ಸುದ್ದಿಮೂಲ ವಾರ್ತೆ ಬೀದರ, ೆ.13:
ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಾಂಕ್ ಕಟ್ಟ ಬಾಕಿ ಸಾಲಗಾರರಿಗೆ ಸಾಲದಿಂದ ಮುಕ್ತಿಿ ಹೊಂದಲು ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದೆ.
ೆಬ್ರುವರಿ 15 ರಿಂದ ಮಾರ್ಚ್ 25 ರ ವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ.
ಸ್ವಸಹಾಯ ಗುಂಪಿನ ಸಾಲ, ಜಾಯಿಂಟ್ ಲಾಯಬಿಲಿಟಿ ಗ್ರುಪ್ ಸಾಲ, ವೈಯಕ್ತಿಿಕ ಸಾಲ, ವೇತನ ಸಾಲ, ಮಾಂಗಲ್ಯ ಭಾಗ್ಯ ಸಾಲ, ಸ್ವರಾಜ್ ಕ್ರೆೆಡಿಟ್ ಕಾರ್ಡ್ ಸಾಲ, ಪಿ.ಎಂ. ಸ್ವ ನಿಧಿ ಸಾಲ, ಬಡವರ ಬಂಧು ಸಾಲ, ಸಿ.ಸಿ. ಮತ್ತು ಓ.ಡಿ. ಸಾಲ ಪಡೆದು, ಮರು ಪಾವತಿ ಮಾಡದೆ, ಕಟ್ಟ ಬಾಕಿ ಆಗಿ ಸಾಲ ತೀರಿಸಲು ಆಗದವರಿಗೆ ಸಾಲದಿಂದ ಮುಕ್ತರಾಗಲು ಈ ಯೋಜನೆ ಸುವರ್ಣ ಅವಕಾಶ ಕಲ್ಪಿಿಸಲಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ಏಕಕಾಲಕ್ಕೆೆ ಇತ್ಯರ್ಥ (ಒನ್ ಟೈಮ್ ಸೆಟ್ಟಲಮೆಂಟ್) ಅಥವಾ ನಿರ್ದಿಷ್ಟ ಮೊತ್ತಕ್ಕೆೆ ರಾಜಿ ಆಗಿ ಸಾಲದಿಂದ ಮುಕ್ತಿಿ ಹೊಂದಬಹುದು ಎಂದು ಹೇಳಿದ್ದಾರೆ.
ಹೆಚ್ಚಿಿನ ಮಾಹಿತಿಗೆ ಬ್ಯಾಾಂಕ್ನ ಅಧಿಕಾರಿಗಳ ಮೊಬೈಲ್ ಸಂಖ್ಯೆೆ 9611494777, 9342244661, 9902660666ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

