ಕರ್ನಾಟಕದ ಸಂಸದರು, 25 ಶಾಸಕರು ಒಟ್ಟಾಾಗಿ ಮನವಿ ಸಲ್ಲಿಸಿದ್ದರೂ ಹಣಕಾಸು ಇಲಾಖೆ ಪ್ರಸ್ತಾಾವನೆ ತಿರಸ್ಕರಿಸಿದ್ದು ಜನಾಭಿಪ್ರಾಾಯಕ್ಕೆೆ ಧಕ್ಕೆೆಯಾಗಿದೆ ಎಂದು ಆಪಾದಿಸಿದರು.
ಅಗತ್ಯ ಭೂಮಿ, ನೀರು ಎಲ್ಲವೂ ಸೌಕರ್ಯಗಳಿದ್ದು ಕೆಕೆಆರ್ಡಿಬಿ ಅಭಿವೃದ್ಧಿಿ ಮಂಡಳಿಯಿಂದ ಅನುದಾನ ಲಭ್ಯ ಇದ್ದರೂ ಸರ್ಕಾರ ತಡ ಮಾಡದೆ 13ನೇ ಕೆಎಸ್ಆರ್ಪಿ ಪಡೆ ಸ್ಥಾಾಪನೆಗೆ ಅನುಮತಿ ನೀಡಬೇಕು.ಅಲ್ಲದೆ, ಈಗಿರುವ ಸಿಬ್ಬಂದಿಗಳಿಗೆ ಪದೋನ್ನತಿ ನೀಡಲು ಅಗತ್ಯ ಕ್ರಮ ವಹಿಸಲು ಕೋರಿದ ಅವರು ಬಜೆಟ್ನಲ್ಲಿ ಇದಕ್ಕಾಾಗಿ ಪ್ರತ್ಯೇಕ ಅನುದಾನವನ್ನೂ ನೀಡಬೇಕು ತಮ್ಮ ಬೇಡಿಕೆ ಈಡೇರದಿದ್ದರೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸತ್ಯಾಾಗ್ರಹ ಮತ್ತು ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಹೊನ್ನಪ್ಪ, ನರಸಿಂಹಲು ಇತರರಿದ್ದರು.

