ಸುದ್ದಿಮೂಲ ವಾರ್ತೆ ಹೊಸಪೇಟೆ (ಹಂಪಿ ಉತ್ಸವ), ೆ.13:
ವಿಶ್ವವಿಖ್ಯಾಾತ ಹಂಪಿಯ ಸಾಸುವೆ ಕಾಳು ಗಣಪತಿ ವೇದಿಕೆಯಲ್ಲಿ ವಿಜಯನಗರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾ ಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಹಮ್ಮಿಿಕೊಂಡಿದ್ದ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.
ಕಾರ್ಯಕ್ರಮಕ್ಕೆೆ ಹರಪನಹಳ್ಳಿಿ ತಹಶಿಲ್ದಾಾರ ಗಿರೀಶ್ ಬಾಬು ಅವರು ಚಾಲನೆ ನೀಡಿ ಈ ಬಾರಿಯ ವೇದಿಕೆಯಲ್ಲಿ ಒಟ್ಟು 39 ಕಲಾ ಕಾರ್ಯಕ್ರಮಗಳನ್ನು ಏರ್ಪಡಿಸ ಲಾಗಿತ್ತು. ನೆರೆದಿದ್ದ ಪ್ರೇೇಕ್ಷಕರಿಗೆ ಕಲೆಯ ರಸದೌತಣವನ್ನು ಉಣಬಡಿಸಿದ ಪ್ರಮು ಖ ಕಾರ್ಯಕ್ರಮಗಳೆಂದರೆ, ವಚನ ಗಾಯನ, ರಂಗಗೀತೆಗಳ ಗಾಯನ, ಜಾನಪದ ಗೀತೆ, ಹಿಂದೂಸ್ತಾಾನ ಗಾಯನ, ಭರತನಾಟ್ಯ, ಸುಗಮ ಸಂಗೀತ, ತಬಲಾ ವಾದನ, ಶಾಸೀಯ ನೃತ್ಯ, ನೃತ್ಯ ರೂಪಕ, ಬಯಲಾಟ ಪದಗಳು, ತತ್ವಪದ ಗಾಯನ, ವಿಶು ಕಲೆ ಪ್ರದರ್ಶನ, ಮಿಮಿಕ್ರಿಿ, ದಾಸರ ಪದಗಳ ಗಾಯನ, ಸಮೂಹ ನೃತ್ಯ ರೂಪಕ, ವಚನ ಸಂಗೀತ, ಚೌಡ್ಕಿಿ ಪದಗಳ ಗಾಯನ, ಇನ್ನೂ ಹಲವಾರು ತಂಡಗಳಿಂದ ಬಗೆ ಬಗೆಯ ಕಾರ್ಯಕ್ರಮಗಳ ನಡೆದವು. ಇದೇ ವೇಳೆ ಎಲ್ಲಾ ಕಲಾವಿದರಿಗೆ ಸ್ಮರಣಿಕೆ ಮತ್ತು ಪ್ರಶಸ್ತಿಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಉಪ ನಿರ್ದೇಶಕ ರವಿಕುಮಾರ್ ಸೇರಿದಂ ತೆ ಹಲವು ಗಣ್ಯರು, ಸಾರ್ವಜನಿಕರು ಭಾಗವಹಿಸಿದ್ದರು. ಬಸವರಾಜ ಅಮಾತಿ ಮತ್ತು ಶ್ವೇತಾ ಅಂಗಡಿ ಅವರು ಕಾರ್ಯಕ್ರಮ ನಿರೂಪಿಸಿದರು.

